ಆರ್​ಸಿಬಿ ಅಭಿಮಾನಿಗಳಿಗಾಗಿ ಸ್ಪೆಷಲ್ ಪೋಸ್ಟ್​ ಮಾಡಿದ ವಿರಾಟ್ ಕೊಹ್ಲಿ.. ಏನಂದ್ರು..?

author-image
Ganesh
Updated On
ಆರ್​ಸಿಬಿ ಅಭಿಮಾನಿಗಳಿಗಾಗಿ ಸ್ಪೆಷಲ್ ಪೋಸ್ಟ್​ ಮಾಡಿದ ವಿರಾಟ್ ಕೊಹ್ಲಿ.. ಏನಂದ್ರು..?
Advertisment
  • ಎಲಿಮಿನೇಟರ್ ಪಂದ್ಯ ಸೋತು ಟೂರ್ನಿಯಿಂದ ಹೊರಬಿದ್ದ RCB
  • ಸೋತು ಮೂರು ದಿನಗಳ ಬಳಿಕ ಅಭಿಮಾನಿಗಳಿಗಾಗಿ ವಿರಾಟ್ ಪೋಸ್ಟ್
  • ರಾಜಸ್ಥಾನ್ ರಾಯಲ್ಸ್​, ಹೈದರಾಬಾದ್ ನಡುವೆ ಇಂದು ಕ್ವಾಲಿಫೈಯರ್-2 ಪಂದ್ಯ

ಆರ್​ಸಿಬಿ ತಂಡದ ಹೀರೋ ಕಿಂಗ್ ವಿರಾಟ್ ಕೊಹ್ಲಿ ಅವರು ತಮ್ಮ ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಸೋತು ಹೊರಬಿದ್ದ ಮೂರು ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ‘ಸೋಲಿನಲ್ಲಿ ನೋವು ಇರುತ್ತದೆ, ಆದರೆ..’ RCB ಸೋತ ಬಗ್ಗೆ ಎಬಿಡಿ ಹೇಳಿದ್ದೇನು..?

ಇನ್​ಸ್ಟಾ ಗ್ರಾಮ್​ನಲ್ಲಿ ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ.. ಯಾವಾಗಲೂ ನಮ್ಮನ್ನು ಪ್ರೀತಿಸಿ, ಪ್ರಶಂಸಿಸುವ ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಈ ಬಾರಿ ಐಪಿಎಲ್​​ನಲ್ಲಿ ಆರ್​ಸಿಬಿ ಅದ್ಭುತ ಪ್ರದರ್ಶನ ನೀಡಿ ಪ್ಲೇ-ಆಫ್ ಪ್ರವೇಶ ಮಾಡಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇದು ಅಭಿಮಾನಿಗಳಿಗೆ ತುಂಬಾ ಬೇಸರ ಆಗಿದೆ. ಸತತ 16 ಐಪಿಎಲ್​ ಆಡಿದರೂ ಟ್ರೋಫಿ ಗೆಲ್ಲಲು ಆಗಲಿಲ್ಲ ಎಂಬ ಕೊರಗು, ಕಳಂಗ ಆರ್​​ಸಿಬಿಯದ್ದಾಗಿದೆ. ಮುಂದಿನ ವರ್ಷ ಟ್ರೋಫಿ ಎತ್ತುವ ಕನಸಿನೊಂದಿಗೆ ಈ ವರ್ಷದ ಟೂರ್ನಿಗೆ ಆರ್​ಸಿಬಿ ವಿದಾಯ ಹೇಳಿದೆ.

ಇದನ್ನೂ ಓದಿ:ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಆಘಾತ.. ದಾಂಪತ್ಯದಲ್ಲಿ ಬಿರುಕು..?

ಇನ್ನು ಈ ಬಾರಿಯ ಸೀಸನ್​​ನಲ್ಲಿ ಕೊಹ್ಲಿ ಅದ್ಭುತ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಮಾಡಿದ್ದಾರೆ. ಒಟ್ಟು 15 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ.. 741 ರನ್​ ಗಳಿಸಿದ್ದಾರೆ. ಒಂದು ಶತಕ, ಐದು ಅರ್ಧ ಶತಕ ಇದರಲ್ಲಿ ಸೇರಿವೆ.

ಇದನ್ನೂ ಓದಿ:ಕಪ್ ಗೆಲ್ಲಬೇಕು ಅಂದರೆ ಕೊಹ್ಲಿ RCB ತೊರೆಯಬೇಕು -ಕಿಡಿ ಹೊತ್ತಿಸಿದ ಮಾಜಿ ಆಟಗಾರ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment