/newsfirstlive-kannada/media/post_attachments/wp-content/uploads/2025/04/KOHLI_HEART.jpg)
ಐಪಿಎಲ್ ಪಂದ್ಯ ನಡೆಯುವಾಗ ಮೈದಾನದಲ್ಲೇ ವಿರಾಟ್ ಕೊಹ್ಲಿ ತಮ್ಮ ಹೃದಯದ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಇದು ಅಭಿಮಾನಿಗಳಿಗೆ ಬೇಸರದ ತರಿಸಿದರೂ ಕೊಹ್ಲಿ ತಮ್ಮ ಹೃದಯದ ಬಗ್ಗೆ ಸಂಜು ಸ್ಯಾಮ್ಸನ್ ಅವರನ್ನು ಕೇಳಿದ್ದು ಮಾತ್ರ ನಿಜ. ಕಿಂಗ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಮೈದಾನದಲ್ಲಿ ಏನಾಯಿತು ಎಂದರೆ..
ಜೈಪುರದ ಸವಾಯಿ ಮಾನ್ಸ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯುತ್ತಿತ್ತು. ಮೊದಲ ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ 174 ರನ್ಗಳ ಗುರಿಯನ್ನು ನೀಡಿತ್ತು. ಈ ಟಾರ್ಗೆಟ್ ಅನ್ನು ಆರ್ಸಿಬಿ ಬ್ಯಾಟ್ಸ್ಮನ್ಗಳು ಚೇಸ್ ಮಾಡುತ್ತಿದ್ದರು. ಸಾಲ್ಟ್, ವಿರಾಟ್ ಕೊಹ್ಲಿ ಆರ್ಆರ್ ವಿರುದ್ಧ ಸಿಡಿದು ನಿಂತಿದ್ದರು.
ಇದನ್ನೂ ಓದಿ: ರಣರೋಚಕ ಪಂದ್ಯ ಗೆದ್ದ ಮುಂಬೈ.. ಕನ್ನಡಿಗನ ಬ್ಯಾಟಿಂಗ್ ವ್ಯರ್ಥ, ಕೇವಲ 12 ರನ್ಗಳಿಂದ ಸೋತ ಡೆಲ್ಲಿ
ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿ ಬ್ಯಾಟಿಂಗ್ ಮುಂದುವರೆಸಿದ್ದರು. 52 ರನ್ ಗಳಿಸಿದ್ದ ಕೊಹ್ಲಿ, 15ನೇ ಓವರ್ನಲ್ಲಿ ರಾಜಸ್ಥಾನ್ ಪರ ಸ್ಪಿನ್ನರ್ ವನಿಂದು ಹಸರಂಗ್ 4ನೇ ಬಾಲ್ ಅನ್ನು ಹಾಕಿದರು. ಈ ಎಸೆತವನ್ನು ಬಾರಿಸಿದ ಕೊಹ್ಲಿ ಎರಡು ರನ್ಗೆ ಓಡಿದರು. ಮತ್ತೆ ಸ್ಟ್ರೈಕ್ಗೆ ಬಂದ ವಿರಾಟ್ ಕೊಹ್ಲಿ ಎದೆಯ ಮೇಲೆ ಕೈ ಇಟ್ಟುಕೊಂಡು ಹಾರ್ಟ್ಬೀಟ್ ಪರೀಕ್ಷಿಸುತ್ತಾ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಇದ್ದಲ್ಲಿಗೆ ತೆರಳಿದರು. ಬಳಿಕ ಸಂಜುಗೆ ನೋಡು ಎನ್ನುವಂತೆ ಹೇಳಿದಾಗ ಕೊಹ್ಲಿ ಎದೆಯನ್ನ ಸಂಜು ಸ್ಯಾಮ್ಸನ್ ಮುಟ್ಟಿ ಹಾರ್ಟ್ಬೀಟ್ ಗಮನಿಸಿ ಏನು ಆಗಿಲ್ಲ ಎಂದು ಹೇಳಿದರು.
ಆರ್ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಈ ರೀತಿಯ ಅಸ್ವಸ್ಥತೆಯನ್ನು ಅನುಭವಿಸಿರುವುದು ಇದೇ ಮೊದಲು. ಒಂದು ರನ್ಗೆ ಓಡಿ ತಮ್ಮ ಹೃದಯ ಬಡಿತವನ್ನು ಸಂಜು ಸ್ಯಾಮ್ಸನ್ ಅವರಿಂದ ಪರೀಕ್ಷಿಸಿಕೊಂಡರು. ಈ ವೇಳೆ ಕೊಹ್ಲಿ ಮುಖದಲ್ಲಿ ಏನೋ ಒಂದು ರೀತಿ ದುಗುಡು ಕಾಣುತ್ತಿತ್ತು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು ಅವರ ಫ್ಯಾನ್ಸ್ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇನ್ನು 174 ರನ್ಗಳ ಗುರಿ ಚೇಸ್ ಮಾಡಿದ ಆರ್ಸಿಬಿ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಕೊಹ್ಲಿ ಅಜೇಯ 62 ರನ್ ಗಳಿಸಿದ್ದರು.
His heartbeat must be running so fast after that double run in Jaipur heat that he had to ask Samson to check it.
Idolo is getting old. pic.twitter.com/ofMn9TLhAd
— #KesariChapter2 18th April (@mathakedarad) April 14, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ