ಕೊಹ್ಲಿ ನಿವೃತ್ತಿಯಾದರೂ ಅಭಿಮಾನಿಗಳಿಗೆ ಕಾಡ್ತಿದೆ 2021ರ ಅದೊಂದು ಘಟನೆ..!

author-image
Ganesh
ಕೊಹ್ಲಿ ನಿವೃತ್ತಿಯಾದರೂ ಅಭಿಮಾನಿಗಳಿಗೆ ಕಾಡ್ತಿದೆ 2021ರ ಅದೊಂದು ಘಟನೆ..!
Advertisment
  • ಸಾಧನೆಯ ಹರಿಕಾರನಿಗೆ ಆ ಘಟನೆ ಕಪ್ಪು ಚುಕ್ಕೆ?
  • ನಾಯಕತ್ವದ ವಿಚಾರಕ್ಕೆ ಕೊಹ್ಲಿ-ಗಂಗೂಲಿ ಮುನಿಸು
  • ಪರಸ್ಪರ ಅನ್​ಫಾಲೋ.. ನೋ ಹ್ಯಾಂಡ್​ಶೇಕ್..!

ಟೆಸ್ಟ್​ ಕ್ರಿಕೆಟ್​ಗೆ ವಿರಾಟ್ ಕೊಹ್ಲಿ ಗುಡ್​ ಬೈ ಹೇಳಿದ್ದಾಗಿದೆ. 14 ವರ್ಷಗಳ ಸುದೀರ್ಘ ಕರಿಯರ್​ಗೆ ವಿದಾಯ ಘೋಷಿಸಿರುವ ವಿರಾಟ್​, ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ತೆಗೆದುಕೊಂಡ ಆ ಒಂದು ನಿರ್ಧಾರ ಭಾರತೀಯ ಕ್ರಿಕೆಟ್​ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದೆ. ವಿರಾಟ್​​​​​​​​​​​​​​​​​​​​​​​​​​​​​​​​​​​​​, ವೃತ್ತಿ ಜೀವನದಲ್ಲಿ ಅಭಿಮಾನಿಗಳಿಗೆ ಇಂದಿಗೂ ಕಾಡುವುದು 2021ರ ಆ ಘಟನೆ. ಅದು ಕೂಡ ಇಬ್ಬರು ಐಕಾನಿಕ್​​​ಗಳ ನಡುವೆ. ಅದೇ ಬೆಂಗಾಲ್ ಟೈಗರ್ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ನಡುವೆ ಯುದ್ದ.

ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ.. ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕರು ನಿಜ. ಪರಸ್ಪರ ಗೌರವ, ಸಹಬಾಳ್ವೆಯಿಂದ ಇದ್ದ ಇವರಿಬ್ಬರ ನಡುವಿನ ದುಷ್ಮನಿಯ ಆರಂಭಕ್ಕೆ ಕಾರಣವಾಗಿದ್ದು 2021ರ ಟಿ20 ವಿಶ್ವಕಪ್​.

ಇದನ್ನೂ ಓದಿ: ಟೆಸ್ಟ್​ಗೆ ಗುಡ್​ಬೈ ಬೆನ್ನಲ್ಲೇ ವಿರುಷ್ಕಾ ದಂಪತಿ ದಿಢೀರ್​ ಹೋಗಿದ್ದೆಲ್ಲಿಗೆ..? ಅನುಷ್ಕಾ ಶರ್ಮಾ ಕಣ್ಣೀರು..! VIDEO

publive-image

2021ರ ಟಿ20 ವಿಶ್ವಕಪ್ ಸೋತಿದ್ದ ವಿರಾಟ್, ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಆದ್ರೆ ಟಿ20ಗೆ ಗುಡ್​ ಬೈ ಹೇಳಿದ್ದ ಕೊಹ್ಲಿಗೆ ಏಕದಿನ ಹಾಗೂ ಟೆಸ್ಟ್​ ತಂಡದಲ್ಲಿ ಮುಂದುವರಿಯುವ ಒಲವಿತ್ತು. ಒಂದು ವಾರದ ಬಳಿಕ ಎಲ್ಲವೂ ಬದಲಾಗಿತ್ತು. ರೋಹಿತ್ ಶರ್ಮಾ ಏಕದಿನ ತಂಡದ ನಾಯಕನಾಗಿ ಏಕಾಏಕಿ ನೇಮಕವಾದರು. ಇದಕ್ಕೆ ಯಾವುದೇ ವಿವರಣೆ ನೀಡದ ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೇವಲ ಮಾಧ್ಯಮ ಪ್ರಕಟಣೆಯನ್ನಷ್ಟೇ ಹೊರಡಿಸಿದ್ರು.

ದಾದಾಗೆ ಕೌಂಟರ್!

ರೋಹಿತ್​ಗೆ ಏಕದಿನ ನಾಯಕತ್ವ ನೀಡಿದ ಬಳಿಕ ವಿರಾಟ್ ಕೊಹ್ಲಿ, ಸ್ಫೋಟಕ ಸುದ್ದಿಗೋಷ್ಠಿ ನಡೆಸಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಗಂಗೂಲಿ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡಿದ್ದ ವಿರಾಟ್, ಟೆಸ್ಟ್ ತಂಡದ ಸೆಲೆಕ್ಷನ್ ಮೀಟಿಂಗ್​ ಮುನ್ನವಷ್ಟೇ ನಾಯಕತ್ವ ಬದಲಾವಣೆಯಾದ ವಿಚಾರ ತಿಳಿಯಿತು ಎಂದಿದ್ದರು. ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಚರ್ಚೆ ನಡೆದಿರಲಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿ ಶಾಕ್ ನೀಡಿದ್ರು.

ಇದನ್ನೂ ಓದಿ: ಕೊಹ್ಲಿ ಬ್ಯಾಟಿಂಗ್​ ಸ್ಲಾಟ್- 4​ಗೆ ಯಾರು ಸಮರ್ಥ.. ಯುವ ಕನ್ನಡಿಗನಿಗೆ ಸಿಗುತ್ತಾ ಚಾನ್ಸ್​?

publive-image

ವಿರಾಟ್​​ ಕೊಹ್ಲಿ ಹೇಳಿಕೆಗೆ ಗಂಗೂಲಿ ತೀವ್ರ ಅಸಮಾಧಾನಗೊಂಡಿದರು. ಆ ಬಳಿಕ ಸೌತ್ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ವಿರಾಟ್, ಟೆಸ್ಟ್ ನಾಯಕತ್ವಕ್ಕೂ ದಿಡೀರ್​​ ಗುಡ್ ಬೈ ಹೇಳಿ ಶಾಕ್ ನೀಡಿದರು. ಜಸ್ಟ್ 5 ತಿಂಗಳ ಅಂತರದಲ್ಲೇ ಮೂರು ಫಾರ್ಮೆಟ್​​ನ ನಾಯಕತ್ವದಿಂದ ಹೊರಬಂದರು. ಆ ಬಳಿಕ ಭಾರತೀಯ ಕ್ರಿಕೆಟ್​ನಲ್ಲಿ ಭಾರೀ ಹೈಡ್ರಾಮವೇ ನಡೆಯಿತು.

ನಾಯಕತ್ವ ಬಿಟ್ಟರು ಮುನಿಸು ಮುಂದುವರಿಕೆ

ಕೊಹ್ಲಿ ಪವರ್​ಕಟ್​​ ಆದ ಕೆಲ ತಿಂಗಳಲ್ಲಿ ಬಿಸಿಸಿಐನಿಂದ ಗಂಗೂಲಿ ಹೊರಬಂದರು. ಆದ್ರೆ ಮುನಿಸು ಮುಂದುವರೆದಿತ್ತು. ಇನ್​ಸ್ಟಾದಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ರು. ಬಿಸಿಸಿಐನಿಂದ ಹೊರ ಬಂದ ಗಂಗೂಲಿ, 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದರು. ಈ ಇಬ್ಬರ ನಡುವಿನ ಮುನಿಸು ಅಂದು ಕ್ಯಾಮೆರಾದಲ್ಲಿ ಜಗಜ್ಜಾಹೀರಾಗಿತ್ತು. ಆನ್​ಫೀಲ್ಡ್​ನಲ್ಲಿ ಅಗ್ರೆಸ್ಸಿವ್ ಆ್ಯಟಿಟ್ಯೂಡ್​ನಲ್ಲೇ ಟಕ್ಕರ್ ನೀಡಿದ್ದ ಕೊಹ್ಲಿ, ಗಂಗೂಲಿಗೆ ಹ್ಯಾಂಡ್​ಶೇಕ್ ನೀಡಿರಲಿಲ್ಲ.

ಗಂಗೂಲಿ ಜೊತೆಗಿನ ಮುನಿಸು ಬಿಟ್ರೆ, ವಿರಾಟ್ ನೆಗೆಟಿವ್​ ಆಗಿ ಹೆಚ್ಚು ಸದ್ದು ಮಾಡಿದ್ದು ಹೆಡ್​ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ಕೆಳಗಿಳಿದ ವಿಚಾರವಾಗಿ, ಗೌತಮ್ ಗಂಭೀರ್ ನಡುವಿನ ಕಿರಿಕ್ ವಿಚಾರವಾಗಿ ಮಾತ್ರವೇ ಆಗಿತ್ತು. ವಿರಾಟ್, ದಿ ಬೆಸ್ಟ್ ಲೀಡರ್​, ಭಾರತೀಯ ಕ್ರಿಕೆಟ್​ಗೆ ಹೊಸ ರೂಪ ನೀಡಿದ ಕ್ರಿಕೆಟರ್​​​​​​​​ ಹೌದು. ಅದೇ ರೀತಿ ಈ ವಿವಾದಗಳೂ ಕೊಹ್ಲಿ ಕರಿಯರ್​​ನ ಕಪ್ಪುಚುಕ್ಕೆಯಾಗಿ ಉಳಿದು ಬಿಟ್ವು.

ಇದನ್ನೂ ಓದಿ: ಮಧ್ಯರಾತ್ರಿ ಲುಂಗಿಯಲ್ಲಿ ದೇಶ ಬಿಟ್ಟು ಪರಾರಿಯಾದ ಮಾಜಿ ಅಧ್ಯಕ್ಷ..! ಏನಾಯ್ತು ಇವರಿಗೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment