/newsfirstlive-kannada/media/post_attachments/wp-content/uploads/2024/12/KOHLI-9.jpg)
ಮೆಲ್ಬೋರ್ನ್ ಟೆಸ್ಟ್​ನಲ್ಲಿ ಕೊಹ್ಲಿ ಮತ್ತು 19 ವರ್ಷದ ಸ್ಯಾಮ್ ಕಾನ್​​ಸ್ಟಸ್ ನಡುವೆ ಘರ್ಷಣೆ ಆಗಿದೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.
ಘರ್ಷಣೆ ವೇಳೆ ಇಬ್ಬರ ಮಧ್ಯೆ ತೀವ್ರ ವಾಗ್ಯುದ್ಧ ನಡೆದಿದ್ದು, ಅಂಪೈರ್‌ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಆದರೆ ಕೊಹ್ಲಿಗೆ ಐಸಿಸಿ ಶಿಕ್ಷೆ ವಿಧಿಸುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಆಗಿದ್ದೇನು..?
ಆಸ್ಟ್ರೇಲಿಯಾ ಪರ ಡೆಬ್ಯು ಮಾಡಿದ 19 ವರ್ಷದ ಯುವ ಬ್ಯಾಟ್ಸರ್​ ಸ್ಯಾಮ್ ಕಾನ್​​ಸ್ಟಸ್ ಅದ್ಭುತ ಬ್ಯಾಟಿಂಗ್ ನಡೆಸಿದರು. ಸಿರಾಜ್ ಹಾಗೂ ಬುಮ್ರಾ ಬೌಲಿಂಗ್​​ಗೆ ಬೌಂಡರಿ, ಸಿಕ್ಸರ್​ಗಳನ್ನ ಚಚ್ಚಿ ಭಾರತಕ್ಕೆ ಆಘಾತ ನೀಡಿದರು. 52 ಬಾಲ್​ನಲ್ಲಿ ಅರ್ಧಶತಕ ಬಾರಿಸಿದ ಸ್ಯಾಮ್​​, 2 ಸಿಕ್ಸರ್, 6 ಬೌಂಡರಿಯೊಂದಿಗೆ 65 ಬಾಲ್​ನಲ್ಲಿ 60 ರನ್​ಗಳಿಸಿದರು.
ಇದನ್ನೂ ಓದಿ:ಪುಷ್ಪಾ 2 ಸಿನಿಮಾದ ದಾಖಲೆಯನ್ನು ಮುರಿಯಲಿದೆಯಾ ಈ ಕನ್ನಡ ಸಿನಿಮಾ? ನಿರೀಕ್ಷೆಗಳು ಹೇಗಿವೆ ಗೊತ್ತಾ?
ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡ್ತಿದ್ದರು. ಬುಮ್ರಾ ಬೌಲಿಂಗ್ ವೇಳೆ, ಇಬ್ಬರು ಮುಖಾಮುಖಿಯಾದರು. ಕೊಹ್ಲಿ ಬಾಲ್ ಕ್ಲಿಯರ್​ ಮಾಡಿ ಕೀಪರ್​ ಪಂತ್ ಕಡೆ ಬರ್ತಿದ್ದಾಗ ಸ್ಯಾಮ್​​ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೋಪಿಸಿಕೊಂಡ ಸ್ಯಾಮ್ ವಿರಾಟ್ ಕೊಹ್ಲಿಯನ್ನೇ ದಿಟ್ಟಿಸಿ ನೋಡಿದ್ದಾರೆ. ಆಗ ಕೊಹ್ಲಿ ಕೂಡ ಸ್ಯಾಮ್​​ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಕೊನೆಗೆ ಆಸಿಸ್​ ಬ್ಯಾಟರ್ ಖವಾಜ್ ಹಾಗೂ ಅಂಪೈರ್​​ಗಳು ಬಂದು ಸಮಾಧಾನ ಮಾಡಿದ್ದಾರೆ.
ನಿಯಮ ಏನು ಹೇಳ್ತದೆ..?
ಐಸಿಸಿ ರೂಲ್ಸ್ ಆರ್ಟಿಕಲ್ 2.1 ಪ್ರಕಾರ, ಯಾವುದೇ ಆಟಗಾರ ತನ್ನ ಸಹ ಆಟಗಾರ, ಎದುರಾಳಿ, ಆಟಗಾರನ ಸಹಾಯಕ್ಕೆ ಇರುವ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಅಥವಾ ಮೈದಾನದಲ್ಲಿ ಯಾವುದೇ ಇತರೆ ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತಿಸುವಂತಿಲ್ಲ. ಅದರಲ್ಲೂ ದೈಹಿಕವಾಗಿ ಟಚ್ ಮಾಡುವ ಹಾಗಿಲ್ಲ. ಒಂದು ವೇಳೆ ದೈಹಿಕವಾಗಿ ಟಚ್ ಮಾಡಿದರೆ ಅಥವಾ ನಿಂದಿಸಿದರೆ ಶಿಕ್ಷೆ ವಿಧಿಸುವ ಅವಕಾಶ ಇದೆ.
ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಇತಿಹಾಸವನ್ನು ಅವಲೋಕಿಸಿದರೆ ಕೊಹ್ಲಿಗೆ ಒಂದು ಪಂದ್ಯದ ನಿಷೇಧ ಅಥವಾ ಅಮಾನತಿನಂತಹ ಯಾವುದೇ ಶಿಕ್ಷೆ ಆವುದಿಲ್ಲ. ಮ್ಯಾಚ್ ರೆಫರಿ ಅವರ ಪಂದ್ಯ ಶುಲ್ಕವನ್ನು ಕಡಿತಗೊಳಿಸಬಹುದು. ಅಥವಾ ಶಿಕ್ಷೆಯಾಗಿ ದೋಷಪೂರಿತ ಅಂಕಗಳನ್ನು ನೀಡಬಹುದು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us