/newsfirstlive-kannada/media/post_attachments/wp-content/uploads/2025/07/KOHLI-10.jpg)
ಟೆಸ್ಟ್ ಹಾಗೂ ಟಿ20 ಫಾರ್ಮೆಟ್ಗೆ ವಿರಾಟ್ ಕೊಹ್ಲಿ ಗುಡ್ ಬೈ ಹೇಳಿದ್ದಾಯ್ತು. ಕ್ರಿಕೆಟ್ ಸಾಮ್ರಾಜ್ಯವನ್ನ ದಶಕಕ್ಕೂ ಕಾಲ ಆಳಿದ ಕೊಹ್ಲಿ ಇದೀಗ ಏಕದಿನ ಫಾರ್ಮೆಟ್ಗೆ ಮಾತ್ರ ಸೀಮಿತವಾಗಿದ್ದಾರೆ. ಸಾಕಾಯ್ತು ಎಂದು ಹೇಳಿ ಸ್ವತಃ ಕೊಹ್ಲಿಯೇ ಸಿಂಹಾಸನವನ್ನ ತ್ಯಜಿಸಿ ತಿಂಗಳುಗಳೇ ಕಳೆದಿವೆ. ಆದ್ರೆ, ಕ್ರಿಕೆಟ್ ಲೋಕ ಮಾತ್ರ, ಕೊಹ್ಲಿಯೇ ಕಿಂಗ್ ಎಂದು ಮತ್ತೆ ಮತ್ತೆ ಹೇಳ್ತಿದೆ.
ಕ್ರಿಕೆಟ್ ದುನಿಯಾದಲ್ಲಿ ಹಲವು ತರದ ಬ್ಯಾಟ್ಸ್ಮನ್ಗಳಿರ್ತಾರೆ. ಕೆಲವ್ರು ತವರಿನಲ್ಲಿ ಮಾತ್ರ ಹುಲಿಗಳು. ತಮ್ಮ ದೇಶದಲ್ಲಿ ಮಾತ್ರ ಅಬ್ಬರಿಸ್ತಾರೆ. ವಿದೇಶದಲ್ಲಿ ಮಕಾಡೆ ಮಲಗ್ತಾರೆ. ಇನ್ನು, ಕೆಲವರು ಬ್ಯಾಟಿಂಗ್ಗೆ ಅನುಕೂಲವಾಗೋ ಫ್ಲಾಟ್ ಟ್ರ್ಯಾಕ್ಗಳಲ್ಲಿ ಮಾತ್ರ ಆರ್ಭಟಿಸ್ತಾರೆ. ಇನ್ನು ಕೆಲವ್ರ ಅಬ್ಬರ ಕೆಲವೇ ಫಾರ್ಮೆಟ್ಗೆ ಮಾತ್ರ ಸೀಮಿತ. ಆದ್ರೆ, ದೇಶ, ವಿದೇಶ, ಫ್ಲ್ಯಾಟ್ ಟ್ರ್ಯಾಕ್, ಗ್ರೀನ್ ಟ್ರ್ಯಾಕ್, ಬೌನ್ಸಿ ಟ್ರ್ಯಾಕ್, ಜಾಗ ಯಾವುದೇ ಇರಲಿ, ಎದುರಾಳಿ ಯಾರೇ ಇರಲಿ ಘರ್ಜಿಸೋ ಸಿಂಗಲ್ ಶೇರ್ ಕೆಲವ್ರು ಮಾತ್ರ. ಅವರಿಗೆ ಕ್ರಿಕೆಟ್ ಬೇಡ ಅಂದ್ರೂ, ಕ್ರಿಕೆಟ್ ಅವರನ್ನ ಬಿಟ್ಟು ಕೊಡಲ್ಲ. ಅಂಥ ಕೆಲವೇ ಕೆಲವು ಡಾನ್ಗಳ ಪೈಕಿ ಒಬ್ಬ ಕಿಂಗ್ ಕೊಹ್ಲಿ.
T20Iನಲ್ಲಿ ಹೊಸ ದಾಖಲೆ ಬರೆದ ವಿರಾಟ್.!
2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಶಾಕ್ ಕೊಟ್ಟ ಕೊಹ್ಲಿ ಚುಟುಕು ಫಾರ್ಮೆಟ್ಗೆ ಗುಡ್ ಬೈ ಹೇಳಿದ್ರು. ಕೊಹ್ಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿ ವರ್ಷವೇ ಆಯ್ತು. ಇದೀಗ ಹೊಸ ಅಪ್ಡೇಟ್ ಹೊರಬಿದ್ದಿದ್ದು, ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಐಸಿಸಿ 2024ರ ಅಪ್ಡೇಟೆಡ್ ಱಂಕಿಂಗ್ ಪಟ್ಟಿಯನ್ನ ರಿಲೀಸ್ ಮಾಡಿದೆ. ಇದರಲ್ಲಿ 909ರ ರೇಟಿಂಗ್ನೊಂದಿಗೆ ವಿರಾಟ್ ಟಿ20 ಫಾರ್ಮೆಟ್ನಲ್ಲಿ ಕರಿಯರ್ನ ಬೆಸ್ಟ್ ರೇಟಿಂಗ್ಸ್ ಸಂಪಾದಿಸಿದ್ದಾರೆ.
ಸುದೀರ್ಘ ಕಾಲ T20 ಫಾರ್ಮೆಟ್ಗೆ ಕೊಹ್ಲಿಯೇ ರಾಜ.!
ಈವರೆಗೆ ಟಿ20 ಫಾರ್ಮೆಟ್ನಲ್ಲಿ ಕೊಹ್ಲಿಯ ಹೈಯೆಸ್ಟ್ ರೇಟಿಂಗ್ಸ್ 897 ಇತ್ತು. ಇದೀಗ 909ಕ್ಕೆ ಏರಿಕೆಯಾಗಿದೆ. ಇಷ್ಟೇ ಅಲ್ಲ, ಇದ್ರೊಂದಿಗೆ ಟಿ20 ಫಾರ್ಮೆಟ್ನಲ್ಲಿ ಕೊಹ್ಲಿ ಸತತ 1202 ದಿನಗಳ ಕಾಲ ನಂಬರ್ ಒನ್ ಸ್ಥಾನದಲ್ಲಿ ಮೆರೆದಾಡಿದ ಬ್ಯಾಟ್ಸ್ಮನ್ ಎನಿಸಿದ್ದಾರೆ. ಕೊಹ್ಲಿಯಷ್ಟು ಸುದೀರ್ಘ ಕಾಲ ನಂಬರ್ 1 ಸ್ಥಾನವನ್ನ ಆಳಿದ ಮತ್ತೊಬ್ಬ ಬ್ಯಾಟ್ಸ್ಮನ್ ಇಲ್ಲ.
ಟೆಸ್ಟ್, ಏಕದಿನ, ಟಿ20.. ಕೊಹ್ಲಿ ರಿಯಲ್ ಕಿಂಗ್.!
ಟಿ20 ಫಾರ್ಮೆಟ್ನಲ್ಲಿ 900ಕ್ಕೂ ಅಧಿಕ ರೇಟಿಂಗ್ ಸಂಪಾದಿಸಿದ ಕೊಹ್ಲಿ, ಕ್ರಿಕೆಟ್ ಜಗತ್ತಿಗೆ ನಾನೇ ಕಿಂಗ್ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಟೆಸ್ಟ್, ಏಕದಿನ, ಟಿ20 ಮೂರೂ ಫಾರ್ಮೆಟ್ನಲ್ಲಿ 900ಕ್ಕೂ ಅಧಿಕ ರೇಟಿಂಗ್ಸ್ ಹೊಂದಿದ ಏಕೈಕ ಬ್ಯಾಟ್ಸ್ಮನ್ ಆಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ. ಸಚಿನ್ ತೆಂಡುಲ್ಕರ್, ವಿವ್ ರಿಚರ್ಡ್ಸ್ ಸೇರಿದಂತೆ ಯಾವ ದಿಗ್ಗಜನೂ ಮಾಡದ ಸಾಧನೆಯನ್ನ ಕೊಹ್ಲಿ ಮಾಡಿದ್ದಾರೆ.
ಕ್ರಿಕೆಟ್ಗೆ ಕೊಹ್ಲಿ ರಾಜ.. ಆಲ್ಫಾರ್ಮೆಟ್ ಗ್ರೇಟ್.!
ಇದೀಗ ಟಿ20 ಫಾರ್ಮೆಟ್ನಲ್ಲಿ ಕೊಹ್ಲಿಯ ಕರಿಯರ್ನ ಬೆಸ್ಟ್ ರೇಟಿಂಗ್ಸ್ 909 ಆಗಿದ್ರೆ, ಟೆಸ್ಟ್ ಫಾರ್ಮೆಟ್ನ ಬೆಸ್ಟ್ ರೇಟಿಂಗ್ಸ್ 937 ಆಗಿದೆ. ಇನ್ನು, ಏಕದಿನ ಫಾರ್ಮೆಟ್ನಲ್ಲೂ 909 ರೇಟಿಂಗ್ ಹೊಂದಿದ್ದು ಕರಿಯರ್ನ ಬೆಸ್ಟ್ ರೇಟಿಂಗ್ ಪಾಯಿಂಟ್ಸ್ ಆಗಿದೆ. ದಿಗ್ಗಜ ಸಚಿನ್ ತೆಂಡುಲ್ಕರ್ಗೂ ಒಂದೇ ಒಂದು ಫಾರ್ಮೆಟ್ನಲ್ಲಿ ಕೂಡ 900+ ರೇಟಿಂಗ್ ಹೊಂದಿರೋಕೆ ಸಾಧ್ಯವಾಗಿರಲಿಲ್ಲ. ಕೊಹ್ಲಿಯನ್ನ ಆಲ್ ಫಾರ್ಮೆಟ್ನ ಗ್ರೇಟೆಸ್ಟ್ ಪ್ಲೇಯರ್ ಅನ್ನೋದಕ್ಕೆ ಎಲ್ಲಾ ಫಾರ್ಮೆಟ್ನಲ್ಲಿ ಮಾಡಿರೋ ಈ ಸಾಧನೆ ಸಾಕಲ್ವಾ.?
ಮೂರು ಫಾರ್ಮೆಟ್ನಲ್ಲಿ ನಂಬರ್ ಒನ್ ಆಗಿ ಮರೆದಾಟ
2018ರಲ್ಲಿ ಕೊಹ್ಲಿ ಪೀಕ್ ಫಾರ್ಮ್ನಲ್ಲಿದ್ರು. ಆಗ ಮೂರೂ ಫಾರ್ಮೆಟ್ನಲ್ಲಿ ಕೊಹ್ಲಿ ಅಕ್ಷರಶಃ ದರ್ಬಾರ್ ನಡೆಸಿದ್ರು. ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ರನ್ಮಷೀನ್ ಕೊಹ್ಲಿ, ಸುಲಭಕ್ಕೆ ರನ್ ಭೇಟೆಯಾಡ್ತಿದ್ರು. ಏಕದಿನ, ಟೆಸ್ಟ್, ಟಿ20 ಏಕ ಕಾಲಕ್ಕೆ ಮೂರು ಮಾದರಿಯ ನಂಬರ್ 1 ಬ್ಯಾಟ್ಸ್ಮನ್ ಆಗಿ ಮರೆದಾಡಿದ್ರು. ಕ್ರಿಕೆಟ್‌ನ ಕಿಂಗ್ ಅನ್ನೋದಕ್ಕೆ ಇನ್ನು ಏನಾದ್ರೂ ಬೇಕಾ.?
ಇದನ್ನೂ ಓದಿ:ನಾಗರ ಪಂಚಮಿ ವಿಶೇಷ.. ಈ ಪ್ರದೇಶದಲ್ಲಿ ಜೀವಂತ ನಾಗರ ಹಾವುಗಳನ್ನು ಹಿಡಿದು ಏನ್ ಮಾಡ್ತಾರೆ ಗೊತ್ತಾ?
ಟಿ20 ಹಾಗೂ ಏಕದಿನದಲ್ಲಿ ಅತಿ ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಂಬರ್ 3 ಸ್ಥಾನದಲ್ಲಿದ್ದಾರೆ. ಆದ್ರೆ, ಟೆಸ್ಟ್ ಫಾರ್ಮೆಟ್ನಲ್ಲಿ 10 ಸಾವಿರ ರನ್ಗಳಿಸೋಕೆ ಮುನ್ನವೇ ರಿಟೈರ್ ಆಗಿದ್ದಾರೆ. ಆದ್ರೆ, ಆಡಿದ ಅಷ್ಟರೊಳಗೆ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಐಸಿಸಿ ಪ್ರಕಟಿಸಿದ ದಶಕದ ಟೆಸ್ಟ್ ತಂಡಕ್ಕೆ ಕೊಹ್ಲಿಯೇ ಕ್ಯಾಪ್ಟನ್ ಆಗಿದ್ರು. ದಶಕದ ಏಕದಿನ ತಂಡ, T20 ಟೀಮ್ನಲ್ಲಿ ಸ್ಥಾನ ಪಡೆದಿದ್ರು. ಕನ್ಸಿಸ್ಟೆಂಟ್ ಪರ್ಫಾಮೆನ್ಸ್ನಿಂದ ಐಸಿಸಿ ನೀಡೋ ದಶಕದ ಕ್ರಿಕೆಟಿಗ ಅನ್ನೋ ಶ್ರೇಷ್ಠ ಗೌರವವನ್ನೂ ವಿರಾಟ್ ಕೊಹ್ಲಿ ತನ್ನದಾಗಿಸಿಕೊಂಡಿದ್ರು.
ಕ್ರಿಕೆಟ್ನಿಂದ ದೂರಾಗಲು ನಿರ್ಧರಿಸಿ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ರೂ, ಕೊಹ್ಲಿ ದಾಖಲೆಯ ಓಟ ಮಾತ್ರ ನಿಂತಿಲ್ಲ. ಕೆಲ ದಿನಗಳ ಹಿಂದಷ್ಟೆ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಕೊಹ್ಲಿ ಗ್ರೆಟೆಸ್ಟ್ ಆಲ್ ಫಾರ್ಮೆಟ್ ಪ್ಲೇಯರ್ ಎಂದು ಹೇಳಿದರು. ಮಾಡಿದ ಸಾಧನೆ, ದಾಖಲೆಗಳೇ ಇದು ಸಾರ್ವಕಾಲಿಕ ಸತ್ಯ ಎಂದು ಹೇಳ್ತಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ