/newsfirstlive-kannada/media/post_attachments/wp-content/uploads/2024/03/Virat-Kohli_RCB.jpg)
ವಿರಾಟ್ ಕೊಹ್ಲಿ ಆರ್ಸಿಬಿಗೆ ನಾಯಕರಾಗಿ 143 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಆ ಅವಧಿಯಲ್ಲಿ ಆರ್‌ಸಿಬಿ 66 ಪಂದ್ಯ ಗೆದ್ದಿದೆ. 2016ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಫೈನಲ್ ಪ್ರವೇಶಿಸಿತ್ತು. 2021ರಲ್ಲಿ ಆರ್‌ಸಿಬಿ ನಾಯಕತ್ವದಿಂದ ಕೊಹ್ಲಿ ಕೆಳಗೆ ಇಳಿದರು. ಈ ಬಾರಿಯ ಐಪಿಎಲ್ನಲ್ಲಿ ಮತ್ತೆ ವಿರಾಟ್ ಕ್ಯಾಪ್ಟನ್ ಆಗಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಉದಯಗಿರಿ ಠಾಣೆಗೆ ಪ್ರತಾಪ್ ಸಿಂಹ ಎಂಟ್ರಿ.. ಗಲಾಟೆ ಬಗ್ಗೆ ಎಡಿಜಿಪಿ ಹಿತೇಂದ್ರ ಕೊಟ್ಟ ಮಾಹಿತಿ ಏನು?
ಆರ್ಸಿಬಿಗೆ ನಾಯಕ ಯಾರು ಅನ್ನೋ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಭಾರತದ ಮಾಜಿ ಆಟಗಾರ ಸುರೇಶ್ ರೈನಾ, ವಿರಾಟ್ ಕೊಹ್ಲಿಯೇ ಮತ್ತೆ ನಾಯಕರಾಗಲಿದ್ದಾರೆ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸುರೇಶ್ ರೈನಾ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ರೈನಾ ಸಂಭಾಷಣೆ ನಡೆಸಿದ್ದಾರೆ. ಇಂಗ್ಲೆಂಡ್ ಆಟಗಾರ ಆರ್‌ಸಿಬಿ ನಾಯಕನ ಕುಶಲ ವಿಚಾರಿಸುತ್ತಿದ್ದಾರೆ ಎಂದು ಕಾಮೆಂಟರಿಯಲ್ಲಿ ಹೇಳಿದ್ದಾರೆ.
ಅಂದ್ಹಾಗೆ ರೈನಾ ಮತ್ತು ಕೊಹ್ಲಿ ಉತ್ತಮ ಸಂಬಂಧ ಹೊಂದಿದ್ದಾರೆ. ಹಾಗಾಗಿ ಕೊಹ್ಲಿ ಆರ್‌ಸಿಬಿಯ ನಾಯಕರಾಗುತ್ತಾರೆಂದು ತಿಳಿದಿದೆ. ಅದೇ ಕಾರಣಕ್ಕೆ ರೈನಾ, ಸಾರ್ವಜನಿಕವಾಗಿ ಕೊಹ್ಲಿ ಆರ್‌ಸಿಬಿ ನಾಯಕ ಎಂದು ಬಣ್ಣಿಸಿದ್ದಾರೆ. ರೈನಾ ಪ್ರಕಾರ, ಐಪಿಎಲ್ 2025ರಲ್ಲಿ ಕೊಹ್ಲಿ ಆರ್‌ಸಿಬಿಯನ್ನು ಮುನ್ನಡೆಸುವುದು ಖಚಿತ. 9 ವರ್ಷಗಳ ಕಾಲ ಕೊಹ್ಲಿ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದಾರೆ.
ಇದನ್ನೂ ಓದಿ: VIDEO: ತುಂಬಿ ತುಳುಕುತ್ತಿರುವ ರೈಲುಗಳು.. ಪ್ರಯಾಗ್‌ರಾಜ್‌ಗೆ ತೆರಳುವ ರೈಲಿನ ಕಿಟಕಿ ಗಾಜು ಪುಡಿ, ಪುಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ