T20 ಆಯ್ತು.. ಈಗ ಮತ್ತೊಂದು ಫಾರ್ಮೆಟ್​ಗೂ ಗುಡ್ ಬೈ ಹೇಳ್ತಾರಾ! ಕೊಹ್ಲಿಯ ಈ ನಿರ್ಧಾರಾ ನಿಜನಾ?

author-image
AS Harshith
Updated On
ವಿರಾಟ್​​ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವೇನು.. ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟರ್​ ಶಾಕಿಂಗ್ ಹೇಳಿಕೆ!
Advertisment
  • 17 ವರ್ಷದ ವೃತ್ತಿ ಜೀವನದಲ್ಲಿ ಕಿಂಗ್ ಆಗಿ ಮೆರೆದ ಕೊಹ್ಲಿ
  • ಅಭಿಮಾನಿಗಳಿಗೆ ಶಾಕ್​ ನೀಡ್ತಾರಾ ವಿರಾಟ್​ ಕೊಹ್ಲಿ
  • ಜಸ್ಟ್​ ಏಳೇ ಏಳು ತಿಂಗಳಲ್ಲಿ ಉತ್ತರ ಸಿಗುವ ಸಾಧ್ಯತೆ

T20 ವಿಶ್ವಕಪ್ ಗೆಲುವಿನೊಂದಿಗೆ ವಿರಾಟ್, ಟಿ20 ಫಾರ್ಮೆಟ್​ನಿಂದ ನಿರ್ಗಮಿಸಿದ್ದಾಯ್ತು. ಇದೀಗ ಅದೇ ರೀತಿ ಮತ್ತೊಂದು ಫಾರ್ಮೆಟ್​​ನಿಂದ ಕಿಂಗ್​​ ಕೊಹ್ಲಿ ತೆರೆ ಮರೆಗೆ ಸರಿಯುತ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಜಸ್ಟ್​ ಏಳೇ ಏಳು ತಿಂಗಳಲ್ಲಿ ಉತ್ತರ ಸಿಗುವ ಎಲ್ಲಾ ಸಾಧ್ಯತೆಯೂ ಇದೆ. ಅದ್ಯಾವ ಫಾರ್ಮೆಟ್? ಏನು? ಇಲ್ಲಿದೆ ನೋಡಿ ಆ ಕುರಿತ ಮಾಹಿತಿ

ವಿರಾಟ್ ಕೊಹ್ಲಿ. ವಿಶ್ವ ಕ್ರಿಕೆಟ್​ನ ಅಗ್ರಜ. ಈ ದಿಗ್ಗಜನ ಆಟಕ್ಕೆ ಮನಸೋತ ಅಭಿಮಾನಿ ಬಳಗ ಎಷ್ಟೋ. ಮುರಿದ ದಾಖಲೆಗಳೆಷ್ಟೋ. ವಿಶ್ವ ಕ್ರಿಕೆಟ್​ ಸಾಮ್ರಾಟನಾಗಿ ಅಧಿಪತ್ಯ ನಡೆಸ್ತಿರುವ ವಿರಾಟ್, ವೀರಾವೇಶಕ್ಕೆ ಥಂಡ ಹೊಡೆದ ಬೌಲರ್​ಗಳು ಅದೆಷ್ಟೋ.. 17 ವರ್ಷದ ವೃತ್ತಿ ಜೀವನದಲ್ಲಿ ಕಿಂಗ್ ಆಗಿಯೇ ಮೆರೆದ ಈ ಸಾಮ್ರಾಟ. ಆನ್​ ಫೀಲ್ಡ್​ನಲ್ಲಿ ಕಟ್ಟಿ ಕೊಟ್ಟ ನೆನಪುಗಳು ನಿಜಕ್ಕೆ ಲೆಕ್ಕಿಕ್ಕಿಲ್ಲ. ಆದ್ರೀಗ ಇದೇ ವಿರಾಟ್​​​​​​​​​​​​​​​​​​​​​​ ಕೊಹ್ಲಿ, ಇಷ್ಟರಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ನೀಡ್ತಾರಾ ಎಂಬ ಅನುಮಾನ ಹುಟ್ಟಿಕೊಂಡಿದೆ.

publive-image

ವೈಟ್​ಬಾಲ್​​​ಗೆ ಸಂಪೂರ್ಣ ಗುಡ್​ ಬೈ ಹೇಳ್ತಾರಾ ಕೊಹ್ಲಿ..?

ಟಿ20 ವಿಶ್ವಕಪ್​ನ ಅವಿಸ್ಮರಣೀಯ ಗೆಲುವಿನ ವಿದಾಯ ಪಡೆದ ವಿರಾಟ್ ಕೊಹ್ಲಿ, ಈಗ ಮತ್ತೊಂದು ಫಾರ್ಮೆಟ್​ನಿಂದಲೂ ತೆರೆಮರೆಗೆ ಸರಿಯುವ ಕಾಲ ಸನ್ನಿಹಿತವಾಗಿದೆ. ಟಿ20 ಫಾರ್ಮೆಟ್​ನಂತೆಯೇ ಏಕದಿನ ಕ್ರಿಕೆಟ್​ನಿಂದಲೂ ದೂರ ಸರಿಯುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಈಗಾಗಲೇ ಕೌಂಟ್​ಡೌನ್ ಕೂಡ ಶುರುವಾಗಿದೆ.

ಇದನ್ನೂ ಓದಿ: ಬೇಲಿ ಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು 6 ಮಕ್ಕಳು ಅಸ್ವಸ್ಥ.. ಸದ್ಯದ ಪರಿಸ್ಥಿತಿ ಹೇಗಿದೆ?

7 ತಿಂಗಳ ಬಳಿಕ ಏಕದಿನ ಫಾರ್ಮೆಟ್​ಗೆ ಗುಡ್​ಬೈ..?

ಸದ್ಯ 35ರ ವಿರಾಟ್, ಇದೇ ನವೆಂಬರ್​ ಬಳಿಕ 36ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಮುಂದಿನ 2027ರ ಏಕದಿನ ವಿಶ್ವಕಪ್​ ವೇಳೆಗೆ ವಿರಾಟ್​ ಕೊಹ್ಲಿ ವಯಸ್ಸು 39 ಆಗಿರಲಿದೆ. ಹೀಗಾಗಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನೊಂದಿಗೆ ಏಕದಿನ ಫಾರ್ಮೆಟ್​ಗೂ ಗುಡ್ ಬೈ ಹೇಳುವ ಲೆಕ್ಕಚಾರ ಕೊಹ್ಲಿಯದ್ದಾಗಿದೆ. ಅಕಸ್ಮಾತ್ ಇದೇ ನಡೆಯೋದಾದ್ರೆ, ಮುಂದಿನ 7 ತಿಂಗಳು ಮಾತ್ರವೇ ವಿರಾಟ್​, ಏಕದಿನ ಫಾರ್ಮೆಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆರಳೆಣಿಕೆ ಪಂದ್ಯಗಳನ್ನಷ್ಟೇ ಆಡಲಿದ್ದಾರೆ.

publive-image

ಸೀನಿಯರ್ಸ್​ಗೆ ಹೆಡ್ ಕೋಚ್ ಗಂಭೀರ್ ವಿಧಿಸಿದ್ದಾರೆ ಷರತ್ತು..!

ಸದ್ಯ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದಿರುವ ಗೌತಮ್ ಗಂಭೀರ್, ಸೀನಿಯರ್ ಪ್ಲೇಯರ್ಸ್​ಗೆ ಡೈಡ್ ಲೈನ್ ಕೂಡ ಫಿಕ್ಸ್​ ಮಾಡಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರದರ್ಶನದ ಆಧಾರದಲ್ಲಿ ಕೆಲವರಿಗೆ ಗೇಟ್​​​ಪಾಸ್ ನೀಡುವ ಷರತ್ತು ಬಿಗ್​​​​ಬಾಸ್​ಗಳ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಪಂಚೆ ತೊಟ್ಟ ರೈತನಿಗೆ G T ಮಾಲ್​ ಅಪಮಾನ; ತಕ್ಕಪಾಠ ಕಲಿಸಿದ BBMP; 7 ವಾರಗಳ ಕಾಲ ಬಂದ್​​!

ಅಷ್ಟೇ ಅಲ್ಲ.! 2027ರ ಏಕದಿನ ವಿಶ್ವಕಪ್​​ಗೆ ಹೊಸ ತಂಡವನ್ನು ಕಟ್ಟಬೇಕಾದ ಸವಾಲು ಕೂಡ ಇದೆ. ಇದೇ ಕಾರಣಕ್ಕೆ ವಿರಾಟ್​, ಚಾಂಪಿಯನ್ಸ್​ ಟ್ರೋಫಿ ಗೆಲುವಿನೊಂದಿಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಟೆಸ್ಟ್​ಗೆ ಮಾತ್ರವೇ ಸೀಮಿತವಾಗ್ತಾರಾ ವಿರಾಟ್ ಕೊಹ್ಲಿ..?

ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ಫಾರ್ಮೆಟ್​ಗೆ ಗುಡ್ ಬೈ ಹೇಳಲಿರುವ ​ವಿರಾಟ್​, ಟೆಸ್ಟ್​ ಕ್ರಿಕೆಟ್​ಗೆ ಮಾತ್ರ ಸೀಮಿತವಾಗೋ ಸಾಧ್ಯತೆ ಇದೆ. 2025ರ ಐಸಿಸಿ ಟೆಸ್ಟ್​ ಚಾಂಪಿಯನ್ ಶಿಪ್​ನತ್ತಲೇ ದೃಷ್ಟಿ ನೆಡಲಿರುವ ವಿರಾಟ್, ಎರಡ್ಮೂರು ವರ್ಷಗಳ ಕಾಲ ರೆಡ್​ ಬಾಲ್​ ಕ್ರಿಕೆಟ್​ನಲ್ಲಿ ಮುಂದುವರಿಯಲಿದ್ದಾರೆ. ಈ ಬಳಿಕ ಟೆಸ್ಟ್​ನಿಂದ ನಿರ್ಗಮಿಸಬಹುದು. ಹೀಗಾಗಿ ಮುಂದೆ ಎದುರಾಗುವ 2025ರ ಐಸಿಸಿ ಚಾಂಪಿಯನ್ ಟ್ರೋಫಿ, ಟೆಸ್ಟ್ ಚಾಂಪಿಯನ್​​​​​​​​​​ ಶಿಪ್​​ನತ್ತಲೇ ವಿರಾಟ್​​​​​​ ದೃಷ್ಟಿ ನೆಟ್ಟಿದೆ.

ಒಟ್ಟಿನಲ್ಲಿ..! ಈಗಷ್ಟೇ ಟಿ20 ಫಾರ್ಮೆಟ್​​ಗೆ ಗುಡ್ ಬೈ ಹೇಳಿರುವ ವಿರಾಟ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್ ಶಿಪ್​​ ಬಳಿಕ ಯಾದೆಲ್ಲಾ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment