/newsfirstlive-kannada/media/post_attachments/wp-content/uploads/2024/05/KL-Rahul-next-captain.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲು ಇನ್ನೂ ಕೇವಲ 7 ತಿಂಗಳು ಇದೆ. ಇದಕ್ಕೂ ಮುನ್ನ ವರ್ಷದ ಕೊನೆಗೆ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಹಾಗಾಗಿ ಎಲ್ಲಾ ತಂಡಗಳು ರೀಟೈನ್ ಲಿಸ್ಟ್ ಫೈನಲ್ ಮಾಡಬೇಕಿದೆ. ರೀಟೈನ್ ಲಿಸ್ಟ್ ಬೆನ್ನಲ್ಲೇ ರಿಲೀಸ್ ಮಾಡೋ ಆಟಗಾರರ ಪಟ್ಟಿಯನ್ನು ಆರ್ಸಿಬಿ ಬಿಸಿಸಿಐಗೆ ಸಲ್ಲಿಸಬೇಕಿದೆ.
ಸದ್ಯಕ್ಕೆ ಲಭ್ಯವಾಗಿರೋ ಮಾಹಿತಿ ಪ್ರಕಾರ ಟ್ರೇಡಿಂಗ್ ಮೂಲಕ ಕೆ.ಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತರುವ ಸಾಧ್ಯತೆ ಇದೆ. ಇಲ್ಲದೆ ಹೋದಲ್ಲಿ ಮೆಗಾ ಆಕ್ಷನ್ನಲ್ಲಾದ್ರೂ ರಾಹುಲ್ ಅವರನ್ನು ಖರೀದಿ ಮಾಡಲು ಆರ್ಸಿಬಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.
ಕೆ.ಎಲ್ ರಾಹುಲ್ ಆರ್ಸಿಬಿಗೆ ಕರೆ ತರೋ ಪ್ಲಾನ್ ಯಾರದು..?
ಆರ್ಸಿಬಿ ತಂಡಕ್ಕೆ ಕೆ.ಎಲ್ ರಾಹುಲ್ ಅವರನ್ನು ಕರೆ ತರೋ ಪ್ಲಾನ್ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯದ್ದು. ಫಾಫ್ ಅವರನ್ನು ರಿಲೀಸ್ ಮಾಡಿ ಕೆ.ಎಲ್ ರಾಹುಲ್ ಅವರನ್ನು ಕ್ಯಾಪ್ಟನ್ ಮಾಡೋಣ ಎಂಬ ಅಭಿಪ್ರಾಯ ಮೊದಲು ಫ್ರಾಂಚೈಸಿ ಮುಂದಿಟ್ಟಿದ್ದು ಕೊಹ್ಲಿ ಎಂದು ತಿಳಿದು ಬಂದಿದೆ. ಅದರಲ್ಲೂ ಆರ್ಸಿಬಿಗೆ ಕೆ.ಎಲ್ ರಾಹುಲ್ ಕ್ಯಾಪ್ಟನ್ ಆಗಲೇಬೇಕು ಎಂದು ಕೊಹ್ಲಿ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:IPL 2025: ಆರ್ಸಿಬಿ ತಂಡಕ್ಕೆ ಕೊಹ್ಲಿ ಆಪ್ತನ ಎಂಟ್ರಿ; ಬೆಂಗಳೂರಿಗೆ ಬಂತು ಹಾರ್ಸ್ ಪವರ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ