/newsfirstlive-kannada/media/post_attachments/wp-content/uploads/2024/11/KOHLI_SMITH_2.jpg)
ಇಂಡೋ-ಆಸಿಸ್ ಬ್ಯಾಟಲ್ಗೂ ಮುನ್ನ ಕಿಂಗ್ ಕೊಹ್ಲಿ VS ಸ್ಟೀವ್ ಸ್ಮಿತ್ ಬಗ್ಗೆ ಚರ್ಚೆ ಜೋರಾಗಿದೆ. ಇವರಿಬ್ಬರ ಆಟವೇ ಸರಣಿಯ ಸೋಲು ಗೆಲುವನ್ನ ನಿರ್ಧರಿಸಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಹೈವೋಲ್ಟೆಜ್ ಸರಣಿಯ ರಿಸಲ್ಟ್ ಈ ದಿಗ್ಗಜರ ಮೇಲೆ ಡಿಪೆಂಡ್ ಆಗಿರೋದ್ಯಾಕೆ?.
ಇಂಡೋ-ಆಸಿಸ್ ಹೈವೋಲ್ಟೆಜ್ ಟೆಸ್ಟ್ ಸೀರಿಸ್ ಆರಂಭಕ್ಕೆ ಇನ್ನೊಂದು ದಿನ ಕಳೆಯಬೇಕಷ್ಟೇ. ಪರ್ತ್ನ ಬ್ಯಾಟಲ್ಫೀಲ್ಡ್ನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಮದಗಜಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. 5 ಪಂದ್ಯಗಳ ಪ್ರತಿಷ್ಟೆಯ ಸರಣಿ ಗೆಲುವಿಗೆ ಉಭಯ ತಂಡಗಳು ಪಣತೊಟ್ಟಿವೆ. ಗೆಲುವು ಇಲ್ಲಿ ಎರಡೂ ತಂಡಗಳ ಟಾರ್ಗೆಟ್.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಗಾಯದ ಸಮಸ್ಯೆ.. ಮೊದಲ ಟೆಸ್ಟ್ನಿಂದ ಸ್ಟಾರ್ ಬ್ಯಾಟರ್ ಔಟ್, ಗಿಲ್ಗೆ ಏನಾಯಿತು?
ಇಬ್ಬರ ಮೇಲೆ ನಿಂತಿದೆ ಸೋಲು-ಗೆಲುವಿನ ಭವಿಷ್ಯ.!
ಕ್ರಿಕೆಟ್ ಲೋಕದ ಹೈಫ್ರೋಫೈಲ್ ತಂಡಗಳ ಸರಣಿಗೂ ಮುನ್ನ ಪ್ರಿಡಿಕ್ಷನ್ಗಳ ಭರಾಟೆ ಜೋರಾಗಿದೆ. ಕೆಲವ್ರು ಆಸಿಸ್ ಗೆಲ್ಲುತ್ತೆ ಅಂದಿದ್ರೆ, ಕೆಲವರು ಭಾರತ ಗೆಲ್ಲುತ್ತೆ ಅಂತಿದ್ದಾರೆ. ಆದ್ರೆ, ಯಾರೇ ಗೆಲ್ಲಬೇಕು ಅಂದ್ರೂ, ಈ ಇಬ್ಬರ ಪರ್ಫಾಮೆನ್ಸ್ ನಿರ್ಣಾಯಕವಾಗಲಿದೆ ಎಂಬ ಮಾತು ಕೇಳಿ ಬರುತ್ತಿವೆ. ಸ್ಟೀವ್ ಸ್ಮಿತ್ ಸಿಡಿದು ನಿಂತ್ರೆ, ಆಸ್ಟ್ರೇಲಿಯಾಗೆ ಗೆಲುವು ಪಕ್ಕಾ. ಕಿಂಗ್ ಕೊಹ್ಲಿ ಕೆರಳಿದ್ರೆ, ಟೀಮ್ ಇಂಡಿಯಾದ್ದೇ ಜಯಭೇರಿ ಅನ್ನೋದು ಬಹುತೇಕ ಎಕ್ಸ್ಪರ್ಟ್ಗಳ ಭವಿಷ್ಯವಾಣಿ.
‘4ನೇ ಕ್ರಮಾಂಕದ ಬ್ಯಾಟರ್ಗಳ ಆಟ ನಿರ್ಣಾಯಕ’
‘ಸ್ಟೀವ್ ಸ್ಮಿತ್ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಆಟವಾಡಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಬೇರೆಯದ್ದೇ ಆಟವಾಡಿದ್ದಾರೆ. ಇಲ್ಲಿ ತುಂಬಾ ಯಶಸ್ಸನ್ನ ಕಂಡಿದ್ದಾರೆ. ಹೀಗಾಗಿ 4ನೇ ಕ್ರಮಾಂಕದ ಬ್ಯಾಟ್ಸ್ಮನ್ಗಳಲ್ಲಿ ಯಾರು ಉತ್ತಮವಾಗಿ ಆಡ್ತಾರೋ ಆ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ’
ಮೈಕಲ್ ವಾನ್, ಮಾಜಿ ಕ್ರಿಕೆಟಿಗ
ಕಾಂಗರೂ ನಾಡಲ್ಲಿ ಕೊಹ್ಲಿಯೇ ರಿಯಲ್ ಕಿಂಗ್.!
ಆಸ್ಟ್ರೇಲಿಯಾ ಅಂದ್ರೆ ವಿಶ್ವದ ಘಟಾನುಘಟಿ ಬ್ಯಾಟರ್ಗಳೇ ಬೆಚ್ಚಿ ಬೀಳುತ್ತಾರೆ. ಅದ್ರಲ್ಲೂ, ಕಾಂಗರೂ ನಾಡಲ್ಲಿ ಆಸಿಸ್ನ ಫೈರಿ ಬೌಲರ್ಗಳನ್ನ ಎದುರಿಸಲು ಹೆದರುತ್ತಾರೆ. ಆದ್ರೆ, ಆಸಿಸ್ ವಿರಾಟ್ ಕೊಹ್ಲಿಯ ಹಾಟ್ ಫೇವರಿಟ್ ಎದುರಾಳಿ. ಭಾರತ ಮಾತ್ರವಲ್ಲ, ಆಸಿಸ್ನ ಟಫ್ ಕಂಡೀಷನ್ಸ್ನಲ್ಲೂ ವಿರಾಟ್ ಕೊಹ್ಲಿ ನೆಕ್ಸ್ಟ್ ಲೆವೆಲ್ ಬ್ಯಾಟಿಂಗ್ ನಡೆಸಿದ್ದಾರೆ. ಆಸ್ಟ್ರೇಲಿಯಾ ಎದುರು ಈವರೆಗೆ 25 ಟೆಸ್ಟ್ ಪಂದ್ಯಗಳನ್ನಾಡಿರೋ ವಿರಾಟ್ ಕೊಹ್ಲಿ ಬರೋಬ್ಬರಿ 47.48ರ ಸರಾಸರಿಯಲ್ಲಿ ರನ್ ಕೊಳ್ಳೆ ಹೊಡೆದಿದ್ದಾರೆ. 8 ಸೆಂಚುರಿ, 5 ಹಾಫ್ ಸೆಂಚುರಿ ಸಿಡಿಸಿರುವ ಕಿಂಗ್ ಕೊಹ್ಲಿ, 2,042 ರನ್ಗಳಿಸಿದ್ದಾರೆ.
ಭಾರತ ತಂಡದ ಎದುರು ಸ್ಮಿತ್ ಸಾಲಿಡ್ ಆಟ.!
ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಕೂಡ ಭಾರತದ ಎದುರು ಸಾಲಿಡ್ ರೆಕಾರ್ಡ್ ಹೊಂದಿದ್ದಾರೆ. ಟೀಮ್ ಇಂಡಿಯಾ ಎದುರು ಆಡಿದ 19 ಪಂದ್ಯಗಳಲ್ಲಿ 2042 ರನ್ ಕಲೆ ಹಾಕಿದ್ದಾರೆ. ಬರೋಬ್ಬರಿ 68.87ರ ರನ್ಗಳಿಕೆಯ ಸರಾಸರಿಯನ್ನ ಹೊಂದಿರುವ ಸ್ಮಿತ್, 9 ಶತಕ, 5 ಅರ್ಧಶತಕಗಳ ಇನ್ನಿಂಗ್ಸ್ ಕಟ್ಟಿದ್ದಾರೆ.
ಸ್ಮಿತ್-ಕೊಹ್ಲಿ, ದಿಗ್ಗಜರಿಗೆ ಕಾಡುತ್ತಿದೆ ಶತಕದ ಬರ.!
ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ ಅದ್ಭುತವಾದ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ ನಿಜ. ಆದ್ರೆ, ಕಳೆದೊಂದು ವರ್ಷದಿಂದ ಸೆಂಚುರಿಗಳಿಸಲಾಗದೇ ಪರದಾಟ ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿಯಂತೂ ಈ ವರ್ಷದಲ್ಲಿ ರನ್ಗಳಿಕೆಗೆ ಪರದಾಟ ನಡೆಸಿದ್ದಾರೆ. ಈ ಹಿಂದಿನ ನ್ಯೂಜಿಲೆಂಡ್, ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಫ್ಲಾಪ್ ಶೋ ನೀಡಿದ್ದಾರೆ. 2023ರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿದ್ದ ಕೊಹ್ಲಿ, ಕಳೆದೊಂದು ವರ್ಷದಿಂದ ಮೂರಂಕಿ ಗಡಿ ದಾಟಿಲ್ಲ.
ಇದನ್ನೂ ಓದಿ: ‘ಮಹಾ’, ಜಾರ್ಖಂಡ್ ವಿಧಾನಸಭಾ ಚುನಾವಣೆ; ಇಂದು ಮತದಾನ.. ಒಟ್ಟು ಎಷ್ಟು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ?
ಸ್ಟೀವ್ ಸ್ಮಿತ್ ಕಥೆಯೂ ಭಿನ್ನವಾಗಿಲ್ಲ.. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ 2023ರ ಜೂನ್ನಲ್ಲಿ ಸೆಂಚುರಿ ಸಿಡಿಸಿದ್ದ ಸ್ಮಿತ್, ಆ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಅನ್ನೋದನ್ನ ಕಂಡಿಲ್ಲ. ಶತಕ ಬಿಡಿ.. ರನ್ಗಳಿಕೆಯ ವಿಚಾರದಲ್ಲೂ ಇನ್ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಕೊಹ್ಲಿಗೆ ಹೋಲಿಸಿದ್ರೆ, ಸ್ಮಿತ್ಗೆ ಹೋಮ್ ಅಡ್ವಾಂಟೇಜ್ ಇದ್ದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಮ್ಬ್ಯಾಕ್ನ ಎದುರು ನೋಡುತ್ತಿದ್ದಾರೆ.
ಸದ್ಯ ಕಳಪೆ ಫಾರ್ಮ್ನಲ್ಲಿದ್ರೂ, ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಉಭಯ ತಂಡಗಳ ಪಾಲಿನ ಮ್ಯಾಚ್ ವಿನ್ನರ್ಸ್ ಅನ್ನೋ ಮಾತನ್ನ ತೆಗೆದು ಹಾಕಲು ಸಾಧ್ಯವಿಲ್ಲ. ಟಫ್ ಟೈಮ್ನಲ್ಲಿ ತಂಡಕ್ಕಾಗಿ ಏಕಾಂಗಿಯಾಗಿ ಹೋರಾಟ ನಡೆಸಿದ ಇತಿಹಾಸ ಇಬ್ಬರಿಗೂ ಇದೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಇಬ್ಬರ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಯಾರು ಪ್ರತಿಷ್ಟೆಯ ಸರಣಿಯಲ್ಲಿ ಭರ್ಜರಿ ಆಟವಾಡುತ್ತಾರೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ