/newsfirstlive-kannada/media/post_attachments/wp-content/uploads/2024/06/VIRAT-KOHLI-14.jpg)
ಟೆಸ್ಟ್ ಕ್ರಿಕೆಟ್ನಲ್ಲಿ ರನ್ಗಳಿಕೆಗೆ ಪರದಾಡಿದ ವಿರಾಟ್ ಕೊಹ್ಲಿ ಇದೀಗ ವೈಟ್ಬಾಲ್ ಸವಾಲಿಗೆ ರೆಡಿಯಾಗಿದ್ದಾರೆ. ನಾಗ್ಪುರದಲ್ಲಿ ಇಂಜುರಿ ಕಾರಣಕ್ಕೆ ಮೊದಲ ಪಂದ್ಯದಿಂದ ದೂರ ಉಳಿದಿದ್ದ ಕೊಹ್ಲಿ, ಈಗ 2ನೇ ಪಂದ್ಯದಲ್ಲಿ ಆಂಗ್ಲರ ಬೇಟೆಗೆ ಸಜ್ಜಾಗಿದ್ದಾರೆ. ಆದ್ರೆ, ಕೊಹ್ಲಿ ಪಾಲಿಗೆ ಕಟಕ್ ಕಂಟಕವಾಗಿದೆ.
ಇಂಡೋ, ಇಂಗ್ಲೆಂಡ್ 2ನೇ ಏಕದಿನ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಉಭಯ ತಂಡಗಳ ಹೈವೋಲ್ಟೇಜ್ ಫೈಟ್ಗೆ ಕಟಕ್‌ನ ಬಾರಾಬತಿ ಸ್ಟೇಡಿಯಂ ಸಾಕ್ಷಿಯಾಗ್ತಿದೆ. ಮೊದಲ ಪಂದ್ಯದಲ್ಲಿ ದಿಗ್ವಿಜಯ ಸಾಧಿಸಿರೋ ಟೀಮ್ ಇಂಡಿಯಾ, ಇವತ್ತಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದ್ರೆ, ನಾಗ್ಪುರ ಪಂದ್ಯ ಸೋತಿರುವ ಇಂಗ್ಲೆಂಡ್, ಇವತ್ತಿನ ಪಂದ್ಯ ಗೆದ್ದು ಸರಣಿ ಜೀವಂತವಾಗಿಸಿಕೊಳ್ಳುವ ಹಠದಲ್ಲಿದೆ. ಈ ನಡುವೆ ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಸಂತಸ ಮನೆ ಮಾಡಿದೆ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ..
ವಿಶ್ವ ಸಾಮ್ರಾಟ ವಿರಾಟ್ ಕೊಹ್ಲಿ ಪಾಲಿಗೆ ಕಟಕ್ ಕಂಟಕ..!
ಮೊಣಕಾಲಿನ ನೋವಿನ ಕಾರಣಕ್ಕೆ ನಾಗ್ಪುರ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್, ಈಗ ಸಂಪೂರ್ಣ ಫಿಟ್ ಆಗಿದ್ದಾರೆ. ಇವತ್ತಿನ ಕಟಕ್ ಕದನದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇದು ಸಹಜವಾಗೇ ಟೀಮ್ ಇಂಡಿಯಾ ಬಲ ಹೆಚ್ಚಿಸಿದೆ. ಅಷ್ಟೇ ಅಲ್ಲ, ಸತತ ವೈಫಲ್ಯದಿಂದ ಬಳಲುತ್ತಿರುವ ಕೊಹ್ಲಿ, ಕಟಕ್ ಬ್ಯಾಟಲ್ನಲ್ಲಿ ಬೊಬ್ಬೆರೆಯಲು ಸರ್ವ ಸನ್ನದ್ಧರಾಗಿದ್ದಾರೆ. ಹೀಗಾಗಿ ಏಕದಿನ ಫಾರ್ಮೆಟ್ನಲ್ಲಿ ಕಿಂಗ್ ಕಮ್ಬ್ಯಾಕ್ ಮಾಡ್ತಾರಾ ಅನ್ನೋ ಕುತೂಹಲ ಅಭಿಮಾನಿಗಳನ್ನ ಕಾಡ್ತಿದೆ.
ಕಳಪೆ ಫಾರ್ಮ್ ಸುಳಿಗೆ ಸಿಲುಕಿರುವ ಕೊಹ್ಲಿ, ಮಹತ್ವದ ಚಾಂಪಿಯನ್ಸ್ ಟ್ರೋಫಿ ಚಾಲೆಂಜ್ಗೂ ಮುನ್ನ ಫಾರ್ಮ್ಗೆ ಮರಳೋ ಲೆಕ್ಕಾಚಾರದಲ್ಲಿದ್ದಾರೆ. ಆದ್ರೆ, ವಿರಾಟ್ ಕೊಹ್ಲಿ ಪಾಲಿಗೆ ಕಟಕ್‌ನ ಬರಮತಿ ಮೈದಾನವೇ ಕಂಟಕವಾಗಿದೆ.
50 ಏಕದಿನ ಶತಕಗಳ ಸರದಾರ ಕಟಕ್ನಲ್ಲಿ ಜೀರೋ..!
ಕೊಹ್ಲಿ.. ಏಕದಿನ ಕ್ರಿಕೆಟ್‌ನ ಲೆಜೆಂಡ್ ಅನ್ನೋದ್ರಲ್ಲಿ ನೋ ಡೌಟ್. ಇದಕ್ಕೆ ಸಾಕ್ಷಿ ಏಕದಿನ ಫಾರ್ಮೆಟ್ನಲ್ಲಿ ಕೊಹ್ಲಿ ಸಿಡಿಸಿದ 50 ಶತಕಗಳು. ಆದ್ರೆ, ಈ ಮಾಡ್ರನ್ ಡೇ ಲೆಜೆಂಡ್ ಪಾಲಿಗೆ ಕಟಕ್‌ನ ಬಾರಾಬತಿ ಸ್ಟೇಡಿಯಂ ಎಚ್ಚರಿಕೆಯ ಕರೆಗಂಟೆಯಾಗಿದೆ. ಇದಕ್ಕೆ ಕಾರಣ ಕಟಕ್ನಲ್ಲಿ ಗಳಿಸಿರುವ ರನ್.
ಭಾರತದ ಪ್ರತಿ ಸ್ಟೇಡಿಯಂನಲ್ಲಿ ವಿರಾಟ ರೂಪ ಪ್ರದರ್ಶಿಸಿರುವ ಕೊಹ್ಲಿ, ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ಫುಲ್ ಸೈಲೆಂಟ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಈ ಸ್ಟೇಡಿಯಂನಲ್ಲಿ ಒಂದೇ ಒಂದು ಶತಕ ವಿರಾಟ್ ಕೊಹ್ಲಿಯಿಂದ ಮೂಡಿ ಬಂದಿಲ್ಲ.
ಕಟಕ್ನಲ್ಲಿ ವಿರಾಟ್ ಬ್ಯಾಟಿಂಗ್
ಕಟಕ್‌ನ ಬಾರಾಬತಿಯಲ್ಲಿ 4 ಪಂದ್ಯಗಳನ್ನಾಡಿರುವ ವಿರಾಟ್, 118 ರನ್ ಗಳಿಸಿದ್ದಾರೆ. 29.5ರ ಬ್ಯಾಟಿಂಗ್ ಅವರೇಜ್ನಲ್ಲಿ ರನ್ ದಾಖಲಿಸಿರುವ ವಿರಾಟ್, 85 ರನ್ ಮಾತ್ರ ಗಳಿಸಿದ್ದಾರೆ. 104ರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಹೀಗಾಗಿ ಕಟಕ್ನಲ್ಲಿ ಕಳಪೆ ಆಟವಾಡಿರುವ ಕೊಹ್ಲಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.
ಇದನ್ನೂ ಓದಿ:ರೈತರೇ ಹುಷಾರ್!!.. ನಿಮ್ಮ ಜಾನುವಾರು ಖದೀಯಲು ಕಾರಿನಲ್ಲಿ ಬರ್ತಾರೆ ಖದೀಮರು
ಕಟಕ್ನಲ್ಲಿ ಇಂಗ್ಲೆಂಡ್ಗೆ ಆಗ್ತಾರಾ ಕೊಹ್ಲಿ ಕಂಟಕ..?
ಹೋಮ್ ಕಂಡೀಷನ್ಸ್ನಲ್ಲಿ ವಿರಾಟ್, ಇಂಗ್ಲೆಂಡ್ ಎದುರು ಅದ್ಬುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. 18 ಪಂದ್ಯಗಳಿಂದ 747 ರನ್ ಗಳಿಸಿರುವ ವಿರಾಟ್, 49.8ರ ಬ್ಯಾಟಿಂಗ್ ಅವರೇಜ್ನಲ್ಲಿ 5 ಅರ್ಧಶತಕ, 2 ಶತಕ ಸಿಡಿಸಿದ್ದಾರೆ. ಆದ್ರೆ, ಇದೇ ಸ್ಟೇಡಿಯಂನಲ್ಲಿ ಹಿಂದೆ ಇಂಗ್ಲೆಂಡ್ ಎದುರು ವಿಫಲವಾಗಿರುವ ವಿರಾಟ್, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸಿಡಿದೇಳಬೇಕಾದ ಒತ್ತಡದಲ್ಲಿದ್ದಾರೆ. ಹೀಗಾಗಿ ಇವತ್ತು ಕಟಕ್ನಲ್ಲಿ ಇಂಗ್ಲೆಂಡ್ ಪಾಲಿಗೆ ಕಂಟಕವಾಗಬೇಕು. ಇಲ್ಲ ವಿರಾಟ್, ಭವಿಷ್ಯಕ್ಕೆ ಕಂಟಕವಾಗೋದು ಗ್ಯಾರಂಟಿ.
ಇದನ್ನೂ ಓದಿ: ಪಾಕ್ ವಿರುದ್ಧ ಫೀಲ್ಡಿಂಗ್, ಕನ್ನಡಿಗನ ತಲೆಯಿಂದ ಸುರಿದ ರಕ್ತ.. ರಚಿನ್ ರವೀಂದ್ರಗೆ ಅಸಲಿಗೆ ಏನಾಯಿತು?
8 ತಿಂಗಳ ಬಳಿಕ ವೈಟ್ಬಾಲ್ ಫಾರ್ಮೆಟ್ಗೆ ಮರಳ್ತಿರುವ ವಿರಾಟ್, ಕಟಕ್ನಲ್ಲಿ ಕಿಂಗ್ ಆಗಿ ಮರೆಯೋ ಲೆಕ್ಕಾಚಾರದಲ್ಲಿದ್ದಾರೆ. ಆದ್ರೆ, ಅಂಕಿಅಂಶಗಳೂ ಮಾತ್ರ ಬೇರೆಯದ್ದೇ ಹೇಳ್ತಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ವಿರಾಟ್, ವೀರಾವೇಶ ಪ್ರದರ್ಶಿಸುವುದು ಬಹು ಮುಖ್ಯವಾಗಿದ್ದು, ಇದಕ್ಕೆ ಹೇಗೆ ಉತ್ತರ ನೀಡ್ತಾರೆ ಅನ್ನೋದು ಜಸ್ಟ್ ವೇಯ್ಟ್ ಆ್ಯಂಡ್ ಸೀ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ