/newsfirstlive-kannada/media/post_attachments/wp-content/uploads/2024/03/VIRAT_KOHLI_RCB_2.jpg)
ಐಪಿಎಲ್ ಸೀಸನ್ -17 ಇನ್ನೇನು ಕೇವಲ 3 ದಿನದಲ್ಲಿ ಅದ್ಧೂರಿಯಾಗಿ ಚೆನ್ನೈನಲ್ಲಿ ಆರಂಭವಾಗಲಿದೆ. ಈಗಾಗಲೇ ಎಲ್ಲ ತಂಡಗಳಿಗೆ ಎಲ್ಲ ಆಟಗಾರರು ಸೇರಿಕೊಂಡಿದ್ದಾರೆ. ಸ್ಟಾರ್​ ಪ್ಲೇಯರ್​​​ ವಿರಾಟ್​​ ಕೊಹ್ಲಿ ಕೂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದು ಆರ್​ಸಿಬಿಯ ಅನ್​ಬಾಕ್ಸ್​ ಈವೆಂಟ್​ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ಕಿಂಗ್​ ಕೊಹ್ಲಿ ಬಗ್ಗೆ ಹೊಸ ವಿಷ್ಯ ಏನೆಂದರೆ ಅವರ ಹೇರ್​ ಸ್ಟೈಲ್ ಫುಲ್ ಚೇಂಜ್ ಆಗಿದ್ದು ನ್ಯೂ ಲುಕ್​ನಲ್ಲಿ ಫುಲ್ ಸ್ಮಾರ್ಟ್ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/03/VIRAT_KOHLI_RCB_1.jpg)
ಸದ್ಯ ಇವತ್ತು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್​ ತಂಡದ ಅನ್​ಬಾಕ್ಸ್​ ಈವೆಂಟ್ ನಡೆಯುತ್ತಿದೆ. ಈ ಸಂಭ್ರಮದ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ. ಈ ಸಮಾರಂಭಕ್ಕೂ ಮೊದಲು ಮೈದಾನಕ್ಕೆ ಇಳಿದ ವಿರಾಟ್​ ಕೊಹ್ಲಿ ಹೊಸ ಹೇರ್​ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದು ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಹೋ.. ಎಂದು ಕೂಗಾಡಿದ್ದಾರೆ. ಕೈಯಲ್ಲಿ ಪ್ಯಾಡ್, ಹೆಗಲಿಗೆ ಕಿಟ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕೊಹ್ಲಿ ಫುಲ್​ ಸ್ಟೈಲೀಶ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/03/VIRAT_KOHLI_RCB-1.jpg)
ಕಿಂಗ್ ಕೊಹ್ಲಿ ನ್ಯೂ ಹೇರ್ ಸ್ಟೈಲ್​, ನ್ಯೂ ಲುಕ್​ನಲ್ಲಿ ಕಾಣಿಸಿರುವುದು ಫ್ಯಾನ್ಸ್​ಗೆ ಮತ್ತಷ್ಟು ಜೋಶ್ ತಂದಿದೆ. ಈಗಾಗಲೇ ಆರ್​ಸಿಬಿ ತಂಡಕ್ಕೆ ಬಹುತೇಕ ಪ್ಲೇಯರ್ಸ್​ ಆಗಮಿಸಿದ್ದು ಮಾರ್ಚ್​ 22 ರಂದು ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಚೆನ್ನೈ ವಿರುದ್ಧ ಮೊದಲ ಮ್ಯಾಚ್ ಇರುವುದರಿಂದ ಆರ್​ಸಿಬಿ ಫ್ಯಾನ್ಸ್​ಗೆ ಪಂದ್ಯ ವೀಕ್ಷಣೆ ಮಾಡುವ ಕುತೂಹಲ ಮತ್ತಷ್ಟು ಹೆಚ್ಚಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us