ಇಂದು ಫ್ಯಾನ್ಸ್​ಗೆ ಸ್ಪೆಷಲ್ ಗಿಫ್ಟ್​ ಕೊಡ್ತಾರಾ ಕಿಂಗ್​ ಕೊಹ್ಲಿ.. ವಿರಾಟ್​ನ ಆ ಉಡುಗೊರೆ ಏನು?

author-image
Bheemappa
Updated On
ಇಂದು ಫ್ಯಾನ್ಸ್​ಗೆ ಸ್ಪೆಷಲ್ ಗಿಫ್ಟ್​ ಕೊಡ್ತಾರಾ ಕಿಂಗ್​ ಕೊಹ್ಲಿ.. ವಿರಾಟ್​ನ ಆ ಉಡುಗೊರೆ ಏನು?
Advertisment
  • ವರ್ಷದಲ್ಲಿ ಕೆಲವೇ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ತಾರೆ
  • ಐಪಿಎಲ್​​ ಸೆಕೆಂಡ್​ ಹಾಫ್​​ನಲ್ಲಿ ಕಾಣಿಸ್ತಾರಾ ಹೊಸ ವಿರಾಟ್ ಕೊಹ್ಲಿ?
  • ಮೈದಾನದಿಂದ ಸುದೀರ್ಘ ಕಾಲ ದೂರ ಉಳಿಯುವ ವಿರಾಟ್​ ಕೊಹ್ಲಿ

ಟೆಸ್ಟ್​​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಮೊದಲ ಬಾರಿ ಅಭಿಮಾನಿಗಳಿಗೆ ದರ್ಶನ ಕೊಡಲು ವಿರಾಟ್​ ಕೊಹ್ಲಿ ಸಜ್ಜಾಗಿದ್ದಾರೆ. ಐಪಿಎಲ್​ ಸೆಕೆಂಡ್​​ ಹಾಫ್​ ಆಡಲು ಕೊಹ್ಲಿ ರೆಡಿಯಾಗಿದ್ದು, ಅಭಿಮಾನಿಗಳಿಗೆ ಆಟದಿಂದಲೇ ಸ್ಪೆಷಲ್​ ಗಿಫ್ಟ್​​ ಕೊಡೋಕೆ ಪ್ಲಾನ್​ ರೂಪಿಸಿದ್ದಾರೆ. ಕೊಹ್ಲಿಯ ಆ ಪ್ಲಾನ್​​ ಏನು?. ಉಳಿದ ಪಂದ್ಯಗಳಲ್ಲಿ ಹೊಸ ವಿರಾಟ್​ ದರ್ಶನವಾಗುತ್ತಾ ಎನ್ನುವುದು ಈ ಸ್ಪೆಷಲ್​ ಸ್ಟೋರಿಯಲ್ಲಿದೆ.

ಟಿ20 ಇಂಟರ್​​ನ್ಯಾಷನಲ್​​ ಬಳಿಕ ಟೆಸ್ಟ್​ಗೆ ಗುಡ್​​ ಬೈ..!

2024ರಲ್ಲಿ ಟಿ20ಗೆ ವಿದಾಯ ಹೇಳಿದ್ದ ಕೊಹ್ಲಿ, ಇದೀಗ ಟೆಸ್ಟ್​ಗೆ ಗುಡ್​ ಬೈ ಹೇಳಿದ್ದಾರೆ. 2 ಫಾರ್ಮೆಟ್​ನಿಂದ ಹೊರ ಬಂದ ವಿರಾಟ್​ ಇದೀಗ ಏಕದಿನಕ್ಕೆ ಮಾತ್ರ ಸೀಮಿತ. ಅದ್​ ಬಿಟ್ರೆ ಐಪಿಎಲ್​ನಲ್ಲಷ್ಟೇ ವಿರಾಟ ದರ್ಶನವಾಗಲಿದೆ. ದಶಕಕ್ಕೂ ಹೆಚ್ಚು ಕಾಲ ಸತತ ಕ್ರಿಕೆಟ್​​ ಆಡಿ ರಂಜಿಸಿದ್ದ ಕೊಹ್ಲಿ ಇನ್ಮುಂದೆ ವರ್ಷದಲ್ಲಿ ಕೆಲವೇ ಪಂದ್ಯಗಳಲ್ಲಿ ಮಾತ್ರ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳಿಗೆ ಈ ವಿಚಾರ ಬೇಸರ ತರಿಸಿದೆ. ಕಿಂಗ್​ ಕೊಹ್ಲಿಗೆ ಮಾತ್ರ ಈ ನಿರ್ಧಾರದಿಂದ ಸಮಾಧಾನ ಸಿಕ್ಕಿದೆ.

publive-image

ಕಳೆದೊಂದು ದಶಕದಿಂದ ವಿರಾಟ್​​ ಕೊಹ್ಲಿ ಕ್ರಿಕೆಟ್​ನಲ್ಲಿ ಫುಲ್​ ಬ್ಯುಸಿಯಾಗಿದ್ರು. ಟೆಸ್ಟ್​, ಟಿ20, ಒನ್​ಡೇ, ಐಪಿಎಲ್​ ಎಲ್ಲದರಲ್ಲೂ ಕೊಹ್ಲಿ ಸತತವಾಗಿ ಆಡಿದ್ರು. ಇದ್ರ ನಡುವೆ ಕಮರ್ಷಿಯಲ್​ ಶೂಟ್​​ಗಳು ಬೇರೆ. ಈ ಬ್ಯುಸಿ ಶೆಡ್ಯೂಲ್​ನಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೊಹ್ಲಿ ದಣಿದು ಹೋಗಿದ್ರು. ಕುಟುಂಬಕ್ಕೆ ಸಮಯ ನೀಡಲಾಗದೇ ಒದ್ದಾಡಿದ್ರು. ಈ ಕಾರಣದಿಂದಲೇ ನಿವೃತ್ತಿ ನಿರ್ಧಾರ ಮಾಡಿರೋ ವಿರಾಟ್​, ರಿಫ್ರೇಶ್​​ ಬಟನ್​ ಪ್ರೆಸ್​ ಮಾಡಿದ್ದಾರೆ. ಇನ್ಮುಂದೆ ಪತ್ನಿ, ಮಕ್ಕಳು, ಕುಟುಂಬಕ್ಕೆ ಹೆಚ್ಚು ಸಮಯ ನೀಡೋದ್ರ ಜೊತೆಗೆ ತಾವೂ ಮೆಂಟಲಿ ಫ್ರಿ ಆಗೋಕೆ ಕೊಹ್ಲಿ ಬಯಸಿದ್ದಾರೆ.

ಸತತ ಕ್ರಿಕೆಟ್​​ನಿಂದ ದಣಿದಿದ್ದ ವಿರಾಟ್​​.. ಈಗ ಫ್ರೀ.!

ಇಂಡೋ-ಪಾಕ್​ ಉದ್ವಿಗ್ನತೆಯಿಂದ ಮುಂದೂಡಿಕೆಯಾಗಿದ್ದ ಐಪಿಎಲ್​ ಪುನಾರಂಭಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಈ ಗ್ಯಾಪ್​ನಲ್ಲಿ ಟೆಸ್ಟ್​ಗೆ ಗುಡ್​ ಬೈ ಹೇಳಿ ಶಾಕ್​ ಕೊಟ್ಟ ವಿರಾಟ್ ಕೊಹ್ಲಿ, ಐಪಿಎಲ್​ ಅಖಾಡಕ್ಕೆ ಮರಳಿದ್ದಾರೆ. ಬ್ಯೂಸಿ ಶೆಡ್ಯೂಲ್​ನಿಂದ ಬಳಲಿದ್ದ ಕೊಹ್ಲಿ, ಸದ್ಯ ಮೆಂಟಲಿ ಫ್ರೀಯಾಗಿದ್ದಾರೆ. ಹೀಗಾಗಿ ಐಪಿಎಲ್​ ಸೆಕೆಂಡ್​ ಹಾಫ್​ನಲ್ಲಿ ಹೊಸ ವಿರಾಟ್​ ಕೊಹ್ಲಿ ಕಾಣಿಸ್ತಾರೆ ಅನ್ನೋ ನಿರೀಕ್ಷೆ ಅಭಿಮಾನಿಗಳ ವಲಯದಲ್ಲಿ ಶುರುವಾಗಿದೆ. ವಿರಾಟ್​ ಕೊಹ್ಲಿ ಕೂಡ ಅಬ್ಬರದ ಆಟದಿಂದ ಫ್ಯಾನ್ಸ್​ಗೆ ಟ್ರೀಟ್​ ನೀಡಲು ರೆಡಿಯಾಗಿದ್ದಾರೆ.

ಫ್ಯಾನ್ಸ್​ ವಲಯದಲ್ಲಿ ಸ್ಮರಣೀಯ ಇನ್ನಿಂಗ್ಸ್​ಗಳ ನಿರೀಕ್ಷೆ.!

ಐಪಿಎಲ್​ ಸೀಸನ್​ 18ರಲ್ಲಿ ವಿರಾಟ್​ ಕೊಹ್ಲಿ ಬ್ಯಾಟ್​ ಸಖತ್ತಾಗೇ ಸೌಂಡ್​ ಮಾಡಿದೆ. ಸಾಲಿಡ್​​ ಆಟದಿಂದ ಭರ್ಜರಿ ಎಂಟರ್​​ಟೈನ್​ಮೆಂಟ್​ ನೀಡ್ತಾ ಇರೋ ವಿರಾಟ್​ ಕೊಹ್ಲಿ 500 ರನ್​ಗಳ ಗಡಿ ದಾಟಿದ್ದು ಆಗಿದೆ. ಆರೆಂಜ್​ ಕ್ಯಾಪ್​ಗಾಗಿ ಯಂಗ್​​ಸ್ಟರ್​ಗಳ ಜೊತೆಗೆ ರೇಸ್​​​ಗಿಳಿದಿರೋ ಕೊಹ್ಲಿಯಿಂದ ಇನ್ನಷ್ಟು ಅಗ್ರೆಸ್ಸಿವ್​ ಆಟದ ನಿರೀಕ್ಷೆ ಫ್ಯಾನ್ಸ್​ ವಲಯದಲ್ಲಿದೆ. ಕೊಹ್ಲಿ ಕೂಡ ಸೆಕೆಂಡ್​ ಹಾಫ್​ನಲ್ಲಿ ಭರ್ಜರಿ ಆಟವಾಡಿ ಅಪರಿಮಿತ ಪ್ರೀತಿ, ಬೆಂಬಲ ಕೊಟ್ಟ ಫ್ಯಾನ್ಸ್​ಗೆ ಭರ್ಜರಿ ಎಂಟರ್​​ಟೈನ್​ಮೆಂಟ್​​ ನೀಡೋ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆಟದ ಮೂಲಕವೇ ಫ್ಯಾನ್ಸ್​ಗೆ ಧನ್ಯವಾದ ಹೇಳೋ ಲೆಕ್ಕಾಚಾರ ಕೊಹ್ಲಿಯದ್ದು.

RCB ಕ್ಯಾಂಪ್​ಗೆ ಎಂಟ್ರಿ.. ಭರ್ಜರಿ ಅಭ್ಯಾಸ.!

ಸೆಕೆಂಡ್​ ಹಾಫ್​ ಐಪಿಎಲ್​ ಆಡಲು ಈಗಾಗಲೇ ಆರ್​​ಸಿಬಿಯ ಸಿದ್ಧತೆ ಜೋರಾಗಿ ನಡೀತಿದೆ. ವಿರಾಟ್​ ಕೊಹ್ಲಿ ಕೂಡ ಆರ್​​ಸಿಬಿ ಕ್ಯಾಂಪ್​ಗೆ ಎಂಟ್ರಿ ಕೊಟ್ಟಿದ್ದಾರೆ. ರೆಡ್​ ಆರ್ಮಿ ಸೇರಿದ ಬೆನ್ನಲ್ಲೇ ಅಭ್ಯಾಸದ ಕಣಕ್ಕೂ ವಿರಾಟ್​​ ಕೊಹ್ಲಿ ಧುಮುಕಿದ್ದಾರೆ. ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ನಡೀತಿದ್ದು, ವಿರಾಟ್​ ಕೊಹ್ಲಿ ನೆಟ್ಸ್​ನಲ್ಲಿ ಸುದೀರ್ಘ ಕಾಲ ಬ್ಯಾಟಿಂಗ್​ ನಡೆಸಿದ್ದಾರೆ. ಅಗ್ರೆಸ್ಸಿವ್​ ಇಂಟೆಂಟ್​​ನಲ್ಲಿ ಅಭ್ಯಾಸ ನಡೆಸಿರುವ ವಿರಾಟ್​​​ ಕೊಹ್ಲಿ, ಉಳಿದ ಪಂದ್ಯಗಳಲ್ಲಿ ಘರ್ಜಿಸೋ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸಹೋದರನನ್ನ ಕೋಪದಲ್ಲಿ ನಿಂದಿಸಿದ ರೋಹಿತ್ ಶರ್ಮಾ.. ಅಸಲಿಗೆ ಆಗಿದ್ದೇನು?

publive-image

IPL ಅಂತ್ಯವಾದ್ರೆ ಅಗಸ್ಟ್​ವರೆಗೆ ಕಾಣಲ್ಲ ಕೊಹ್ಲಿ.!

ಐಪಿಎಲ್​ ಸೆಕೆಂಡ್​ ಹಾಫ್​​ನಲ್ಲಿ ಆರ್​​​ಸಿಬಿ ಒಟ್ಟು 3 ಲೀಗ್​ ಪಂದ್ಯಗಳನ್ನ ಆಡಲಿದೆ. ಆ ಬಳಿಕ ಪ್ಲೇ ಆಫ್​ ಹಂತದ ಪಂದ್ಯಗಳನ್ನ ಆಡಲಿದೆ. ಗರಿಷ್ಠ ಅಂದ್ರೆ ಆರ್​​ಸಿಬಿ ಇನ್ನು 7 ಪಂದ್ಯ ಆಡಬಹುದು. ಜೂನ್​ 3ಕ್ಕೆ ಐಪಿಎಲ್​ಗೆ ತೆರೆ ಬೀಳೋದ್ರೊಂದಿಗೆ ವಿರಾಟ್​ ಕೊಹ್ಲಿ ಕೂಡ ಮೈದಾನದಿಂದ ದೀರ್ಘ ಕಾಲ ದೂರ ಉಳಿಯಲಿದ್ದಾರೆ. ಅಗಸ್ಟ್​​ನಲ್ಲಿ ಟೀಮ್​ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಅಲ್ಲಿಯವರೆಗೆ ಮೈದಾನದಲ್ಲಿ ವಿರಾಟ್​ ಕೊಹ್ಲಿಯ ದರ್ಶನವಾಗಲ್ಲ.

ಸುದೀರ್ಘ ಕಾಲ ಮೈದಾನದಿಂದ ಹೊರಗುಳಿಯೋಕೂ ಮುನ್ನ ಸ್ಮರಣೀಯ ಇನ್ನಿಂಗ್ಸ್​ಗಳನ್ನ ಕಟ್ಟೋ ಬಯಕೆ ಕೊಹ್ಲಿಯದ್ದಾಗಿದೆ. ಅಭಿಮಾನಿಗಳ ನಿರೀಕ್ಷೆಯೂ ಕೂಡ ಅದೇ.! ಅಂದುಕೊಂಡಂತೆ ಐಪಿಎಲ್​ ಸೆಕೆಂಡ್​ ಹಾಫ್​ನಲ್ಲಿ ಕೊಹ್ಲಿಯ ಬಯಕೆ ಈಡೇರಲಿ. ಅಭಿಮಾನಿಗಳ ನಿರೀಕ್ಷೆ ನಿಜವಾಗಲಿ, ಕೊಹ್ಲಿ ಬೊಂಬಾಟ್​​ ಆಟವಾಡಿ, ಆರ್​​ಸಿಬಿಗೆ ಕಪ್​ ಗೆಲ್ಲಿಸಲಿ ಅನ್ನೋದು ನಮ್ಮ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment