ಟೈಮ್​ ಬಾಂಬ್ ಫಿಕ್ಸ್.. ವಿರಾಟ್​​ ಕೊಹ್ಲಿ ಟೆಸ್ಟ್ ನಿವೃತ್ತಿಗೆ ಹೊಸ ಟ್ವಿಸ್ಟ್‌! ಅಂತಿಮ ನಿರ್ಧಾರ ಏನು?

author-image
admin
Updated On
‘ಕಾಣೆ ಆಗಿದ್ದಾರೆ ಕೊಹ್ಲಿ..’ ಎಚ್ಚೆತ್ತುಕೊಳ್ಳದ ರನ್ ಮಷಿನ್ ವಿರುದ್ಧ ಗಂಭೀರ ಆರೋಪ..!
Advertisment
  • ರೋಹಿತ್ ಅಂತೆ ಟೆಸ್ಟ್​ನಿಂದ ನಿವೃತ್ತಿ ಹೊಂದಲು ಕೊಹ್ಲಿ​ ಬಯಕೆ
  • ನಿರ್ಧಾರ ಮರು ಚಿಂತನೆಗೆ ಬಿಸಿಸಿಐ ಮನವಿ ಮಾಡಿದ್ದು ಯಾಕೆ?
  • ವಿರಾಟ್‌ ಕೊಹ್ಲಿ ಟೆಸ್ಟ್ ಯುಗಾಂತ್ಯಕ್ಕೆ ಟೈಮ್​ ಬಾಂಬ್ ಫಿಕ್ಸ್ ಆಗಿದ್ಯಾ?

ವಿರಾಟ್​ ಕೊಹ್ಲಿ. ವಿಶ್ವ ಕ್ರಿಕೆಟ್​ ಟನ್​ಗಟ್ಟಲೇ ರನ್​ ಹೊಡೆದಿರೋ ರನ್​ ಮಷಿನ್​. ಆದ್ರೀಗ ಇದೇ ವಿರಾಟ್​, ರೋಹಿತ್ ಹಾದಿಯಲ್ಲಿ ಹೆಜ್ಜೆ ಹಾಕಲು ನಿರ್ಧರಿಸಿದ್ದಾರೆ. ತಾನು ಅತಿಯಾಗಿ ಪ್ರೀತಿಸೋ ವೈಟ್​​ ಜೆರ್ಸಿಯಿಂದ ದೂರ ಸರಿಯುವ​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ಮುನ್ಸೂಚನೆ ನೀಡಿದ್ದಾರೆ. ಈ ಕುರಿತಾಗಿ ಬಿಸಿಬಿಸಿ ಚರ್ಚೆಗಳು ನಡೀತಿದೆ.

ಟೀಮ್ ಇಂಡಿಯಾ ಅಭಿಮಾನಿಗಳಿಗೆ ಕಾದಿದ್ಯಾ ಶಾಕ್..?
ವಿರಾಟ್​​ ಕೊಹ್ಲಿ ಟೆಸ್ಟ್ ಯುಗಾಂತ್ಯಕ್ಕೆ ಟೈಮ್​ಬಾಂಬ್..?
ಇಂಗ್ಲೆಂಡ್ ಟೆಸ್ಟ್​ ಪ್ರವಾಸಕ್ಕೂ ಮುನ್ನವೇ ಕೊಹ್ಲಿ ಗುಡ್​ಬೈ..?
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟೆಸ್ಟ್​ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾಗಿದೆ. ಮೇ.7ರಂದು ಸೋಶಿಯಲ್ ಮೀಡಿಯಾ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಅಧಿಕೃತ ನಿವೃತ್ತಿ ಘೋಷಿಸಿದ್ದ ರೋಹಿತ್, ಫ್ಯಾನ್ಸ್​ಗೆ ಶಾಕ್ ನೀಡಿದ್ದರು. ಆದ್ರೀಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಕಾರಣ ವಿಶ್ವ ಕ್ರಿಕೆಟ್ ಲೋಕದ ಕಿಂಗ್ ವಿರಾಟ್​ ಕೊಹ್ಲಿ.

publive-image

ರೋಹಿತ್ ಶರ್ಮಾ ಬೆನ್ನಲ್ಲೇ ವಿರಾಟ್ ಕೊಹ್ಲಿಯ ಟೆಸ್ಟ್ ಕರಿಯರ್ ಭವಿಷ್ಯದ ಚರ್ಚೆಯಾಗ್ತಿದೆ. ಮಹತ್ವದ ಇಂಗ್ಲೆಂಡ್ ಸರಣಿಗೂ ಮುನ್ನವೇ ವಿರಾಟ್, ಟೆಸ್ಟ್​ನಿಂದ ದೂರ ಸರಿಯುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ವಿರಾಟ್​, ಟೆಸ್ಟ್​ನಿಂದ ನಿವೃತ್ತಿಯಾಗ್ತಾರೆ ಎಂಬ ಪ್ರಶ್ನೆ ಫ್ಯಾನ್ಸ್​ ಟೆನ್ಶನ್ ಹೆಚ್ಚಿಸಿದೆ.

publive-image

ಟೆಸ್ಟ್​ನಿಂದ ನಿವೃತ್ತಿ ಹೊಂದಲು ವಿರಾಟ್​ ಬಯಕೆ..!
ನಿವೃತ್ತಿ ವಿಚಾರವಾಗಿ ಬಿಸಿಸಿಐಗೆ ಕೊಹ್ಲಿ ಮಾಹಿತಿ..!
ಇಷ್ಟು ದಿನ ಐಪಿಎಲ್​​ನಲ್ಲಿ ಬ್ಯುಸಿಯಾಗಿದ್ದ ವಿರಾಟ್ ಕೊಹ್ಲಿ, ಸದ್ಯಕ್ಕೆ ಫುಲ್ ಫ್ರೀ ಆಗಿದ್ದಾರೆ. ಇನ್ನೇನು ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐನ ಸಿದ್ದತೆ ಆರಂಭವಾಗಿದ್ದು, ಬಲಿಷ್ಠ ತಂಡ ಪ್ರಕಟಿಸುವ ಕಸರತ್ತಿನಲ್ಲಿ ಬ್ಯುಸಿಯಾಗಿದೆ. ಆದ್ರೆ, ಈ ಹೊತ್ತಿನಲ್ಲೇ ಬಿಗ್​ಬಾಸ್​ಗಳಿಗೆ ಮಹತ್ವದ ಸಂದೇಶ ರವಾನಿಸಿರುವ ವಿರಾಟ್​ ಕೊಹ್ಲಿ, ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಹೊಂದಲು ಬಯಸಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡದಂತೆ ಸೂಚಿಸಿದ್ದಾರೆ. ಕೊಹ್ಲಿಯ ಈ ನಿರ್ಧಾರ ಬಿಸಿಸಿಐ ಬಿಗ್​ಬಾಸ್​​​ಗಳ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: RCB ಫ್ಯಾನ್ಸ್‌ಗೆ ಡಬಲ್ ಖುಷಿಯ ಸುದ್ದಿ.. ಮುಂದಿನ ವಾರದಿಂದ ಮತ್ತೆ IPL ಪಂದ್ಯಗಳು ಆರಂಭ? 

ವಿರಾಟ್​​ ಕೊಹ್ಲಿ ನಿರ್ಧಾರಕ್ಕೆ ಬಿಸಿಸಿಐ ರೆಡ್ ಸಿಗ್ನಲ್..!
ಮರು ಚಿಂತನೆಗೆ ಮನವಿ..! ಮನವಿ ಹಿಂದಿದೆ ಕಾರಣ!
ಟೆಸ್ಟ್​ ಕ್ರಿಕೆಟ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣಕ್ಕೆ ವಿರಾಟ್, ಟೆಸ್ಟ್​ನಿಂದ ದೂರ ಸರಿಯಲು ಇಚ್ಚಿಸಿದ್ದಾರೆ. ಟೀಮ್ ಇಂಡಿಯಾದ ಭವಿಷ್ಯದ ದೃಷ್ಟಿಯಿಂದ ಟೆಸ್ಟ್ ಸರಣಿಗೆ ಆಯ್ಕೆ ಮಾಡದಂತೆ ತಿಳಿಸಿದ್ದಾರೆ. ಆದ್ರೆ, ವಿರಾಟ್​ ಕೊಹ್ಲಿಯ ನಿರ್ಧಾರಕ್ಕೆ ಬಿಸಿಸಿಐ ಬ್ರೇಕ್ ಹಾಕಿದೆ. ಈ ನಿವೃತ್ತಿ ವಿಚಾರವನ್ನ ಮರು ಪರೀಶೀಲಿಸುವಂತೆ ಮನವಿ ಮಾಡಿರುವ ಅಜಿತ್ ಅಗರ್ಕರ್​ ನೇತೃತ್ವದ ಸೆಲೆಕ್ಷನ್ ಕಮಿಟಿ, ಕಾಲಾವಕಾಶ ನೀಡಿದೆ. ಅಷ್ಟೇ ಅಲ್ಲ. ಮನವೊಲಿಕೆಯ ಪ್ರಯತ್ನವನ್ನ ಮಾಡಿರುವ ಸೆಲೆಕ್ಷನ್ ಕಮಿಟಿ, ಶೀಘ್ರವೇ ಗುಡ್​ ನ್ಯೂಸ್ ತಿಳಿಸುವಂತೆ ಕೊಹ್ಲಿಗೆ ಮನವಿ ಮಾಡಿದೆ. ಇದಕ್ಕೆ ಕಾರಣ ಇಂಗ್ಲೆಂಡ್ ಕಂಡೀಷನ್ಸ್​ನಲ್ಲಿ ವಿರಾಟ್ ಆಟ.

publive-image

ವಿರಾಟ್ ಕೊಹ್ಲಿಗೆ ಹೋಲಿಸಿದ್ರೆ, ಇಂಗ್ಲೆಂಡ್ ಕಂಡೀಷನ್ಸ್​ನಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರ ಕೆ.ಎಲ್.ರಾಹುಲ್ ಬಿಟ್ರೆ, ಮತ್ತೊಬ್ಬರಿಲ್ಲ. ಹೀಗಾಗಿ ಯುವ ಆಟಗಾರರ ಜೊತೆಗೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದರೆ, ತಂಡಕ್ಕೆ ಅನುಕೂಲ ಅನ್ನೋದು ಸೆಲೆಕ್ಷನ್ ಕಮಿಟಿಯ ಲೆಕ್ಕಾಚಾರ ಎನ್ನಲಾಗ್ತಿದೆ.

ಏನಾಗಿರಲಿದೆ ವಿರಾಟ್ ಕೊಹ್ಲಿಯ ಅಂತಿಮ ನಿರ್ಧಾರ..?
ಗುಡ್​ ಬೈ ಫಿಕ್ಸಾ..? ಇಂಗ್ಲೆಂಡ್ ಸರಣಿ ತನಕ ಆಡ್ತಾರಾ..?
ವಿರಾಟ್ ಅಂತಿಮ ನಿರ್ಧಾರ ಏನು..? ಕ್ರಿಕೆಟ್ ಅಭಿಮಾನಿಗಳಿಂದ ಹಿಡಿದು ದಿಗ್ಗಜ ಆಟಗಾರರ ತನಕ ಕೊಹ್ಲಿ, ತಮ್ಮ ನಿರ್ಧಾರಕ್ಕೆ ಕಟು ಬೀಳ್ತಾರಾ..? ಮನಸ್ಸು ಬದಲಿಸಿ ಇಂಗ್ಲೆಂಡ್ ಟೆಸ್ಟ್​​ ಸರಣಿಯನ್ನಾಡಲು ಗ್ರೀನ್ ಸಿಗ್ನಲ್ ನೀಡ್ತಾರಾ ಎಂಬ ಪ್ರಶ್ನೆ ಹರಿದಾಡ್ತಿದೆ. ಈ ನಿಟ್ಟಿನಲ್ಲೇ ಬಿಸಿಸಿಐ, ವಿರಾಟ್​ ಕೊಹ್ಲಿಯ ಆಪ್ತ ಮೂಲಗಳಿಂದ ಮನವೊಲಿಕೆಯ ಪ್ರಯತ್ನ ಮಾಡ್ತಿದೆ. ಶ್ರೀಘ್ರವೇ ಇದಕ್ಕೆ ಸ್ಪಷ್ಟ ಉತ್ತರವೂ ಸಿಗಲಿದೆ. ಆದ್ರೆ, ಸದ್ಯದ ಪರಿಸ್ಥಿತಿ ನೋಡಿದ್ರೆ. ವಿರಾಟ್ ನಿವೃತ್ತಿಯ ನಿರ್ಧಾರದಿಂದ ವಾಪಸ್ ಬಂದರು. ಇಂಗ್ಲೆಂಡ್ ಸರಣಿಯನ್ನಾಡುವ ಕಂಡೀಷನ್ಸ್​ ಮೇಲೆಯೇ ಆಡೋ ಚಾನ್ಸ್​ ಇದೆ. ಯಾಕಂದ್ರೆ, ಈಗಾಗಲೇ ಟೆಸ್ಟ್​ ತಂಡದಲ್ಲಿ ಹಲವು ಬದಲಾವಣೆಯಾಗಿದೆ. ಹೊಸ ಆಟಗಾರರು ಕಳೆದೊಂದು ವರ್ಷದಿಂದ ಭರವಸೆ ಹುಟ್ಟಿಹಾಕಿದ್ದಾರೆ. ಹೀಗಾಗಿ ಇದೇ ನಿವೃತ್ತಿಗೆ ಸಕಾಲ ಎಂಬ ದೃಢ ನಂಬಿಕೆಯೂ ಕೊಹ್ಲಿಗಿದೆ.

publive-image

36 ವರ್ಷದ ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಯ ಅಂಚಿನಲ್ಲಿರುವುದಂತು ಸತ್ಯ. ಆದ್ರೆ, ಅದು ಸದ್ಯಕ್ಕೆ ಬೇಡ ಎಂಬುದು ಬಿಸಿಸಿಐನ ನಿರ್ಧಾರ. ಹೀಗಾಗಿ ಕೊಹ್ಲಿ, ತಮ್ಮ ಮನಸ್ಸು ಬದಲಿಸಲಿದ್ದಾರಾ..? ಇಲ್ಲ ಇಂಗ್ಲೆಂಡ್ ಸರಣಿಯ ಮೂಲಕ ಅದ್ಧೂರಿ ವಿದಾಯ ಹೇಳಲು ಒಪ್ಪಿಗೆ ನೀಡ್ತಾರಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment