newsfirstkannada.com

‘82 ಅಲ್ಲ, ಶತಕ ಸಿಡಿಸೋದು ನನ್ನ ಗುರಿ’- ಪಾಕ್​​​ಗೆ ವಾರ್ನಿಂಗ್​​ ಕೊಟ್ಟ ಕಿಂಗ್​​ ಕೊಹ್ಲಿ ಹೇಳಿದ್ದೇನು..?

Share :

Published September 1, 2023 at 7:05pm

    ನಾಳೆ ಭಾರತ, ಪಾಕಿಸ್ತಾನ ನಡುವಿನ ಮಹತ್ವದ ಪಂದ್ಯ

    ಪಾಕ್​​ ವಿರುದ್ಧ ಗೆಲ್ಲಲು ಈತನೇ ಮಾಸ್ಟರ್​​ ಮೈಂಡ್..!

    ಬಾಬರ್​ ಟೀಮ್​​​ಗೆ ಎಚ್ಚರಿಕೆ ಕೊಟ್ಟ ವಿರಾಟ್​​ ಕೊಹ್ಲಿ

ಈಗಾಗಲೇ ಬಹುನಿರೀಕ್ಷಿತ 2023ರ ಏಷ್ಯಾಕಪ್​​​​ ಟೂರ್ನಿ ಆರಂಭವಾಗಿದೆ. ಸೆಪ್ಟೆಂಬರ್​​ 2ನೇ ತಾರೀಕು ಅಂದರೆ ನಾಳೆ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಪಾಕ್​​ ಮತ್ತು ಭಾರತ ತಂಡಗಳು ಭಾಗಿಯಾಗಲಿವೆ. ಇನ್ನು, ಈ ಪಂದ್ಯಕ್ಕಾಗಿ ಇಡೀ ಕ್ರೀಡಾ ಜಗತ್ತೇ ಎದುರು ನೋಡುತ್ತಿದೆ. ಅದರಲ್ಲೂ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟರ್​​ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.

ಕಳೆದ ವರ್ಷ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕ್​​ ಕಾದಾಟ ನಡೆಸಿದ್ದವು. ಅಂದು ಪಾಕ್​ ಎದುರು ಭಾರತ ಸೋತು ಹೋಗಲಿದೆ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿತ್ತು. ಬಳಿಕ ಅದ್ಭುತ ಬ್ಯಾಟಿಂಗ್​ ಮಾಡಿದ ವಿರಾಟ್ ಕೊಹ್ಲಿ ತಮ್ಮ ಅಸಲಿ ಖದರ್ ತೋರಿಸಿದರು. ಅಜೇಯ 82 ರನ್​ ಸಿಡಿಸಿ ಭಾರತವನ್ನು ಗೆಲ್ಲಿಸಿದ್ದರು. ಅಂದಿನ ಪಂದ್ಯವನ್ನು ಯಾರು ಮರೆಯಲು ಸಾಧ್ಯವಿಲ್ಲ. ಹೀಗಾಗಿ ನಾಳೆಯ ಪಂದ್ಯದ ಗೆಲುವು ಕೂಡ ಕೊಹ್ಲಿ ಆಟದ ಮೇಲೆ ನಿಂತಿದೆ. ಹೀಗಿರುವಾಗಲೇ ಈ ಬಗ್ಗೆ ಕೊಹ್ಲಿ ಮಾತಾಡಿದ್ದಾರೆ.

ನಾನು ಯಾವಾಗಲೂ ಬ್ಯಾಟಿಂಗ್ ಸುಧಾರಣೆಗೆ ಒತ್ತು ನೀಡುತ್ತೇನೆ. ಹೀಗಾಗಿಯೇ ಕಳೆದ ಆರು ತಿಂಗಳಲ್ಲಿ ನಡೆದ ಎಲ್ಲಾ ಅಭ್ಯಾಸ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ. ಇದರ ಪರಿಣಾಮ ಟೀಮ್ ಇಂಡಿಯಾದಲ್ಲಿ ನಾನು ಬೆಸ್ಟ್​ ಪರ್ಫಾಮ್​​​ ಮಾಡಲು ಸಾಧ್ಯವಾಗಿದೆ. ಈ ಬಾರಿ 82 ಅಲ್ಲ, ಸೆಂಚೂರಿ ಬಾರಿಸಿ ಟೀಂ ಇಂಡಿಯಾವನ್ನು ಗೆಲ್ಲಿಸೋದೆ ನನ್ನ ಗುರಿ ಎಂದಿದ್ದಾರೆ. ಈ ಮೂಲಕ ಪಾಕ್​​ ತಂಡಕ್ಕೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಪಾಕ್​​ ವಿರುದ್ಧ ಮ್ಯಾಚ್​ಗೆ ಬಲಿಷ್ಠ ಟೀಂ ಇಂಡಿಯಾ!

ಕ್ಯಾಪ್ಟನ್​ ರೋಹಿತ್​ ಶರ್ಮಾ, ಚೀಫ್​ ಸೆಲೆಕ್ಟರ್​​ ಅಜಿತ್​ ಅಗರ್ಕರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ಬಳಿಕ ಏಷ್ಯಾಕಪ್​​ಗಾಗಿ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. 17 ಸದಸ್ಯರನ್ನು ಒಳಗೊಂಡ ಟೀಂ ಇಂಡಿಯಾ ಪ್ರಕಟವಾಗಿದ್ದು, ಈ ಬಾರಿ ಕೂಡ ಏಷ್ಯಾಕಪ್​​ನಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್​ ಆಲ್​ರೌಂಡರ್​​​ ಹಾರ್ದಿಕ್​ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘82 ಅಲ್ಲ, ಶತಕ ಸಿಡಿಸೋದು ನನ್ನ ಗುರಿ’- ಪಾಕ್​​​ಗೆ ವಾರ್ನಿಂಗ್​​ ಕೊಟ್ಟ ಕಿಂಗ್​​ ಕೊಹ್ಲಿ ಹೇಳಿದ್ದೇನು..?

https://newsfirstlive.com/wp-content/uploads/2023/08/VIRAT_KOHLI-2.jpg

Load More