/newsfirstlive-kannada/media/post_attachments/wp-content/uploads/2025/05/VIRAT_KOHLI_BATTING_NEW.jpg)
ಟೆಸ್ಟ್ ಕ್ರಿಕೆಟ್ಗೆ ಗುಡ್ಬೈ ಹೇಳಿರುವ ವಿರಾಟ್ ಕೊಹ್ಲಿ ಸದ್ಯದ ಹೆಡ್ಲೈನ್. ಹಣ ಗಳಿಕೆಯಲ್ಲಿ ಕೊಹ್ಲಿ ಇದೀಗ ಸಾವಿರ ಕೋಟಿಯ ಗಡಿ ದಾಟಿ ಮುನ್ನುಗ್ಗುತ್ತಿದ್ದಾರೆ. ಅಂದಹಾಗೆ ಅವರ ಒಟ್ಟು ಆಸ್ತಿಯ ಮೌಲ್ಯ, 1000 ಕೋಟಿಗೂ ಅಧಿಕ ಎಂದು ವರದಿಗಳು ಹೇಳಿವೆ.
Stock Gro ವರದಿ ಪ್ರಕಾರ, ಕೊಹ್ಲಿ ಅವರ ಒಟ್ಟು ಆಸ್ತಿಯ ಮೌಲ್ಯ 1,050 ರೂಪಾಯಿ ಆಗಿದೆ. ಇದರಲ್ಲಿ ಪ್ರಸ್ತುತ ಬಿಸಿಸಿಐ ಜೊತೆಗಿನ ಒಪ್ಪಂದಗಳು, ಬ್ರ್ಯಾಂಡ್ ಪ್ರಚಾರದ ರಾಯಭಾರಿ ಮೂಲಕ ಬರುವ ಆದಾಯ ಹಾಗೂ ಸೋಶಿಯಲ್ ಮೀಡಿಯಾದಿಂದ ಬರುವ ಆದಾಯ ಮತ್ತು ತಮ್ಮ ಮಾಲೀಕತ್ವದಿಂದ ಬರುವ ಬ್ರ್ಯಾಂಡ್ಸ್ ಆದಾಯೂ ಕೂಡ ಸೇರಿವೆ.
ಯಾವುದರಿಂದ ಎಷ್ಟು ಕೋಟಿ ಹಣ..?
- ಬಿಸಿಸಿಐನಿಂದ ವಾರ್ಷಿಕವಾಗಿ ಕೊಹ್ಲಿ 7 ಕೋಟಿ ಹಣ ಪಡೆಯುತ್ತಾರೆ
- ಪ್ರತಿ ಟೆಸ್ಟ್ ಪಂದ್ಯದಿಂದ 15 ಲಕ್ಷ ರೂಪಾಯಿ ಹಣ ಗಳಿಸುತ್ತಾರೆ
- ಏಕದಿನ ಪಂದ್ಯಕ್ಕೆ 6 ಲಕ್ಷ ರೂ ಪಡೆದರೆ, ಟಿ-20 ಪಂದ್ಯಗಳಿಗೆ 3 ಲಕ್ಷ ರೂ
- ಆ ಮೂಲಕ ವಾರ್ಷಿಕವಾಗಿ 15 ಕೋಟಿ ರೂಪಾಯಿ ಹಣ ಗಳಿಸುತ್ತಾರೆ
- ಬ್ರ್ಯಾಂಡ್ಗಳಾದ ವಿವೋ, Myntra, ಬ್ಲೂಸ್ಟಾರ್, ವೊಲಿನಿ, Luxor,
- HSBC, Uber, MRF, Tissot, Cintholನಿಂದ 7 ರಿಂದ 10 ಕೋಟಿ (ಜಾಹೀರಾತುಗಳಿಂದ)
- ಬ್ರ್ಯಾಂಡ್ ಎಂಡೋರ್ಸ್ಮೆಂಟ್ಗಳಿಂದ ಒಟ್ಟು 175 ಕೋಟಿ ರೂಪಾಯಿ
- ಸೋಶಿಯಲ್ ಮೀಡಿಯಾದಿಂದ ಒಟ್ಟು 8.9 ಕೋಟಿ ರೂಪಾಯಿ
- ಇನ್ಸ್ಟಾಗ್ರಾಮ್, ಟ್ವಿಟರ್ನ ಒಂದು ಪೋಸ್ಟ್ಗೆ 2.5 ಕೋಟಿ ಶುಲ್ಕ ವಿಧಿಸುತ್ತಾರೆ
- ತಮ್ಮದೇಯಾದ One8 ರೆಸ್ಟೋರೆಂಟ್, Wrogn ಹೊಂದಿದ್ದಾರೆ
- ಮುಂಬೈನಲ್ಲಿ 34 ಕೋಟಿ ಮೌಲ್ಯದ ಮನೆ, ಗುರುಗ್ರಾಮ್ನಲ್ಲಿ 80 ಕೋಟಿ ಮೌಲ್ಯದ ಬಂಗಲೆ ಹೊಂದಿದ್ದಾರೆ
- 31 ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನೂ ಹೊಂದಿದ್ದಾರೆ
- 2025ರ ಐಪಿಎಲ್ನಲ್ಲಿ ಕೊಹ್ಲಿ 21 ಕೋಟಿ ರೂಪಾಯಿ ಹಣ ಪಡೆಯುತ್ತಿದ್ದಾರೆ
ಇದನ್ನೂ ಓದಿ: ರಜತ್ KKR ವಿರುದ್ಧ ಆಡೋದು ಡೌಟ್.. ಆರ್ಸಿಬಿ ಕ್ಯಾಪ್ಟನ್ ಪಾಟೀದಾರ್ಗೆ ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ