/newsfirstlive-kannada/media/post_attachments/wp-content/uploads/2025/02/Ranveer-Allahbadia-Virat-Kohli-2.jpg)
ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ತಂದೆ, ತಾಯಿ ಸೆಕ್ಸ್ ಬಗ್ಗೆ ಅಸಭ್ಯವಾಗಿ ಮಾತನಾಡಿದ ರಣವೀರ್ ಅಲಹಾಬಾದಿಯಾಗೆ ಆಘಾತದ ಮೇಲೆ ಆಘಾತ ಎದುರಾಗಿದೆ. ರಣವೀರ್ ಅಶ್ಲೀಲ ಮಾತುಗಳಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸಮಯ್ ರೈನಾ ಅವರ ಶೋನಲ್ಲಿ ಭಾಗಿಯಾಗಿದ್ದ ರಣವೀರ್ ಅಲಹಾಬಾದಿಯಾ ಆಡಿದ ಮಾತಿಗೆ ದೇಶಾದ್ಯಂತ ಟೀಕೆ ವ್ಯಕ್ತವಾಗಿದೆ. ಈ ವರ್ತನೆಯಿಂದ ರಣವೀರ್ ಅವರಿಗೆ ಬಹಳ ದೊಡ್ಡ ಹಿನ್ನಡೆಯಾಗಿದೆ. ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 8000 ಕ್ಕೂ ಹೆಚ್ಚು ಜನ ಇವರಿಗೆ ಗುಡ್ ಬೈ ಹೇಳಿ ಹೋಗಿದ್ದಾರೆ.
ಇದನ್ನೂ ಓದಿ: ತಂದೆ-ತಾಯಿ ಸೆಕ್ಸ್ ಬಗ್ಗೆ ಮಾತನಾಡಿದ ರಣವೀರ್, ಸಮಯ್ ರೈನಾ ಆಸ್ತಿ ಎಷ್ಟು? ತಿಂಗಳ ಸಂಪಾದನೆ ಎಷ್ಟು?
ಸೋಷಿಯಲ್ ಮೀಡಿಯಾದಲ್ಲಿ ಬಹಳ ದೊಡ್ಡ ಹಿನ್ನಡೆ ಅನುಭವಿಸುತ್ತಿರುವ ರಣವೀರ್ ಅಲಹಾಬಾದಿಯಾ ಅವರಿಗೆ ಕಿಂಗ್ ಕೊಹ್ಲಿ ವಿರಾಟ್ ಕೂಡ ಶಾಕ್ ಕೊಟ್ಟಿದ್ದಾರೆ. ರಣವೀರ್ ಅವರ ಅಸಭ್ಯ ಮಾತಿಗೆ ಬೇಸರಗೊಂಡಿರುವ ವಿರಾಟ್ ಕೊಹ್ಲಿ ಅಲಹಾಬಾದಿಯಾ ಅವರನ್ನು ಅಲ್‌ಫಾಲೋ ಮಾಡಿದ್ದಾರೆ.
ರಣವೀರ್ ಅಲಹಾಬಾದಿಯಾ ಮೇಲೆ ಈಗಾಗಲೇ FIR ದಾಖಲಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಇದರ ಮಧ್ಯೆ ವಿರಾಟ್ ಕೊಹ್ಲಿ ಅವರು ರಣವೀರ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ರಣವೀರ್ ಅಲಹಾಬಾದಿಯಾ ಅವರು ವಿರಾಟ್ ಕೊಹ್ಲಿ ಅತಿ ದೊಡ್ಡ ಅಭಿಮಾನಿಯಾಗಿದ್ದರು. ಕೊಹ್ಲಿ ಅವರ ಪಾಡ್‌ಕಾಸ್ಟ್ ಮಾಡಿದ ಮೇಲೆ ತಾನು ಪಾಡ್‌ಕಾಸ್ಟ್ ಮಾಡುವುದನ್ನೇ ನಿಲ್ಲಿಸುತ್ತೇನೆ ಎಂದಿದ್ದರು. ಇದೀಗ ಕೊಹ್ಲಿ ಅವರು ಅಲಹಾಬಾದಿಯಾ ಅವರಿಂದ ಅಂತರ ಕಾಯ್ದುಕೊಂಡಿದ್ದು, ಅವರ ಕನಸು ನುಚ್ಚು ನೂರಾಗಿದೆ. ವಿರಾಟ್ ಕೊಹ್ಲಿ ಅವರು ರಣವೀರ್ ಅವರನ್ನ ಅನ್‌ಫಾಲೋ ಮಾಡಿದ್ದಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅಸಲಿಗೆ ಹೇಳಿದ್ದೇನು?
ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದ ರಣವೀರ್ ಅಲಹಾಬಾದಿಯಾ ಅವರು ಸ್ಪರ್ಧಿಗಳಿಗೆ ಒಂದು ಪ್ರಶ್ನೆ ಕೇಳಿ ಬಿದ್ದು, ಬಿದ್ದು ನಕ್ಕಿದ್ದರು. ನೀವು ಪ್ರತಿದಿನ ನಿಮ್ಮ ತಂದೆ-ತಾಯಿ ಸೆಕ್ಸ್ ಅನ್ನು ನೋಡುತ್ತಾ ಕಾಲ ಕಳೆಯುತ್ತೀರಾ. ಅಥವಾ ಒಮ್ಮೆ ಸೇರಿ ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀರಾ ಎಂದು ಕೇಳಿದ್ದು ಟೀಕೆಗೆ ಗುರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ