ಈ ವರ್ಷ ವಿರಾಟ್, ಕೇವಲ ಒಂದೇ 1 ಏಕದಿನ ಸರಣಿ ಆಡಿದ್ದಾರಾ?
ಒನ್ಸ್ ಎ ಕಿಂಗ್ ಆಲ್ವೇಸ್ ಎ ಕಿಂಗ್ ಅನ್ನೋದು ಮರೆಯಬಾರದು
ರನ್ ಮಷಿನ್ ವಿರಾಟ್ಗೆ ಇಂತಹ ಸ್ಥಿತಿ ಯಾವತ್ತೂ ಬಂದಿರಲಿಲ್ವಾ..?
ವಿರಾಟ್ ಕೊಹ್ಲಿ ಪಾಲಿಗೆ ಅತ್ಯಂತ ಕರಾಳ ವರ್ಷ. ಕೊಹ್ಲಿಗೆ ಇಂತಹ ಸ್ಥಿತಿ ಯಾವತ್ತೂ ಬಂದಿರಲಿಲ್ಲ. ಏನ್ರೀ ಹೀಗೇಳ್ತೀರಾ?. T20 ವಿಶ್ವಕಪ್ ಫೈನಲ್ಸ್ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಏಕದಿನ ಕ್ರಿಕೆಟ್ನಲ್ಲಿ ಆಡಿರೋದು ಜಸ್ಟ್ ಮೂರೇ 3 ಪಂದ್ಯ. ಅದ್ಹೇಗೆ..? ಈ ವರ್ಷ ಕೊಹ್ಲಿಗೆ ಕರಾಳ ಅಂತೀರಾ ಅಂದ್ರೆ, ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಇದನ್ನೂ ಓದಿ: KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?
2023ರ ಕ್ಯಾಲೆಂಡರ್ನಲ್ಲಿ ವಿರಾಟ್ ಕೊಹ್ಲಿ ಪಾಲಿಗೆ ಲಕ್ಕಿ ಇಯರ್. 3 ವರ್ಷಗಳ ಕರಾಳ ಅಧ್ಯಾಯಕ್ಕೆ ಬ್ರೇಕ್ ಹಾಕಿದ್ದ ವಿರಾಟ್, 2023ರಲ್ಲಿ ವಿರಾಟ ರೂಪವನ್ನೇ ತೋರಿದ್ದರು. ಏಕದಿನ ವಿಶ್ವಕಪ್ನಲ್ಲಂತೂ ವಿಂಟೇಜ್ ಕೊಹ್ಲಿ ದರ್ಶನವೇ ಆಗಿತ್ತು. ಆದ್ರೆ, 2024ರ ವರ್ಷಕ್ಕೆ ಕಾಲಿಟ್ಟಿದ್ದೇ ತಡ ವಿರಾಟ್ ಕೊಹ್ಲಿಯ ಲಕ್ ಕಂಪ್ಲೀಟ್ ಬದಲಾಗಿದೆ.
ಇದನ್ನೂ ಓದಿ: ಅಂಬಾನಿ ಫ್ಯಾಮಿಲಿ ಒಟ್ಟು ಆಸ್ತಿ ₹25750000000000; ಈ 3 ಫ್ಯಾಮಿಲಿಗಳೇ ಭಾರತದ ಟಾಪ್ ಶ್ರೀಮಂತರು!
ಏಕದಿನ ಕ್ರಿಕೆಟ್ನಲ್ಲಿ 2024 ಕೊಹ್ಲಿ ಪಾಲಿಗೆ ಕರಾಳ ವರ್ಷ.!
ಕೊಹ್ಲಿ.. ವಿಶ್ವ ಕ್ರಿಕೆಟ್ನ ಸಾಮ್ರಾಟ. 16 ವರ್ಷಗಳ ವೃತ್ತಿ ಜೀವನದಲ್ಲಿ ಲೆಕ್ಕ ಇಲ್ಲದಷ್ಟು ದಾಖಲೆಗಳನ್ನ ಫೀಸ್ ಫೀಸ್ ಮಾಡಿದ್ದಾರೆ. ಆದ್ರೆ, 16 ವರ್ಷಗಳ ಏಕದಿನ ಕ್ರಿಕೆಟ್ನ ವೃತ್ತಿ ಜೀವನದ ಪೈಕಿ 2024ರ ವರ್ಷ ನಿಜಕ್ಕೂ ಅನ್ ಲಕ್ಕಿ. ಇದಕ್ಕೆ ಕಾರಣ ಪ್ರಸಕ್ತ ವರ್ಷದಲ್ಲಿ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ನೀಡಿರುವ ಪರ್ಫಾಮೆನ್ಸ್. ಪಸಕ್ತ ವರ್ಷ ವಿರಾಟ್, ಕೇವಲ ಒಂದೇ 1 ಏಕದಿನ ಸರಣಿಯನ್ನಾಡಿದ್ದಾರೆ. ಆ ಒಂದು ಏಕದಿನ ಸರಣಿಯಲ್ಲೇ ವಿರಾಟ್ ಫೇಲ್ಯೂರ್ ಆಗಿದ್ದಾರೆ. ಆದ್ರೆ, ಇದೊಂದೇ ಫೇಲ್ಯೂರ್ ವಿರಾಟ್ ಕೊಹ್ಲಿ ಪಾಲಿಗೆ ಕರಾಳ ಅಧ್ಯಾಯವಾಗಿ ಮಾರ್ಪಟ್ಟಿದೆ.
16 ವರ್ಷಗಳ ಕರಿಯರ್ನಲ್ಲೇ ಅತ್ಯಂತ ಕಳಪೆ ದಾಖಲೆ..!
ವಿರಾಟ್ ಕೊಹ್ಲಿ ಏಕದಿನ ಫಾರ್ಮೆಟ್ನ ಗ್ರೇಟೆಸ್ಟ್ ಬ್ಯಾಟ್ಸ್ಮನ್. ಅದಕ್ಕೆ ವಿರಾಟ್ ಕೊಹ್ಲಿಯ ದಾಖಲೆಗಳೇ ಸಾಕ್ಷಿ. ಪ್ರತಿ ವರ್ಷ ರನ್ ಶಿಖರವನ್ನೇ ಕಟ್ಟುತ್ತಿದ್ದ ವಿರಾಟ್, ವೃತ್ತಿ ಜೀವನದಲ್ಲೇ ಅತ್ಯಂತ ಕಳಪೆ ದಾಖಲೆ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಅದು ಕೂಡ ಲಂಕಾ ಎದುರಿನ ಏಕದಿನ ಸರಣಿಯಿಂದಾಗಿದೆ.
2024ರಲ್ಲಿ ಏಕದಿನ ಮಾದರಿಯಲ್ಲಿ ಕೊಹ್ಲಿ
ಈ ವರ್ಷ 3 ಪಂದ್ಯಗಳನ್ನಾಡಿರುವ ವಿರಾಟ್, 58 ರನ್ ಸಿಡಿಸಿದ್ದಾರೆ. ಅದು ಕೂಡ 19.3ರ ಎವರೇಜ್ನಲ್ಲಾಗಿದೆ. ಇದೇ ಬ್ಯಾಟಿಂಗ್ ಎವರೇಜ್, ವಿರಾಟ್ ಪಾಲಿಗೆ ಕಹಿಯಾಗಿದೆ. ವಿರಾಟ್ ಬ್ಯಾಟಿಂಗ್ ಫೇಲ್ಯೂರ್ ಇದೇ ಮೊದಲಲ್ಲ. ಈ ಹಿಂದಿನ 4 ವರ್ಷಗಳೂ ವಿರಾಟ್ ಫೇಲ್ಯೂರ್ ಆಗಿರುವ ಇತಿಹಾಸ ಇದೆ. ಒಂದೊಂದು ರನ್ ಗಳಿಸಲು ಪರದಾಡಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿಅಂಶಗಳು..
ಕೊಹ್ಲಿ ಪಾಲಿನ ಏಕದಿನ ಕರಾಳ ವರ್ಷಗಳು
2022ರಲ್ಲಿ 11 ಪಂದ್ಯಗಳನ್ನಾಡಿದ್ದ ವಿರಾಟ್, ಕೇವಲ 27.5ರ ಸರಾಸರಿಯಲ್ಲಿ 302 ರನ್ ಗಳಿಸಿದ್ದರು. 2008ರಲ್ಲಿ 5 ಪಂದ್ಯಗಳಿಂದ 31.80ರ ಸರಾಸರಿಯಲ್ಲಿ 159 ರನ್ಗಳಿಸಿದ್ದ ವಿರಾಟ್, 2015ರಲ್ಲಿ 20 ಪಂದ್ಯಗಳಿಂದ 36.64ರ ಸರಾಸರಿಯಲ್ಲಿ 623 ರನ್ ಕಲೆಹಾಕಿದ್ರು. ಅಷ್ಟೇ ಅಲ್ಲ. 2021ರಲ್ಲೂ ಮೂರೇ ಮೂರು ಏಕದಿನ ಪಂದ್ಯಗಳನ್ನಾಡಿದ್ದ ವಿರಾಟ್, 43ರ ಬ್ಯಾಟಿಂಗ್ ಅವರೇಜ್ನಲ್ಲಿ 129 ರನ್ ಗಳಿಸಿದ್ರು.
ಇದನ್ನೂ ಓದಿ: ಒಲಿಂಪಿಕ್ಸ್ನ ಯುವ ಪ್ಲೇಯರ್ಗೆ ಕೋಟಿ ರೂಪಾಯಿ ಅನೌನ್ಸ್.. ವಿಡಿಯೋ ಕಾಲ್ ಮಾಡಿ ಮಾತಾಡಿದ CM
ಹೀಗಾಗಿಯೇ 2024ರ ವರ್ಷ ವಿರಾಟ್ ಪಾಲಿಗೆ ವರ್ಷ ಬ್ಯಾಡ್ ಇಯರ್. ಇದಿಷ್ಟೇ ಅಲ್ಲ, ಈ ವರ್ಷ ವಿರಾಟ್, ಏಕದಿನ ಫಾರ್ಮೆಟ್ನಲ್ಲಿ ರನ್ ಗಳಿಸುವ ಅವಕಾಶವೂ ಸಿಗಲ್ಲ. ಯಾಕಂದ್ರೆ, ಪ್ರಸಕ್ತ ವರ್ಷ ಟೀಮ್ ಇಂಡಿಯಾ ಮುಂದೆ ಇದ್ದಿದ್ದು, ಶ್ರೀಲಂಕಾ ಎದುರಿನ 3 ಪಂದ್ಯಗಳ ಏಕದಿನ ಸರಣಿ ಈ ವರ್ಷದ ಕೊನೆ ಏಕದಿನ ಸರಣಿ ಆಗಿದೆ.
ಅದೇನೇ ಆಗಲಿ. ವಿರಾಟ್ ಕೇವಲ 3 ಪಂದ್ಯಗಳಲ್ಲಿ ರನ್ ಗಳಿಸಲಿಲ್ಲ ಎಂಬ ಕಾರಣಕ್ಕೆ ಬ್ಯಾಟಿಂಗ್ ಎವರೇಜ್ ಕಡಿಮೆಯಾಗಿರಬಹುದು. ಆದ್ರೆ, ವಿರಾಟ್ ಕೊಹ್ಲಿಗಿರುವ ಕೆಪಾಸಿಟಿ, ರನ್ ಗಳಿಸಬೇಕೆಂಬ ಹಸಿವು ಮಾತ್ರ ಹಾಗೇ ಇದೆ. ಹೀಗಾಗಿ ದಾಖಲೆಗಳೂ ಏನೇ ಹೇಳಿದ್ರು. ಒನ್ಸ್ ಎ ಕಿಂಗ್ ಆಲ್ವೇಸ್ ಎ ಕಿಂಗ್ ಅನ್ನೋದು ಮರೆಯುವಂತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ