/newsfirstlive-kannada/media/post_attachments/wp-content/uploads/2025/04/VIRAT_KOHLI.jpg)
ಆಸ್ಟ್ರೇಲಿಯಾದ ಜನಪ್ರಿಯ ಕ್ರಿಕೆಟ್ ಲೀಗ್ ಎಂದರೆ ಅದು ಬಿಗ್ಬ್ಯಾಷ್ ಲೀಗ್ ಆಗಿದೆ. ಭಾರತದಲ್ಲಿ ಐಪಿಎಲ್ ಲೀಗ್ ಹೇಗೋ ಆಸಿಸ್ನಲ್ಲಿ ಈ ಬಿಗ್ಬ್ಯಾಷ್ ಲೀಗ್ ಸಖತ್ ಫೇಮಸ್. ಇದರಲ್ಲಿ ಕೇವಲ ಹೊಡಿಬಡಿ ಅಷ್ಟೇ. ನಿಧಾನವಾಗಿ ಆಡುವವರಿಗೆ ನೋ ಚಾನ್ಸ್. ಇಂತಹ ಪ್ರತಿಷ್ಠಿತ ಲೀಗ್ನ ಎರಡು ಸೀಸನ್ಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಗ್ಬ್ಯಾಷ್ ಲೀಗ್ನಲ್ಲಿ ಒಂದು ಫೇವರಿಟ್ ತಂಡವಾಗಿರುವ, ಮೂರು ಬಾರಿ ಟ್ರೋಫಿ ಗೆದ್ದಿರುವ ಸಿಡ್ನಿ ಸಿಕ್ಸರ್ಸ್ ತಂಡದ ಪರವಾಗಿ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರು ಆಡಲಿದ್ದಾರೆ. ಈ ಕುರಿತು ಸ್ವತಹ ಸಿಡ್ನಿ ಸಿಕ್ಸರ್ಸ್ ತಂಡ ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಅವರ ಫೋಟೋ ಹಾಕಿ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದೆ.
ಇದನ್ನೂ ಓದಿ:ಕ್ಯಾಪ್ಟನ್ ಆದ ಮೇಲೆ ರಿಷಭ್ ಪಂತ್ ಬ್ಯಾಟಿಂಗ್ ಖದರ್ ಮಾಯ.. ಫ್ರಾಂಚೈಸಿಯಲ್ಲಿ ಏನಾಗ್ತಿದೆ?
ಈ ಪೋಸ್ಟ್ನಲ್ಲಿ ಕಿಂಗ್ ಕೊಹ್ಲಿ ಅವರು ಮುಂದಿನ ಎರಡು ಸೀಸನ್ಗಳಲ್ಲಿ ಅಧಿಕೃತವಾಗಿ ಸಿಡ್ನಿ ಸಿಕ್ಸರ್ ಪರವಾಗಿ ಆಡಲಿದ್ದಾರೆ ಎಂದು ಬರೆಯಲಾಗಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಫೋಟೋವನ್ನು ಕೂಡ ಟ್ಯಾಗ್ ಮಾಡಲಾಗಿದೆ. ಏಪ್ರಿಲ್ 1 ರಂದು ಸಿಡ್ನಿ ಸಿಕ್ಸರ್ಸ್, ಸ್ಟಾರ್ ಬ್ಯಾಟರ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದೆ.
ಆದರೆ ಬಿಸಿಸಿಐ ನಿಯಮದಂತೆ ಟೀಮ್ ಇಂಡಿಯಾದ ಯಾವುದೇ ಪ್ಲೇಯರ್ ಬಿಬಿಎಲ್ನಲ್ಲಿ ಆಡಲು ಅವಕಾಶ ಇಲ್ಲ. ಏಕೆಂದರೆ ಬಿಸಿಸಿಐ ಕಠಿಣ ನಿಯಮ ಈ ರೀತಿ ಇದೆ. ಭಾರತದ ಯಾವುದೇ ಕ್ರಿಕೆಟ್ ಪ್ಲೇಯರ್, ಅಂತರರಾಷ್ಟ್ರೀಯ ಕ್ರಿಕೆಟ್ ಜೊತೆಗೆ ದೇಶೀಯ ಕ್ರಿಕೆಟ್‌ನಿಂದ ನಿವೃತ್ತ ಆಗುವವರೆಗೆ ಬಿಬಿಎಲ್‌ನಂಥ ವಿದೇಶಿ ಲೀಗ್‌ಗಳಲ್ಲಿ ಆಡುವಂತಿಲ್ಲ. ಬಿಬಿಎಲ್ ಲೀಗ್ನ ಪ್ರಮುಖ ತಂಡವಾಗಿರುವ ಸಿಡ್ನಿ ಸಿಕ್ಸರ್ಸ್ ಮಾಡಿರುವ ಸೋಶಿಯಲ್ ಮೀಡಿಯಾ ಪೋಸ್ಟ್ ಹಿಂದೆ ಒಂದು ಒಳ್ಳೆಯ ತಮಾಷೆ ಇದೆ. ಅದು ಏನೆಂದರೆ ಇಂದು ಏಪ್ರಿಲ್ 1 ಆಗಿದ್ದರಿಂದ ಎಲ್ಲರನ್ನು ಏಪ್ರಿಲ್ ಫೂಲ್ ಮಾಡಲು ಈ ರೀತಿಯಾಗಿ ಮಾಡಿದೆ ಅಷ್ಟೇ.
King Kohli 🤩
Virat Kohli is officially a Sixer for the next TWO seasons! ✍️ #LIKEASIXERpic.twitter.com/TE89D4Ar6l
— Sydney Sixers (@SixersBBL) March 31, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ