ವಿರಾಟ್ ಕೊಹ್ಲಿಗಾಗಿ ಕ್ಯಾಪ್ಟನ್​ನಿಂದ ದೊಡ್ಡ ತ್ಯಾಗ.. ಆಯುಷ್ ಬದೋನಿ ಅಚ್ಚರಿ ಮಾಹಿತಿ..!

author-image
Ganesh
Updated On
ಕೊಹ್ಲಿ ಸೀಕ್ರೆಟ್ ಸಾಮಾನ್ಯ ಬಸ್​ ಡ್ರೈವರ್​​ಗೂ ಗೊತ್ತು.. ಬೇಡದ ವಿಚಾರಕ್ಕೆ ವಿರಾಟ್ ಟ್ರೆಂಡ್..!
Advertisment
  • ರಣಜಿ ಟ್ರೋಫಿಗೆ ಕಿಂಗ್ ವಿರಾಟ್ ಕೊಹ್ಲಿ ಕಂಬ್ಯಾಕ್
  • ಇಂದು ರೈಲ್ವೇಸ್ ವಿರುದ್ಧ ವಿರಾಟ್ ಕೊಹ್ಲಿ ಬ್ಯಾಟಿಂಗ್
  • ರಿಷಬ್ ಪಂತ್, ಹರ್ಷಿತ್ ರಾಣಾ ಕೂಡ ತಂಡದಲ್ಲಿದ್ದಾರೆ

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಇವತ್ತು ಮಹತ್ವದ ದಿನ. ಬರೋಬ್ಬರಿ 12 ವರ್ಷಗಳ ಬಳಿಕ ಮತ್ತೆ ರಣಜಿ ಪಂದ್ಯವನ್ನು ಆಡುತ್ತಿದ್ದು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳಲೇಬೇಕಿದೆ.

ಇಂದು ರೈಲ್ವೇಸ್ ವರ್ಸಸ್ ಡೆಲ್ಲಿ ತಂಡದ ನಡುವೆ ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ ಡೆಲ್ಲಿ ಪರ ಬ್ಯಾಟ್ ಬೀಸಲಿದ್ದಾರೆ. ಕೊಹ್ಲಿ ಜೊತೆ ಮತ್ತೊಬ್ಬ ಅಂತಾರಾಷ್ಟ್ರೀಯ ಸ್ಟಾರ್ ಕ್ರಿಕೆಟರ್ ರಿಷಬ್ ಪಂತ್ ಕೂಡ ಡೆಲ್ಲಿ ಪರ ಆಡಲಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ವಾಚ್ ಎಷ್ಟು ಕೋಟಿ ರೂಪಾಯಿ..? ಸ್ಟಾರ್​ ಕ್ರಿಕೆಟಿಗನ ಶ್ರೀಮಂತಿಕೆ ಇದು!

ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾಪ್ಟನ್ ಆಯುಷ್ ಬದೋನಿ, ಕೊಹ್ಲಿ ಮತ್ತು ರಿಷಬ್ ಪಂತ್ ನಮ್ಮ ತಂಡದಲ್ಲಿ ಆಡುತ್ತಿರೋದು ಖುಷಿಯ ವಿಚಾರ. ಇಬ್ಬರು ದೊಡ್ಡ ಆಟಗಾರರು ತಂಡದಲ್ಲಿ ಇರೋದು ಸ್ಫೂರ್ತಿ ತುಂಬಲಿದೆ. ಆ ಕ್ಷಣಕ್ಕಾಗಿ ನಾವು ಕಾಯುತ್ತಿದ್ದೇವೆ. ಅಲ್ಲದೇ, ವಿರಾಟ್ ಕೊಹ್ಲಿ ಅವರು 4ನೇ ಬ್ಯಾಟಿಂಗ್ ಆರ್ಡರ್​ನಲ್ಲಿ ಬ್ಯಾಟ್ ಬೀಸಲಿದ್ದಾರೆ. 4ನೇ ಸ್ಲಾಟ್​ನಲ್ಲಿ ನಾನು ಬ್ಯಾಟ್ ಬೀಸುತ್ತಿದ್ದೆ. ನಾನು ಐದನೇ ಕ್ರಮಾಂಕದಲ್ಲಿ ಆಡುತ್ತಿದ್ದು, ಕೊಹ್ಲಿ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆ ಮೂಲಕ ಕ್ಯಾಪ್ಟನ್ ಬದೋನಿ ಕೊಹ್ಲಿಗಾಗಿ ತಮ್ಮ ಸ್ಥಾನ ತ್ಯಾಗ ಮಾಡಿದ್ದಾರೆ.

ಡೆಲ್ಲಿ ತಂಡದಲ್ಲಿ ಯಾಱರು..?

ಆರ್ಯನ್ ರಾಣಾ, ಆಯುಷ್ ಸುಮಿತ್, ಧ್ರುವ್ ಕೆ. ಗಗನ್ ವ್ಯಾಟ್ಸ್, ಹಿಮಂತ್ ಸಿಂಗ್, ಕ್ಷಿತಿಜ್, ಮಯಾಂಕ್ ಜಿತೆಂದ್ರ, ಪ್ರಿಯಾಂಶ್ ಆರ್ಯ, ರೌನಕ್, ಸನತ್ ಸಂಗ್ವನ್, ವೈಭವ್, ವಿರಾಟ್ ಕೊಹ್ಲಿ, ಯಶ್ ಧುಲ್, ಅರ್ಪಿತ್ ರಾಣಾ, ಆಯುಷ್ ಬದೋನಿ (ಕ್ಯಾಪ್ಟನ್), ದಿವಿಜ್, ಹರ್ಷ ತ್ಯಾಗಿ, ಹೃತಿಕ್, ಜೊಂಟ್ಲಿ ಸಿಂಧು, ಮಯಾಂಕ್ ರಾವತ್, ಪ್ರಣಶು, ಶಿವಂ ಶರ್ಮಾ, ಶಿವಂಕ್, ಸಿದ್ಧಂತ್ ಶರ್ಮಾ, ಅನುಜ್ ರಾವತ್, ಪ್ರಣವ್ ವಿಶಾಲ್, ರಿಷಬ್ ಪಂತ್, ವ್ಯಾನ್ಸ್, ಹರ್ಷಿತ್ ರಾಣಾ, ಜಿತೇಶ್ ಸಿಂಗ್, ಮೋನಿ, ನವದೀಪ್ ಸೈನಿ, ರಾಹುಲ್, ಸಿಮ್ರಿಜಿತ್, ಸುಮಿತ್, ಸುಯೇಶ್ ಶರ್ಮಾ

ಇದನ್ನೂ ಓದಿ: ಮೊಟ್ಟೆಯ ಹಳದಿ ಲೋಳೆಯನ್ನು ಪಕ್ಕಕ್ಕೆ ಇಡುತ್ತೀರಾ? ಈ ತಪ್ಪು ಮಾಡಲೇಬೇಡಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment