/newsfirstlive-kannada/media/post_attachments/wp-content/uploads/2025/05/VIRAT-KOHLI-10.jpg)
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿರುವ ವಿರಾಟ್, ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ. ಜಮೈಕಾದ ಕಿಂಗ್ಸ್ಟನ್ನಲ್ಲಿ ಆರಂಭವಾಗಿದ್ದ ಕೊಹ್ಲಿ ಟೆಸ್ಟ್ ಕರಿಯರ್ ಆಸ್ಟ್ರೇಲಿಯಾದ ಸಿಡ್ನಿ ಪಂದ್ಯದೊಂದಿಗೆ ಅಂತ್ಯವಾಗಿದೆ.
ಈಡೇರಲಿಲ್ಲ ಕೊಹ್ಲಿಯ ಆ ಒಂದು ಕನಸು
ಬ್ಯಾಟರ್ ಆಗಿ ವಿರಾಟ್, ಟನ್ ಗಟ್ಟಲೇ ರನ್ ಗಳಿಸಿದ್ದಾರೆ. ಶತಕದ ಮೇಲೆ ಶತಕವೂ ಸಿಡಿಸಿದ್ದಾರೆ. ನಾಯಕನಾಗಿ ದೇಶ, ವಿದೇಶದಲ್ಲಿ ಟೀಮ್ ಇಂಡಿಯಾಗೆ ದಿಗ್ವಿಜಯ ತಂದಿಟ್ಟಿದ್ದಾರೆ. ಆದರೆ ಇಷ್ಟೆಲ್ಲಾ ಸಾಧನೆ ಮಾಡಿರುವ ವಿರಾಟ್ಗೆ ಒಂದು ಕೊರಗು ಕಾಡಲಿದೆ. ಅದೇ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಗಳಿಸುವ ಕನಸು.
ಇದನ್ನೂ ಓದಿ: ದ ವಾರಿಯರ್ ಕಿಂಗ್.. ಟೆಸ್ಟ್ ಕ್ರಿಕೆಟ್ ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತೆ; ಫ್ಯಾನ್ಸ್ ಓದಲೇಬೇಕಾದ ಸ್ಟೋರಿ!
ಏಕದಿನ ಕ್ರಿಕೆಟ್ನಲ್ಲಿ 10 ಸಾವಿರ ರನ್ ಗಳಿಸಿರುವ ಕೊಹ್ಲಿಗೆ, ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಗಳಿಸುವ ಮಹಾದಾಸೆ ಇತ್ತು. ಇದನ್ನ ಬಹಿರಂಗವಾಗಿಯೂ ಹೇಳಿಕೊಂಡಿದ್ರು. ಈ ಮಹಾದಾಸೆ ಈಡೇರಲು ಕೊಹ್ಲಿಗೆ 770 ರನ್ಗಳ ಅವಶ್ಯಕತೆ ಇತ್ತು. ಆದ್ರೆ ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನವೇ ಕೊಹ್ಲಿ ಕೈಗೊಂಡ ನಿರ್ಧಾರ ಆ ಕನಸನ್ನೇ ಕನಸಾಗೆ ಉಳಿಸಿ ಬಿಟ್ಟಿದೆ.
ವಿರಾಟ್ ಕೊಹ್ಲಿ ಒಬ್ಬ ಎಂಬ ಅಪ್ರತಿಮ ಆಟಗಾರ ರೆಡ್ ಬಾಲ್ ಬ್ಯಾಟಲ್ಫೀಲ್ಡ್ನಿಂದ ದೂರ ಸರಿದಿದ್ದಾರೆ. ಎಲ್ಲರಂತೆ ಸಾಮಾನ್ಯ ಆಟಗಾರನಾಗಿ ಅಸಮಾನ್ಯ ಸಾಧನೆ ಮಾಡಿ ಕೊಹ್ಲಿ, ಸೈಲೆಂಟ್ ಆಗಿ ದೂರ ಸರಿದಿದ್ದಾರೆ.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಗ್ ಶಾಕ್.. ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಕೈ ಕೊಡೋದು ಫಿಕ್ಸ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್