/newsfirstlive-kannada/media/post_attachments/wp-content/uploads/2025/02/SACHIN_KOHLI_POITING.jpg)
ಟಾರ್ಗೆಟ್​​ ಎಷ್ಟೇ ದೊಡ್ಡದಿರಲಿ, ಎದುರಾಳಿ ಯಾರೇ ಇರಲಿ, ಎಂತಹ ಪ್ರೆಶರ್​ ಗೇಮ್​ ಆಗಿರಲಿ, ಎಷ್ಟೇ ದೊಡ್ಡ ಬಿಗ್​ ಟೂರ್ನಮೆಂಟ್​ ಆಗಿರ್ಲಿ, ಚೇಸಿಂಗ್​ ವೇಳೆ ಕೊಹ್ಲಿ ಕಣದಲ್ಲಿದ್ರೆ ಗೆಲುವು ಭಾರತದದ್ದೇ. ಅಸಂಖ್ಯಾತ ಅಭಿಮಾನಿಗಳ ಮನದ ಈ ಮಾತು ಪಾಕ್​ ಎದುರಿನ ಪಂದ್ಯದಲ್ಲಿ ಮತ್ತೊಮ್ಮೆ ಪ್ರೂವ್​ ಆಯಿತು.
ಕೊಹ್ಲಿ, ಮಾಡ್ರನ್​ ಡೇ ಕ್ರಿಕೆಟ್​ನ ಕಿಂಗ್​. ದಿ ಮಾಸ್ಟರ್​ ಆಫ್​ ಚೇಸಿಂಗ್. ವಿಶ್ವ ಕ್ರಿಕೆಟ್​​ನ ರನ್​ಮಷಿನ್. ಈ ಕ್ರಿಕೆಟ್ ಸಾಮ್ರಾಟನ ಶ್ರೇಷ್ಠತೆಗೆ ಏಕದಿನ ಕ್ರಿಕೆಟ್​ನಲ್ಲಿ ಗಳಿಸಿದ 14 ಸಾವಿರ ರನ್​​ಗಳೇ ಸಾಕ್ಷಿ.
/newsfirstlive-kannada/media/post_attachments/wp-content/uploads/2024/09/VIRAT_KOHLI-2.jpg)
ಕ್ರೀಸ್​​​ನಲ್ಲಿರುವ ತನಕ ರನ್ ಶಿಖರ ಕಟ್ಟುವ ವಿರಾಟ್, ಚೇಸಿಂಗ್ ವೇಳೆ ಅಖಾಡದಲ್ಲಿದ್ರೆ, ಎದುರಾಳಿಗೆ ಸೋಲು ಕಟ್ಟಿಟ್ಟ ಬುತ್ತಿ. ಯಾಕಂದ್ರೆ, ಚೇಸಿಂಗ್​ ವೇಳೆ ಕ್ರೀಸ್​​​ಗೆ ಅಂಟಿಕೊಂಡು ಟೀಮ್​ನ ಗೆಲುವಿನ ದಡ ಸೇರಿಸೋದು ಅಂದ್ರೆ, ಕಿಂಗ್ ಕೊಹ್ಲಿಗೆ ಎಲ್ಲಿಲ್ಲದ ಇಷ್ಟ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್ ಪಾಕ್ ಎದುರಿನ ಹೈವೋಲ್ಟೇಜ್ ಮ್ಯಾಚ್.
ಪಾಕ್ ಎದುರು ಅಬ್ಬರಿಸಿದ ವಿಶ್ವ ಸಾಮ್ರಾಟ..!
ಇಷ್ಟು ದಿನ ಕೊಹ್ಲಿ ಫಾರ್ಮ್​​​ನಲ್ಲಿಲ್ಲ. ಚೇಸ್ ಮಾಸ್ಟರ್​ ಈಗ ಪ್ಲಾಫ್ ಮಾಸ್ಟರ್ ಅಂತಾನೇ ಜರಿದಿದ್ದರು. ಆದ್ರೀಗ ಪಾಕ್ ಎದುರಿನ ಪಂದ್ಯದಲ್ಲಿ ಎಲ್ಲಕ್ಕೂ ಉತ್ತರ ನೀಡಿದ ವಿರಾಟ್​ ಕೊಹ್ಲಿ, ಚೇಸಿಂಗ್​ನಲ್ಲಿ ನಾನೇ ಕಿಂಗ್​ ಅನ್ನೋದನ್ನ ಮತ್ತೆ ಪ್ರೂವ್​ ಮಾಡಿದ್ದಾರೆ.
ಪಾಕ್ ನೀಡಿದ್ದ 242 ರನ್​ ಗುರಿ ಬೆನ್ನಟ್ಟಿದ್ದ ಟೀಮ್ ಇಂಡಿಯಾ, 31 ರನ್​​​ ಗಳಿಸಿದ್ದಾಗಲೇ ರೋಹಿತ್ ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಚೇಸಿಂಗ್ ಸವಾಲು ಸ್ವೀಕರಿಸಿದ ಕಿಂಗ್ ಕೊಹ್ಲಿ, ಎದುರಾಳಿ ಬೌಲರ್​ಗಳನ್ನು ಇನ್ನಿಲ್ಲದೆ ಕಾಡಿದರು. ಬರೋಬ್ಬರಿ 111 ಎಸೆತ ಎದುರಿಸಿದ ವಿರಾಟ್, 7 ಬೌಂಡರಿ ಒಳಗೊಂಡ ಶತಕ ಸಿಡಿಸಿ ಸಂಭ್ರಮಿಸಿದರು. ಈ ಶತಕದೊಂದಿಗೆ ಚೇಸಿಂಗ್ ಮಾಸ್ಟರ್​ ಈಸ್ ಬ್ಯಾಕ್ ಟು ಟ್ರ್ಯಾಕ್ ಅನ್ನೋ ಸಂದೇಶ ರವಾನಿಸಿದರು.
51 ಏಕದಿನ ಶತಕ ಪೈಕಿ ಚೇಸಿಂಗ್​ ವೇಳೆ ಬಂದಿದ್ದು 28..!
ಚೇಸಿಂಗ್​ನಲ್ಲಿ ಬ್ಯಾಟಿಂಗ್​​ ಮಾಡೋದು ನಿಜಕ್ಕೂ ಸುಲಭದಲ್ಲ. ಯಾಕಂದ್ರೆ, ರನ್ ಗಳಿಸಬೇಕಾದ ಒತ್ತಡ ಇರುತ್ತೆ. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಿ ಮುನ್ನುಗ್ಗಬೇಕಾಗುತ್ತೆ. ಒಂದೇ ಒಂದು ತಪ್ಪು ಮಾಡಿದ್ರೂ, ವಿಕೆಟ್ ಖಲ್ಲಾಸ್ ಆಗುತ್ತೆ. ಇದೇ ಕಾರಣಕ್ಕೆ ಫಸ್ಟ್​ ಬ್ಯಾಟಿಂಗ್ ವೇಳೆ ಶತಕ ಮೂಡಿಬರುವುದು ಹೆಚ್ಚು. ಆದ್ರೆ, ಈ ವಿಚಾರದಲ್ಲಿ ವಿರಾಟ್​ ಕೊಹ್ಲಿ ನಿಜಕ್ಕೂ ಉಲ್ಟಾ. ಯಾಕಂದ್ರೆ, ವಿರಾಟ್​​​ ವೀರಾವೇಶ ಪ್ರದರ್ಶನ ಮಾಡೋದೆ ಚೇಸಿಂಗ್​​ನಲ್ಲಾಗಿರುತ್ತೆ. ಇದಕ್ಕೆ ಸಾಕ್ಷಿ ಏಕದಿನ ಕ್ರಿಕೆಟ್​ನಲ್ಲಿ ವಿರಾಟ್, ಚೇಸಿಂಗ್​ ವೇಳೆ​ ಸಿಡಿಸಿರುವ ಶತಕಗಳು..
ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ!
165 ಪಂದ್ಯಗಳಲ್ಲಿ ಚೇಸಿಂಗ್ ವೇಳೆ ಬ್ಯಾಟ್ ಬೀಸಿರುವ ವಿರಾಟ್, 64.34ರ ಬ್ಯಾಟಿಂಗ್ ಅವರೇಜ್​ನಲ್ಲಿ 7,979 ರನ್ ಗಳಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, 34 ಬಾರಿ ನಾಟೌಟ್ ಆಗಿಯೇ ಉಳಿದಿರುವ ವಿರಾಟ್, 40 ಅರ್ಧಶತಕ ಸಿಡಿಸಿದ್ರೆ. 28 ಶತಕಗಳು ಚೇಸಿಂಗ್ ವೇಳೆ ದಾಖಲಿಸಿದ್ದಾರೆ.
ಇದು ಏಕದಿನ ಕ್ರಿಕೆಟ್​ನಲ್ಲಿ ಚೇಸಿಂಗ್ ವೇಳೆ ದಾಖಲಿಸಿದ ಅತಿ ಹೆಚ್ಚು ಶತಕಗಳ ಸಂಖ್ಯೆಯಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ, 236 ಪಂದ್ಯಗಳಲ್ಲಿ ಚೇಸ್ ಮಾಡಿರುವ ಗಾಡ್ ಆಫ್ ಕ್ರಿಕೆಟ್ ಸಚಿನ್, ಸಿಡಿಸಿದ ಶತಕಗಳು ಜಸ್ಟ್​ 17.. ಇದು ವಿಶ್ವ ಕ್ರಿಕೆಟ್​ನ ಗ್ರೇಟೆಸ್ಟ್​ ರನ್ ಚೇಸರ್ ವಿರಾಟ್​ ಅನ್ನೋದನ್ನೇ ನಿರೂಪಿಸುತ್ತವೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಡೆಯುವ IPL ಪಂದ್ಯಗಳಿಗೆ ಜಲಕಂಟಕ.. BWSSB ಅಧ್ಯಕ್ಷರ ಸೂಚನೆ ಏನು?
/newsfirstlive-kannada/media/post_attachments/wp-content/uploads/2023/11/Kohli-and-Sachin.jpg)
ಚೇಸಿಂಗ್ ವೇಳೆ ಅತಿ ಹೆಚ್ಚು ಸೆಂಚುರಿ..!
ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 82 ಶತಕ ಸಿಡಿಸಿರುವ ವಿರಾಟ್, ಫಸ್ಟ್ ಬ್ಯಾಟಿಂಗ್​ನಲ್ಲಿ 39 ಶತಕ ಸಿಡಿಸಿದ್ರೆ. ಚೇಸಿಂಗ್​ ವೇಳೆ 43 ಶತಕ ದಾಖಲಿಸಿದ್ದಾರೆ. ಗಾಡ್ ಆಫ್ ಕ್ರಿಕೆಟ್ ಸಚಿನ್, ಮೊದಲ ಬ್ಯಾಟಿಂಗ್ ವೇಳೆ 65 ಶತಕ ದಾಖಲಿಸಿದ್ರೆ. ಚೇಸಿಂಗ್ ವೇಳೆ 35 ಶತಕ ಗಳಿಸಿ ಶತಕದ ಸರದಾರರಾಗಿದ್ದಾರೆ. ಇನ್ನು 71 ಶತಕ ಸಿಡಿಸಿರುವ ರಿಕಿ ಪಾಂಟಿಂಗ್, ಬ್ಯಾಟ್​ನಲ್ಲಿ ಮೊದಲ ಇನ್ನಿಂಗ್ಸ್ 49 ಶತಕ ಬಂದಿದ್ರೆ. ಟಾರ್ಗೆಟ್ ಬೆನ್ನಟ್ಟುವಾಗ 22 ಶತಕ ದಾಖಲಿಸಿದ್ದಾರೆ.
ಈ ಅಂಕಿಅಂಶಗಳು ವಿರಾಟ್​​ ಕೊಹ್ಲಿಯನ್ನ ಯಾಕೆ ಚೇಸಿಂಗ್​ ಮಾಸ್ಟರ್​​ ಅಂತಾರೆ ಅನ್ನೋದನ್ನೇ ಹೇಳ್ತಿವೆ. ಹಾಗಿದ್ರೂ, ಕೆಲ ತಿಂಗಳಿಂದ ಕೊಹ್ಲಿಯ ಸಾಮರ್ಥ್ಯವನ್ನೇ ಪ್ರಶ್ನಿಸಿದವರು ಅದೆಷ್ಟೋ ಜನ. ಈಗ ಆ ಎಲ್ಲಾ ಟೀಕೆಗಳಿಗೆ ಬ್ಯಾಟಿಂಗ್​ನಿಂದಲೆ ಉತ್ತರ ಕೊಟ್ಟಿರೋ ವಿರಾಟ್​​, ಬಾಸ್ ಆಫ್ ಚೇಸಿಂಗ್ ಅನ್ನೋದನ್ನ ನಿರೂಪಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us