/newsfirstlive-kannada/media/post_attachments/wp-content/uploads/2025/01/Prasidh_Krishna_KOHLI.jpg)
ಇತ್ತೀಚೆಗೆ ನಡೆದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೇ ಟೀಮ್​​ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ವೃತ್ತಿಜೀವನದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಬಿಸಿಸಿಐ ಕೂಡ ಮುಂದಿನ ಟೆಸ್ಟ್​ ಕ್ಯಾಪ್ಟನ್​​​ ಹುಡುಕಾಟದಲ್ಲಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಜಸ್ಪ್ರೀತ್ ಬುಮ್ರಾ ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಬಹುದು. ಇದರ ಮಧ್ಯೆ ಆಸ್ಟ್ರೇಲಿಯಾದ ಮಾಜಿ ಸ್ಟಾರ್ ಕ್ರಿಕೆಟರ್​ ಆ್ಯಡಮ್​​ ಗಿಲ್‌ಕ್ರಿಸ್ಟ್ ಟೀಮ್​​ ಇಂಡಿಯಾ ಟೆಸ್ಟ್​ ಕ್ಯಾಪ್ಟನ್​ ಹೆಸರಿಸಿದ್ದಾರೆ.
ಗಿಲ್‌ಕ್ರಿಸ್ಟ್ ಏನಂದ್ರು?
ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತಷ್ಟು ಯಶಸ್ಸು ಸಾಧಿಸುತ್ತಾರೆ ಅನ್ನೋ ನಂಬಿಕೆ ಇಲ್ಲ. ಬಹುಶಃ ಇವರು ಚಾಂಪಿಯನ್ಸ್​ ಟ್ರೋಫಿ ಆಡಬಹುದು. ಇಂಗ್ಲೆಂಡ್ ವಿರುದ್ಧ ಕೆಲವು ಪಂದ್ಯಗಳನ್ನು ಆಡಬಹುದು. ಬುಮ್ರಾ ಅವರನ್ನು ಪೂರ್ಣ ಸಮಯದ ಟೆಸ್ಟ್ ನಾಯಕನನ್ನು ಮಾಡಲು ಬಿಸಿಸಿಐ ಹಿಂದೇಟು ಹಾಕಬಹುದು. ಕೊಹ್ಲಿ ಮತ್ತೆ ಟೆಸ್ಟ್​ ಕ್ಯಾಪ್ಟನ್​ ಆದ್ರೂ ಅಚ್ಚರಿಪಡೋ ಅಗತ್ಯವಿಲ್ಲ ಎಂದರು ಗಿಲ್​ಕ್ರಿಸ್ಟ್​​.
ಮತ್ತೆ ಕೊಹ್ಲಿ ಕ್ಯಾಪ್ಟನ್​​​
ಟೀಮ್​ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ರ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಹಾಗಾಗಿ ಕ್ಯಾಪ್ಟನ್​​ ಬದಲಾವಣೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಟೀಮ್ ಇಂಡಿಯಾ ಮುಂದೆ ಇಂಗ್ಲೆಂಡ್​ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ರೋಹಿತ್ ಇಂಗ್ಲೆಂಡ್‌ಗೆ ಹೋಗುವುದು ಅನುಮಾನ. ಹಾಗಾಗಿ ಕೊಹ್ಲಿಯೇ ಮತ್ತೆ ಕ್ಯಾಪ್ಟನ್​ ಆಗಬಹುದು ಎಂದರು.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ 1-3 ಅಂತರದಿಂದ ಸೋಲು ಕಂಡಿದೆ. ಈ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಟಾರ್ ಬ್ಯಾಟರ್ ರೋಹಿತ್​ ಶರ್ಮಾ ಫಾರ್ಮ್​ನಲ್ಲೇ ಇರಲಿಲ್ಲ. ಹೀಗಾಗಿ ಸರಣಿಯಲ್ಲಿ ಭಾರತ 1-3 ಅಂತರಿಂದ ಸೋತಿತು. ರೋಹಿತ್ ಶರ್ಮಾ ತಮ್ಮ ಕಳಪೆ ಫಾರ್ಮ್‌ನಿಂದ ಐದನೇ ಟೆಸ್ಟ್‌ನಿಂದ ಹೊರಗುಳಿದಿದ್ರು. ಹೀಗಾಗಿ ಇವರು ಮುಂದೆ ನಿವೃತ್ತಿ ಆಗಬಹುದು ಅನ್ನೋ ಚರ್ಚೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us