/newsfirstlive-kannada/media/post_attachments/wp-content/uploads/2025/04/VIRAT_KOHLI_FIFTY.jpg)
ಭಾರತ, ಪಾಕ್ ಸಂಘರ್ಷದ ಹಿನ್ನೆಲೆಯಲ್ಲಿ 2025ರ IPL ಟೂರ್ನಿ ಅಮಾನತುಗೊಳಿಸಲಾಗಿದೆ. ಆಟಕ್ಕಿಂತ ದೇಶ ಹಾಗೂ ಭಾರತೀಯ ಸೇನೆ ಮೊದಲು ಎಂದಿರುವ BCCI ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಂಕ್ರಾಮಿಕ ಕೊರೊನಾ ಕಾಲದ ಬಳಿಕ ಮತ್ತೊಮ್ಮೆ IPL ಪಂದ್ಯಗಳು ರದ್ದಾಗಿರೋದು ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ತಂದಿದೆ.
IPL ಸೀಸನ್ 18 ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಿಗೆ ಹೊಸ ಭರವಸೆ ನೀಡಿತ್ತು. ಅದರಲ್ಲೂ ಕಿಂಗ್ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, ಈ ಸಲ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದರು. ಆರ್ಸಿಬಿ ಇನ್ನೊಂದು ಪಂದ್ಯ ಗೆದ್ರೆ ಸಾಕು ಪ್ಲೇ ಆಫ್ ಸ್ಪಾಟ್ ಫಿಕ್ಸ್ ಆಗುತ್ತಿತ್ತು.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಗ್ ಶಾಕ್; IPL ಸೀಸನ್ 18 ಅಮಾನತು
ಆದರೆ ಭಾರತ, ಪಾಕಿಸ್ತಾನದ ಮಧ್ಯೆ ಉಂಟಾಗಿರುವ ಸಂಘರ್ಷದ ಪರಿಸ್ಥಿತಿಯಿಂದಾಗಿ IPL ಟೂರ್ನಿ ದಿಢೀರ್ ಅಮಾನತು ಮಾಡಲಾಗಿದೆ. BCCI ಈ ನಿರ್ಧಾರದ ಬಳಿಕ RCB ಆಟಗಾರ ವಿರಾಟ್ ಕೊಹ್ಲಿ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಹೇಳಿದ್ದೇನು?
ನಾವು ನಮ್ಮ ಸೇನೆಯ ಜೊತೆ ನಿಲ್ಲುತ್ತೇವೆ. ಅತ್ಯಂತ ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸುತ್ತಿರುವ ಭಾರತೀಯ ವೀರಯೋಧರಿಗೆ ಒಂದು ಸೆಲ್ಯೂಟ್. ನಮ್ಮ ಸೈನಿಕರ ಅಚಲ ಧೈರ್ಯ ಮತ್ತು ಅವರ ಕುಟುಂಬಗಳನ್ನ ಬಿಟ್ಟು ರಾಷ್ಟ್ರಕ್ಕಾಗಿ ಹೋರಾಡುತ್ತಿದ್ದಾರೆ. ನಮ್ಮ ಹೀರೋಗಳ ತ್ಯಾಗಕ್ಕೆ ನಾವು ಸದಾ ಋುಣಿಯಾಗಿರುತ್ತೇವೆ.
ಇದೇ ವೇಳೆ ಅನುಷ್ಕಾ ಶರ್ಮಾ ಅವರ ಪೋಸ್ಟ್‌ಗೆ ಲೈಕ್ ಮಾಡಿರುವ ವಿರಾಟ್ ಕೊಹ್ಲಿ ಜೈ ಹಿಂದ್ ಎಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ