Advertisment

RCBಗೆ ಮತ್ತೆ ಕೊಹ್ಲಿ ನಾಯಕ..? 10 ಫ್ರಾಂಚೈಸಿಗಳಲ್ಲಿ 6 ತಂಡಗಳಿಗೆ ಹೊಸ ನಾಯಕರು..!

author-image
Ganesh
Updated On
RCBಗೆ ಮತ್ತೆ ಕೊಹ್ಲಿ ನಾಯಕ..? 10 ಫ್ರಾಂಚೈಸಿಗಳಲ್ಲಿ 6 ತಂಡಗಳಿಗೆ ಹೊಸ ನಾಯಕರು..!
Advertisment
  • ಐಪಿಎಲ್​​ ಫ್ರಾಂಚೈಸಿಗಳಿಂದ ಭಾರೀ ಬದಲಾವಣೆ ನಿರೀಕ್ಷೆ
  • 2025ರ ಮೆಗಾ ಟೂರ್ನಿಯಲ್ಲಿ ಹೊಸ, ಹೊಸ ನಾಯಕರು
  • ಗಿಲ್​​ಗೆ ಕೊಕ್, ಗುಜರಾತ್ ಟೈಟನ್ಸ್​ಗೆ ನೂತನ ನಾಯಕ ಯಾರು?

ಈಗಾಗಲೇ ಐಪಿಎಲ್-2025ರ ಬಗ್ಗೆ ಭಾರೀ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಯಾವ ಫ್ರಾಂಚೈಸಿ ಎಷ್ಟು ಆಟಗಾರರ ಹಾಗೂ ಯಾರೆನ್ನೆಲ್ಲ ರಿಟೈನ್ ಮಾಡಿಕೊಳ್ಳುತ್ತದೆ ಅನ್ನೋ ಮಾತುಗಳ ನಡುವೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಪ್ಟನ್ಸಿ ವಿಚಾರ ಬಿಸಿಬಿಸಿ ಚರ್ಚೆ ಆಗ್ತಿದೆ.

Advertisment

10 ಐಪಿಎಲ್ ತಂಡಗಳ ಪೈಕಿಯಲ್ಲಿ ಬರೋಬ್ಬರಿ 6 ಫ್ರಾಂಚೈಸಿಗಳು ಹೊಸ ನಾಯಕನ ಹುಡುಕಾಟದಲ್ಲಿವೆ ಎನ್ನಲಾಗುತ್ತಿವೆ. ಕೆಲವು ಸೋಶಿಯಲ್ ಮೀಡಿಯಾ ಚರ್ಚೆಗಳ ಪ್ರಕಾರ, ಆರ್​ಸಿಬಿಗೆ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವ ಇರಲಿದೆ ಎಂಬ ಸುದ್ದಿ ಪೀಕಿಗೆ ಬಂದಿದೆ.
ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ಗೆ ಹೊಸ ನಾಯಕನ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ವಿನೇಶ್ ಫೋಗಟ್ ಗೆಲುವಿನ ಬಗ್ಗೆ ಕಂಗನಾ ರಣಾವತ್ ವ್ಯಂಗ್ಯ; ರೊಚ್ಚಿಗೆದ್ದ ಜನ..!

ಮುಂಬೈನ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯರಿಂದ ಕ್ಯಾಪ್ಟನ್ಸಿಯನ್ನು ಕಿತ್ತುಕೊಳ್ಳಲಿದೆ. ಪಾಂಡ್ಯ ಬದಲಿಗೆ ಹಿಂದಿನ ನಾಯಕ ರೋಹಿತ್​​ಗೆ ಮತ್ತೆ ಪಟ್ಟ ಕಟ್ಟಲಿದೆ. ಬೆಂಗಳೂರು ತಂಡದ ಜವಾಬ್ದಾರಿ ವಿರಾಟ್ ಕೊಹ್ಲಿಗೆ, ರಾಜಸ್ಥಾನದ ತಂಡದ ನಾಯಕತ್ವವನ್ನು ಜೋಸ್ ಬಟ್ಲರ್​ಗೆ ನೀಡಲು ಫ್ರಾಂಚೈಸಿ ಮುಂದಾಗಿವೆ ಎನ್ನಲಾಗುತ್ತಿದೆ.

Advertisment

ಜೊತೆಗೆ ಲಕ್ನೋಗೆ ನಿಕೋಲಸ್ ಪೂರನ್‌ ಕ್ಯಾಪ್ಟನ್ ಆಗಲಿದ್ದಾರೆ ಎಂದು ಹೇಳಲಾಗಿದೆ. ಗುಜರಾತ್‌ನ ನಾಯಕತ್ವ ಸ್ಥಾನದಿಂದ ಗಿಲ್​ಗೆ ಕೊಕ್ ಸಿಗಲಿದ್ದು, ರಶೀದ್ ಖಾನ್‌ ಉಸ್ತುವಾರಿ ವಹಿಸಿಕೊಳ್ಳಲಿದೆ. ಪಂಜಾಬ್ ಕಿಂಗ್ಸ್‌ನ ನಾಯಕತ್ವವನ್ನು ನಿತೀಶ್ ರಾಣಾ ವಹಿಸಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಅಭಿಮಾನಿಗಳು ಕೂಡ ತಮ್ಮದೇ ರೀತಿಯಲ್ಲಿ ಪರ-ವಿರೋಧ ಬ್ಯಾಟ್ ಬೀಸುತ್ತಿದ್ದಾರೆ.

ಇದನ್ನೂ ಓದಿ:Big Updates: ಸುನಿತಾ ವಿಲಿಯಮ್ಸ್​ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment