/newsfirstlive-kannada/media/post_attachments/wp-content/uploads/2025/04/RAHUL_KOHLI.jpg)
ಐಪಿಎಲ್ ಸೀಸನ್ 18ರ ಮತ್ತೊಂದು ಸೇಡಿನ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಇಂದು ನಮ್ಮ ಆರ್ಸಿಬಿ ತಂಡಕ್ಕೆ ಬಲಿಷ್ಟ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ. ಹೋಮ್ ಗ್ರೌಂಡ್ ಚಿನ್ನಸ್ವಾಮಿಯಲ್ಲಾದ ಸೋಲಿನ ಸೇಡು ತೀರಿಸಿಕೊಳ್ಳಲು ಪಣ ತೊಟ್ಟು ರಾಷ್ಟ್ರ ರಾಜಧಾನಿಗೆ ರೆಡ್ ಆರ್ಮಿ ಕಾಲಿಟ್ಟಿದೆ. ಡೆಲ್ಲಿಗೆ ಡಿಚ್ಚಿ ಕೊಟ್ಟು ನಂಬರ್ 2 ಸ್ಥಾನಕ್ಕೆ ಲಗ್ಗೆ ಇಡೋಕೆ RCB ಸಜ್ಜಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು. ಐಪಿಎಲ್ ಸೀಸನ್ 18ರಲ್ಲಿ ಸಖತ್ ಡಿಫರೆಂಟ್ ಅನ್ನಿಸಿರೋ ಟೀಮ್ಗಳು. ಈ ಹಿಂದಿನ ಸೀಸನ್ಗಳಲ್ಲಿ ಇನ್ಕನ್ಸಿಸ್ಟೆನ್ಸಿ ತಂಡಗಳು ಎನಿಸಿಕೊಂಡಿದ್ದ ಡೆಲ್ಲಿ, ಬೆಂಗಳೂರು ಈ ಸೀಸನ್ನಲ್ಲಿ ಕಪ್ ಗೆಲ್ಲೋ ಫೇವರಿಟ್ ಅನಿಸಿಕೊಂಡಿದೆ. ಸೂಪರ್ ಸಂಡೇಯ ಇಂದಿನ ಬ್ಯಾಟಲ್ನಲ್ಲಿ ಈ ಬಲಿಷ್ಠ ತಂಡಗಳ ಕಾದಾಟ ನಡೆಯಲಿದೆ.
ಹೊಸ ನಾಯಕರು, ಹೊಸ ತಂಡ, ಹೊಸ ಆಟ..!
ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕರ ನೇಮಕದಿಂದ, ಡಿಫರೆಂಟ್ ಆಗಿ ಕಾಣ್ತಿದೆ. ಹೊಸ ನಾಯಕರು ತಂಡಕ್ಕೆ ಎಂಟ್ರಿ ಆಗ್ತಿದಂತೆ, ತಂಡದ ಲಕ್ ಕೂಡ ಬದಲಾಗಿದೆ. ಹೊಸ ತಂಡ, ಹೊಸ ಚೈತನ್ಯ, ಹೊಸ ಆಟ ಆಡ್ತಿರುವ ಆರ್ಸಿಬಿ ಮತ್ತು ಡಿಸಿ, ಪ್ರಸಕ್ತ ಐಪಿಎಲ್ನಲ್ಲಿ ಬಿಂದಾಸ್ ಪ್ರದರ್ಶನ ನೀಡುತ್ತಿದೆ. ಸದ್ಯ ಐಪಿಎಲ್ ಪಾಯಿಂಟ್ ಟೇಬಲ್ನಲ್ಲಿ ಡೆಲ್ಲಿ ನಂಬರ್ 2ನೇ ಪ್ಲೇಸ್ನಲ್ಲಿದ್ರೆ, ಆರ್ಸಿಬಿ 3ನೇ ಸ್ಥಾನದಲ್ಲಿದೆ.
ಆರ್ಸಿಬಿ ಕ್ಯಾಂಪ್ನಲ್ಲಿ ಸೇಡಿನ ಜ್ವಾಲೆ..!
ಮ್ಯಾಚ್ ನಂಬರ್ 24, ಏಪ್ರಿಲ್ 10.. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ - ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ RCB ಭದ್ರಕೋಟೆಯನ್ನ ಚಿದ್ರ ಮಾಡಿದ್ದ ಡೆಲ್ಲಿ ತಂಡ ಗೆದ್ದು ಬೀಗಿತ್ತು. 6 ವಿಕೆಟ್ಗಳ ಜಯ ಸಾಧಿಸಿ ವಿಜಯೋತ್ಸವ ಆಚರಿಸಿತ್ತು. ತವರಿನಲ್ಲಿ ಸೋತ ಆರ್ಸಿಬಿ ಭಾರೀ ಮುಖಭಂಗ ಅನುಭವಿಸಿತ್ತು. ಆ ಸೋಲಿನ ಅವಮಾನ ಆರ್ಸಿಬಿ ಕ್ಯಾಂಪ್ನಲ್ಲಿ ಜ್ವಾಲೆಯಾಗಿ ಉರೀತಿದೆ. ಆ ಸೇಡು ತೀರಿಸಿಕೊಳ್ಳಲು ಆರ್ಸಿಬಿ ಕತ್ತಿ ಮಸಿತೀದೆ.
ಇದನ್ನೂ ಓದಿ: ಬಿಗ್ ಸ್ಟೇಟ್ಮೆಂಟ್ ಮಾಡಿದ ಕೊಹ್ಲಿ.. ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಬಿಗ್ ರಿಲೀಫ್..! ಏನದು?
ಕೊಹ್ಲಿ VS ರಾಹುಲ್.. ಬಿಗ್ ಬ್ಯಾಟಲ್.!
ಆರ್ಸಿಬಿಯ ವಿರಾಟ್ ಕೊಹ್ಲಿ, ಡೆಲ್ಲಿ ಕ್ಯಾಪಿಟಲ್ಸ್ನ ರಾಹುಲ್ ಇವತ್ತಿನ ಪಂದ್ಯದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಅಂದು ಬೆಂಗಳೂರಲ್ಲಿ ನಡೆದಿದ್ದ ಪಂದ್ಯದಲ್ಲಿ ಮಿಂಚಿದ್ದ ರಾಹುಲ್ ಡೆಲ್ಲಿಯನ್ನ ಗೆಲುವಿನ ದಡ ಸೇರಿಸಿದ್ರು. ತಂಡವನ್ನ ಗೆಲ್ಲಿಸಿದ್ದಲ್ಲದೇ ಇದು ನನ್ನ ಗ್ರೌಂಡ್ ಎಂದು ಸನ್ನೆ ಮಾಡಿ, ಕಾಂತಾರ ಸೆಲಬ್ರೇಷನ್ ಮಾಡಿದ್ರು. ಈಗ ಪಂದ್ಯ ನಡೀತಿರೋದು ಡೆಲ್ಲಿಯಲ್ಲಿ. ಕೊಹ್ಲಿ ಹುಟ್ಟಿ ಬೆಳೆದ ಈ ಸ್ಟೇಡಿಯಂನಲ್ಲಿ ಕೊಹ್ಲಿ ಹೆಸರಿನಲ್ಲಿ ಪೆವಿಲಿಯನ್ನೇ ಇದೆ. ಈ ಕಾರಣಕ್ಕೆ ಇಂದಿನ ಪಂದ್ಯ ಹಲವರಲ್ಲಿ ಕುತೂಹಲ ಮೂಡಿಸಿದೆ.
ಪ್ಲೇ ಆಫ್ ಅಲ್ಲ.. ಟೇಬಲ್ ಟಾಪ್ ಸ್ಥಾನ ಟಾರ್ಗೆಟ್.!
ಆಡಿದ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿರೋ ಆರ್ಸಿಬಿಯ ಪ್ಲೇ ಆಫ್ ಟಿಕೆಟ್ ಬಹುತೇಕ ಖಚಿತವಾಗಿದೆ. ಒಳ್ಳೆ ರನ್ರೇಟ್ ಕೂಡ ಇರೋದ್ರಿಂದ ಪ್ಲೇ ಆಫ್ ಎಂಟ್ರಿ ಕಷ್ಟವೇನಲ್ಲ. 3 ಅಥವಾ 4ನೇ ಸ್ಥಾನದಲ್ಲಿದ್ದು ಪ್ಲೇ ಆಫ್ಗೆ ಕ್ವಾಲಿಫೈ ಆದ್ರೆ ಕಪ್ ಗೆಲ್ಲಬೇಕಂದ್ರೆ ಸತತವಾಗಿ 3 ಪಂದ್ಯ ಗೆಲ್ಲಬೇಕು. ಎಲಿಮಿನೇಟರ್, ಕ್ವಾಲಿಫೈಯರ್ 2, ಫೈನಲ್ ಈ ಮೂರು ಪಂದ್ಯ ಗೆದ್ರೆ ಕಪ್ ನಮ್ಮದಾಗಲಿದೆ. ಅದೇ ನಂಬರ್ 1 ಅಥವಾ 2ನೇ ಸ್ಥಾನದಲ್ಲಿದ್ರೆ ಕ್ವಾಲಿಫೈಯರ್ 1ನಲ್ಲಿ ಸೋತರೂ ಕ್ವಾಲಿಫೈಯರ್ 2ನಲ್ಲಿ ಆಡೋ ಅವಕಾಶ ಸಿಗಲಿದೆ. ಈ ಅಡ್ವಾಂಟೇಜ್ ಮೇಲೆ ಆರ್ಸಿಬಿ ಕಣ್ಣಿದೆ.
ತವರಿನಲ್ಲಿ ಸೋಲಿನ ಓಟಕ್ಕೆ ಬ್ರೇಕ್ ಹಾಕಿ ಆರ್ಸಿಬಿ ಗೆದ್ದು ಬೀಗಿದೆ. ಈ ಸೀಸನ್ನಲ್ಲಂತೂ ತವರಿನ ಹೊರಗೆ ಸೋಲೇ ಕಾಣದೇ ಗೆಲುವಿನ ಓಟ ನಡೆಸ್ತಿದೆ. ಇದೆಲ್ಲವೂ ಆರ್ಸಿಬಿ ಕ್ಯಾಂಪ್ನ ಆತ್ಮವಿಶ್ವಾಸ ಹೆಚ್ಚಿಸಿದೆ. ಹಾಗಂತ ಡೆಲ್ಲಿ ತಂಡವನ್ನ ಕಡೆಗಣಿಸುವಂತೆ ಇಲ್ಲ. ಸೈಲೆಂಟ್ ಕಿಲ್ಲರ್ ತರ ಈ ಸೀಸನ್ನಲ್ಲಿ ಬಲಿಷ್ಟ ತಂಡಗಳಿಗೂ ಮಣ್ಣು ಮುಕ್ಕಿಸಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರೂ ವಿಭಾಗದಲ್ಲಿ ಸಖತ್ ಸ್ಟ್ರಾಂಗ್ ಅನಿಸಿದೆ. ಕಾನ್ಫಿಡೆಂಟ್ & ಕನ್ಸಿಸ್ಟೆಂಟ್ ಆಟವಾಡ್ತಿರೋ ಡೆಲ್ಲಿಯನ್ನ ಸೋಲಿಸೋದು ರಾಯಲ್ ಚಾಲೆಂಜೇ. ಈ ಸವಾಲನ್ನ ಆರ್ಸಿಬಿ ಹೇಗೆ ಮೆಟ್ಟಿ ನಿಲ್ಲುತ್ತೆ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ