newsfirstkannada.com

RCB ಆಟಗಾರರ ವಿರುದ್ಧವೇ ಕೆಂಡ ಕಾರಿದ ವಿರಾಟ್​ ಕೊಹ್ಲಿ.. ಸೋಲು ಅನುಭವಿಸೋಕಾಗ್ತಿಲ್ಲ, ನೋವು ಹೇಳೊಕಾಗ್ತಿಲ್ಲ

Share :

Published April 17, 2024 at 10:38am

  ಅಂದುಕೊಂಡಿದ್ದೆ ಒಂದು.. ಆಗ್ತಿರೋದೆ ಇನ್ನೊಂದು..!

  ಮೈದಾನದಲ್ಲೇ ಬೇಸರ ಹೊರ ಹಾಕಿದ ವಿರಾಟ್​ ಕೊಹ್ಲಿ..!

  ಹೋಮಗ್ರೌಂಡ್​ನಲ್ಲಿ ಆರ್​​ಸಿಬಿಗೆ ಹ್ಯಾಟ್ರಿಕ್​ ಸೋಲು

ಸತತ 5 ಪಂದ್ಯಗಳಲ್ಲಿ ಹೀನಾಯವಾಗಿ ಸೋಲುಂಡಿರುವ ಆರ್​​ಸಿಬಿ ಮುಖಭಂಗ ಅನುಭವಿಸಿದೆ. ಪ್ರತಿ ಸಲ ಸೋತ್ರೂ, ಗೆದ್ರೂ ಆರ್​​ಸಿಬಿನೇ ಅಂತಿದ್ದ ಅಭಿಮಾನಿಗಳು ಈ ಬಾರಿ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ಆಟಗಾರರ ಆಟವನ್ನ ನೋಡಿ ವಿರಾಟ್​ ಕೊಹ್ಲಿಯಂತೂ ಬೇಸತ್ತು ಹೋಗಿದ್ದಾರೆ. ಮೈದಾನದಲ್ಲೇ ಸ್ವಂತ ತಂಡದ ಆಟಗಾರರ ವಿರುದ್ಧವೇ ವಿರಾಟ್​ ಕೆಂಡ ಕಾರಿದ್ದಾರೆ.

ಸಾಲಿಡ್​ ಫಾರ್ಮ್​, ಅದ್ದೂರಿ ಆಟ​, ಆದ್ರೂ, ಕೊಹ್ಲಿಗಿಲ್ಲ ಖುಷಿ..!

ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಕಿಂಗ್​ ಕೊಹ್ಲಿ ಅತ್ಯದ್ಭುತ ಫಾರ್ಮ್​​ನಲ್ಲಿದ್ದಾರೆ. ಎದುರಾಳಿಗಳ ಸೆದೆಬಡಿದು ರಣರಂಗದಲ್ಲಿ ಘರ್ಜಿಸ್ತಿರೋ ಕೊಹ್ಲಿ, ಸಾಲಿಡ್​ ಬ್ಯಾಟಿಂಗ್​ ನಡೆಸ್ತಿದ್ದಾರೆ. ಆಡಿದ ಆರು ಪಂದ್ಯಗಳಲ್ಲಿ ಒಂದು ಶತಕ ಸಹಿತ, ಬರೋಬ್ಬರಿ 72.20ರ ಸರಾಸರಿಯಲ್ಲಿ 361 ರನ್​ ಚಚ್ಚಿದ್ದಾರೆ. ಆದ್ರೂ, ಕೊಹ್ಲಿಯಲ್ಲಿ ಖುಷಿಯೇ ಇಲ್ಲ..

ಅಸಲಿಗೆ ಈ ಸೀಸನ್​ನ ಐಪಿಎಲ್​ ಆರಂಭಕ್ಕೂ ಮುನ್ನ ಕಿಂಗ್​ ಕೊಹ್ಲಿ ಹೊಸ ಹುರುಪಿನಲ್ಲಿದ್ರು. ಕ್ರಿಕೆಟ್​ನಿಂದ ಕೆಲ ಕಾಲ ದೂರ ಉಳಿದಿದ್ದ ಕೊಹ್ಲಿ, ರಿಪ್ರೆಶ್​ ಆಗಿ ವಾಪಾಸ್ಸಾಗಿದ್ರು. ಇದೇ ಜೋಶ್​​ನಲ್ಲಿ ಟೂರ್ನಿ ಆರಂಭಕ್ಕೂ ಮುನ್ನ ಆರ್​​ಸಿಬಿಯಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತೆ ಅಂತಾ ಫ್ಯಾನ್ಸ್​ಗೆ ಪ್ರಾಮಿಸ್​​ ಮಾಡಿದ್ರು.

ಕೊಹ್ಲಿ ಅಂದುಕೊಂಡಿದ್ದೇ ಒಂದು ಆನ್​ಫೀಲ್ಡ್​ನಲ್ಲಿ ಆಗ್ತಿರೋದೆ ಇನ್ನೊಂದು.! ಕೊಹ್ಲಿಯೇನೋ ತಮ್ಮ ಸಾಮರ್ಥ್ಯವನ್ನೂ ಮೀರಿ ಪರ್ಫಾಮ್​ ಮಾಡ್ತಿದ್ದಾರೆ. ಆದ್ರೆ, ಉಳಿದ ಆಟಗಾರರು ವೈಫಲ್ಯದ ಹಾದಿ ಹಿಡಿದ್ದಾರೆ. ಬೌಲಿಂಗ್​ & ಬ್ಯಾಟಿಂಗ್ ಹಳ್ಳ ಹಿಡಿದಿದೆ. ಏಕಾಂಗಿಯಾಗಿ ಹೋರಾಡ್ತಿರೋ ಕೊಹ್ಲಿ ಫೇಸ್ಟ್ರೇಶನ್​ಗೆ ಒಳಗಾಗಿದ್ದಾರೆ.

ಆಟಗಾರರ ಕಳಪೆಯಾಟ, ವಿರಾಟ್ ಕೊಹ್ಲಿ ಕೆಂಡ.!

ಸೋಲಿನ ಸುಳಿಗೆ ಸಿಲುಕಿದ್ದ ಆರ್​​ಸಿಬಿ ಹೈದ್ರಾಬಾದ್​ ಎದುರು ಗೆಲುವಿನ ಹಳಿಗೆ ಮರಳುತ್ತೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆದ್ರೆ, ಆಗಿದ್ದೇ ಬೇರೆ. ಹೋಮ್​​​ಗ್ರೌಂಡ್​ನಲ್ಲೇ ಹೈದ್ರಾಬಾದ್​ ಬ್ಯಾಟ್ಸ್​​ಮನ್​ಗಳು ಆರ್​​ಸಿಬಿ ಬೌಲಿಂಗ್​ ದಾಳಿಯನ್ನ ಚಿಂದಿ ಉಡಾಯಿಸಿದ್ರು. ಕಳಪೆ ಬೌಲಿಂಗ್​ ನೋಡಿ ಬೇಸತ್ತ ವಿರಾಟ್​ ಮೈದಾನದಲ್ಲೇ ಬೇಸರ ಹೊರಹಾಕಿದ್ರು.

ಆಟನ ಎಂಜಾಯ್​ ಮಾಡ್ತಿಲ್ಲ.. ಸೋಲನ್ನ ಸಹಿಸೋಕೆ ಆಗ್ತಿಲ್ಲ.!

ವಿರಾಟ್​ ಕೊಹ್ಲಿ ಮೈದಾನದಲ್ಲಿದ್ದಷ್ಟು ಹೊತ್ತು ಸಖತ್​ ಜಾಲಿ ಮೂಡ್​ನಲ್ಲಿರ್ತಾರೆ. ಆದ್ರೆ, ಈ ಸೀಸನ್​ ಐಪಿಎಲ್​ನಲ್ಲಿ ನಿರಾಸೆ ಕಡಲಲ್ಲಿ ತೇಲ್ತಿದ್ದಾರೆ. ತಾನು ಪರ್ಫಾಮ್​ ಮಾಡ್ತಿದ್ರು, ಉಳಿದ ಆಟಗಾರರ ಕಳಪೆ ಆಟ ತಂಡವನ್ನ ಸೋಲಿಗೆ ಗುರಿ ಮಾಡ್ತಿದೆ. ಈ ಕಟು ಸತ್ಯವನ್ನ ಕೊಹ್ಲಿಗೆ ಅರಗಿಸಿಕೊಳ್ಳೋಕೂ ಆಗ್ತಿಲ್ಲ.

ಹೋಮ್​ಗ್ರೌಂಡ್​ನಲ್ಲಿ ಹ್ಯಾಟ್ರಿಕ್​ ಸೋಲು, ನಿರಾಸೆಯ ಕಡಲಲ್ಲಿ ಕೊಹ್ಲಿ.!

ಹೈದ್ರಾಬಾದ್​ ಎದುರಿನ ಪಂದ್ಯವೂ ಸೇರಿ ಹೋಮ್​ಗ್ರೌಂಡ್​ ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿ ಸತತ 3ನೇ ಪಂದ್ಯ ಸೋತಿದೆ. ಇದ್ರಿಂದ, ಫ್ಯಾನ್ಸ್​ಗೆ​ ಆಗಿರುವ ನಿರಾಸೆ ಅಷ್ಟಿಷ್ಟಲ್ಲ. ರಾಯಲ್​ ಫ್ಯಾನ್ಸ್​ಗೆ ಅನುಭವಿಸ್ತಾ ಇರೋ ಬೇಸರ ಕೊಹ್ಲಿಗೆ ಮಾತ್ರ ಅರ್ಥವಾಗ್ತಿದೆ.

ಒಟ್ಟಿನಲ್ಲಿ, ಆರ್​​ಸಿಬಿಯ ಸತತ ಸೋಲು, ಆಟಗಾರರ ಕಳಪೆ ಪರ್ಫಾಮೆನ್ಸ್ ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ. ವಿರಾಟ್​​ ಕೊಹ್ಲಿಯಲ್ಲೂ ಬೇಸರ ತರಿಸಿದೆ. ಇದನ್ನ ಅರ್ಥ ಮಾಡಿಕೊಂಡು ಮುಂದಿನ ಪಂದ್ಯದಲ್ಲಾದ್ರೂ, ಆಟಗಾರರು ಉತ್ತಮ ಫಾರ್ಮ್​ಗೆ ಮರಳ್ತಾರಾ.? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಆಟಗಾರರ ವಿರುದ್ಧವೇ ಕೆಂಡ ಕಾರಿದ ವಿರಾಟ್​ ಕೊಹ್ಲಿ.. ಸೋಲು ಅನುಭವಿಸೋಕಾಗ್ತಿಲ್ಲ, ನೋವು ಹೇಳೊಕಾಗ್ತಿಲ್ಲ

https://newsfirstlive.com/wp-content/uploads/2024/04/Kohli-6-1.jpg

Load More