/newsfirstlive-kannada/media/post_attachments/wp-content/uploads/2024/07/VIRAT_KOHLI_EAR_RING.jpg)
ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕಿವಿಯಲ್ಲಿ ಇತ್ತೀಚಿನ ದಿನಗಳಲ್ಲಿ SILVER EARRING (ಕಿವಿಯಲ್ಲಿನ ಸಿಲ್ವರ್ ರಿಂಗ್) ಕಾಣ್ತಿದೆ. ಫ್ಯಾಶನ್ ಉದ್ದೇಶಕ್ಕಾಗಿ ಕೊಹ್ಲಿ EARRING ಧರಿಸ್ತಿಲ್ಲ. ಇದ್ರ ಹಿಂದೆ ಒಂದು ಬಲವಾದ ನಂಬಿಕೆಯಿದೆ. ಅದೇನದು ಗೊತ್ತಾ?.
ಇದನ್ನೂ ಓದಿ: ಮೊಬೈಲ್ ಚಾರ್ಜಿಂಗ್ ಹಾಕುವಾಗ ಹುಷಾರ್.. ಪಿಜಿಯಲ್ಲಿ ವಿದ್ಯಾರ್ಥಿ ಸಾವು
ವರ್ಷಗಳು ಕಳೆದಂತೆ ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯಲ್ಲಿ ಸಿಕ್ಕಾಪಟ್ಟೆ ಬದಲಾವಣೆಗಳಾಗಿವೆ. ಅದ್ರಲ್ಲೂ ಮುಖ್ಯವಾಗಿ 3 ವರ್ಷಗಳ ಕಳಪೆ ಫಾರ್ಮ್ ಸುಳಿಗೆ ಸಿಲುಕಿ ಕಮ್ಬ್ಯಾಕ್ ಮಾಡಿದ ಬಳಿಕ ಜೀವನದಲ್ಲಿ ಹಲವು ಬದಲಾವಣೆಗಳನ್ನ ಮಾಡಿಕೊಂಡಿದ್ದಾರೆ. ಮೊದಲು ನಾನು ಪೂಜೆ-ಪುನಸ್ಕಾರ ಮಾಡುವರಂತೆ ಕಾಣ್ತೀನಾ ಅಂತಿದ್ದ ಕೊಹ್ಲಿ, ಈಗ ಮಾತು-ಮಾತಿಗೆ ದೇವರ ಭಜನೆ ಮಾಡ್ತಿದ್ದಾರೆ. ಹಲವು ನಂಬಿಕೆಗಳನ್ನೂ ರೂಢಿಸಿಕೊಂಡಿದ್ದಾರೆ. ಇತ್ತೀಚೆಗೆ ಕಿವಿಯಲ್ಲಿ ಕಾಣಿಸ್ತಿರೋ SILVER EARRING ಕೂಡ ಆ ನಂಬಿಕೆಯ ಭಾಗವಾಗಿದೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ ಸ್ಥಾನ ತುಂಬುವ ಯಂಗ್ ಪ್ಲೇಯರ್ಸ್ ಇವರೇ.. ಈ ಯುವ ಬ್ಯಾಟ್ಸ್ಮನ್ಸ್ಗೆ ಇದೆ ಆ ಖದರ್
ಕಳೆದ ವರ್ಷದ ವೆಸ್ಟ್ ಇಂಡೀಸ್ ಪ್ರವಾಸದಿಂದ ವಿರಾಟ್ ಕೊಹ್ಲಿ ಕಿವಿಯಲ್ಲಿ SILVER EARRING ಕಾಣಿಸ್ತಿದೆ. ಇದ್ರ ಹಿಂದಿನ ಕಾರಣ ಫ್ಯಾಶನ್ ಅಲ್ಲ. ಒಂದು ಬಲವಾದ ನಂಬಿಕೆ. ಹೌದು.. ಈ SILVER EARRING ಅನ್ನ ಎನರ್ಜಿ ಬೂಸ್ಟರ್ ಎಂದು ಕೊಹ್ಲಿ ನಂಬ್ತಾರೆ. ಮೈದಾನದಲ್ಲಿ ಆಡುವಾಗ, ಜಿಮ್ ಸೆಷನ್, ಟ್ರೈನಿಂಗ್ ಸೆಷನ್ಗಳಲ್ಲಿ ಇದ್ರಿಂದ ನನ್ನ ಎನರ್ಜಿ ಹೆಚ್ಚಾಗುತ್ತೆ ಅನ್ನೋದು ಕೊಹ್ಲಿಯ ನಂಬಿಕೆ. ಹೀಗಾಗಿ ಈ ಕಿವಿಯೋಲೆಯನ್ನ ಧರಿಸೋ ಅಭ್ಯಾಸ ಮಾಡಿಕೊಂಡಿದ್ದಾರೆ. ಕರಿಯರ್ ಆರಂಭದಲ್ಲಿ ಅಂದ್ರೆ ಅಂಡರ್ 19 ದಿನಗಳಲ್ಲೂ ಕೊಹ್ಲಿ ಕಿವಿಯೋಲೆಯನ್ನ ಧರಿಸ್ತಿದ್ರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ