ಕೊಹ್ಲಿ ಔಟ್ ಆಗಿರುವ ಹಿಂದೆ ಕಾಕತಾಳಿಯ.. 18 ವರ್ಷದ ಹಿಂದಿನ ಇದೇ ದಿನ ಮತ್ತೆ ರಿಪೀಟ್..!

author-image
Ganesh
Updated On
ಕೊಹ್ಲಿ ಔಟ್ ಆಗಿರುವ ಹಿಂದೆ ಕಾಕತಾಳಿಯ.. 18 ವರ್ಷದ ಹಿಂದಿನ ಇದೇ ದಿನ ಮತ್ತೆ ರಿಪೀಟ್..!
Advertisment
  • 2008, ಏಪ್ರಿಲ್ 18 ರಂದು RCBಗೆ ಚೊಚ್ಚಲ ಪಂದ್ಯ
  • ಆ ಪಂದ್ಯಕ್ಕೆ 18 ವರ್ಷ ತುಂಬಿದ ದಿನವೇ ಮ್ಯಾಚ್
  • ಅಂದೂ ಸೋಲು, ನಿನ್ನೆಯೂ ಸೋಲು, ಕೊಹ್ಲಿ ಏನ್ಮಾಡಿದ್ದರು?

ಐಪಿಎಲ್​​ನ 18ನೇ ಆವೃತ್ತಿಯ 34ನೇ ಪಂದ್ಯವು ನಿನ್ನೆ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಿತು. ಬೆಂಗಳೂರು ಹಾಗೂ ಪಂಜಾಬ್​ ತಂಡಗಳು ಮುಖಾಮುಖಿ ಆಗಿದ್ದವು. ಕಾಕತಾಳೀಯ ಎಂಬಂತೆ ವಿರಾಟ್ ಕೊಹ್ಲಿ, ಕಳೆದ 18 ವರ್ಷಗಳ ಹಿಂದೆ ನಡೆದ ಘಟನೆಯನ್ನು ಪುನರಾವರ್ತಿಸಿದ್ದಾರೆ.

ಇದನ್ನೂ ಓದಿ: ಹ್ಯಾಟ್ರಿಕ್ ಸೋಲಿನ ಬೆನ್ನಲ್ಲೇ ಆರ್​ಸಿಬಿಗೆ ಮತ್ತೊಂದು ಆಘಾತ..!

ಆ ಮೂಲಕ 18 ವರ್ಷದ ಹಿಂದೆ ನಡೆದ ಕಹಿ ಘಟನೆಯನ್ನು ನೆನಪಿಸುವಂತೆ ಮಾಡಿದ್ದಾರೆ. 18 ವರ್ಷದ ಹಿಂದೆ ಅಂದರೆ 2008, ಏಪ್ರಿಲ್ 18 ರಂದು ಆರ್​ಸಿಬಿ ಐಪಿಎಲ್​ನಲ್ಲಿ ಮೊದಲ ಪಂದ್ಯ ನಡೆಯಿತು. 2008, ಏಪ್ರಿಲ್ 18 ರಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಆರ್​ಸಿಬಿ, ಐಪಿಎಲ್​ನಲ್ಲಿ ಪ್ರಪ್ರಥಮ ಬಾರಿಗೆ ಎದುಸಿತ್ತು. ಅದು ಕೂಡ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್​ 3 ವಿಕೆಟ್​ಗೆ​ 222 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಆರ್​ಸಿಬಿ 15.1 ಓವರ್​ಗೆ 82 ರನ್​ಗಳಿಸಿ ಸರ್ವಪತನ ಕಂಡಿತ್ತು.

ಕೊಹ್ಲಿ ಕತೆ ಏನು..?

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಿದ್ದ ಕೊಹ್ಲಿ ಐದು ಬಾಲ್ ಎದುರಿಸಿ ಕೇವಲ ಒಂದು ರನ್​ಗಳಿಸಿ ಔಟ್ ಆಗಿದ್ದರು. ನಿನ್ನೆಯ ದಿನ 3 ಬಾಲ್ ಎದುರಿಸಿ ಕೇವಲ ಒಂದು ರನ್​ಗಳಿಸಿ ಔಟ್ ಆಗಿದ್ದಾರೆ. ಆ ಮೂಲಕ ಕೊಹ್ಲಿ 18 ವರ್ಷದ ಹಿಂದಿನ ದಿನವನ್ನು ಕೆಟ್ಟ ರೀತಿಯಲ್ಲಿ ನೆನಪಿಸಿಕೊಂಡಿದ್ದಾರೆ. ಅಲ್ಲದೇ 18 ವರ್ಷದ ಹಿಂದೆ ಕೆಕೆಆರ್ ವಿರುದ್ಧ ಆರ್​ಸಿಬಿ ಸೋತಿತ್ತು. ಇದೀಗ ಅದೇ ದಿನ ಪಂಜಾಬ್ ವಿರುದ್ಧ ಆರ್​ಸಿಬಿ ಸೋಲನ್ನು ಕಂಡಿದೆ.

ಇದನ್ನೂ ಓದಿ: ರಿಕ್ಕಿ ರೈ ಪ್ರಕರಣಕ್ಕೆ ಹೊಸ ತಿರುವು.. ಘಟನೆ ಬಳಿಕ ಏನೆಲ್ಲ ಆಯ್ತು..? ಟಾಪ್ 20 ಅಪ್​ಡೇಟ್ಸ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment