/newsfirstlive-kannada/media/post_attachments/wp-content/uploads/2025/03/Virat_Kohli_best_look.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಕ್ರಿಕೆಟ್ ಪ್ಲೇಯರ್ ವಿರಾಟ್ ಕೊಹ್ಲಿ ಸದ್ಯ ಚಾಂಪಿಯನ್​ಶಿಪ್ ಟ್ರೋಫಿ ಗೆಲುವಿನ ಸಂತಸದಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಕ್ರಿಕೆಟ್ ಹಬ್ಬ ಎಂದೇ ಹೆಸರು ಪಡೆದ ಐಪಿಎಲ್ ಪ್ರಾರಂಭವಾಗಲಿದೆ. ಇದಕ್ಕಾಗಿ ಫ್ರಾಂಚೈಸಿಗಳು ತಯಾರಿ ನಡೆಸಿವೆ. ಇದರ ನಡುವೆ ವಿಟಾಟ್ ಕೊಹ್ಲಿ ನ್ಯೂ ಹೇರ್​ ಸ್ಟೈಲ್ ಸಖತ್ ಸೌಂಡ್ ಮಾಡುತ್ತಿದೆ.
ವಿರಾಟ್​ ಕೊಹ್ಲಿ ಸದ್ಯದಲ್ಲೇ ಆರ್​ಸಿಬಿ ಟೀಮ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲೇ ನ್ಯೂ ಹೇರ್​ ಸ್ಟೈಲ್​ನಲ್ಲಿ ಕಿಂಗ್ ಕೊಹ್ಲಿ ಮಿಂಚುತ್ತಿದ್ದಾರೆ. ನ್ಯೂ ಹೇರ್​ ಸ್ಟೈಲ್​ಗೆ ತಕ್ಕಂತೆ ದಾಡಿ ಕೂಡ ಲೈಟ್ ಆಗಿ ಇದ್ದು ಹೊಸ ಲುಕ್​ನಲ್ಲಿ ವಿರಾಟ್ ಈ ಬಾರಿ ಐಪಿಎಲ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಚಾಂಪಿಯನ್ ಟ್ರೋಫಿ ಗೆಲುವಿನ ಸಂಭ್ರಮದಲ್ಲಿರುವ ಕೊಹ್ಲಿ, ಬೆಂಗಳೂರಿಗೆ ಐಪಿಎಲ್​ ಟ್ರೋಫಿ ತಂದು ಕೊಡುವ ಉತ್ಸಾಹದಲ್ಲಿದ್ದಾರೆ.
ಇದನ್ನೂ ಓದಿ: ಜನರಿಗೆ ಹಾಲಿನ ಬಿಸಿ; ಅಧಿವೇಶನದ ಬಳಿಕ ಪ್ರತಿ ಲೀಟರ್​​ ನಂದಿನಿ ಹಾಲಿಗೆ 5 ರೂ ಹೆಚ್ಚಳ?
ಇನ್ನು ಹೇರ್​ಸ್ಟೈಲಿಸ್ಟ್​ ಅಲಿಮ್ ಹಕೀಮ್ ಅವರು ಕಿಂಗ್ ಕೊಹ್ಲಿಯ ಹೇರ್​ಸ್ಟೈಲ್​, ದಾಡಿಗೆ ನ್ಯೂ ಲುಕ್ ಕೊಟ್ಟವರು. ಇವರು ಮಾಡುವ ಒದೊಂದು ಹೇರ್​ಸ್ಟೈಲ್​ ಕೂಡ ವಿಭಿನ್ನವಾಗಿತ್ತದೆ. ಕ್ರಿಕೆಟರ್​​ಗಳಿಗೆ ಹೇರ್ ಕಟ್ ಮಾಡುವ ಅಲಿಮ್ ಹಕೀಮ್ ಈಗಾಗಲೇ ಫೇಮಸ್ ಆಗಿದ್ದಾರೆ. ಸದ್ಯ ವಿರಾಟ್​ ಕೊಹ್ಲಿಯ ಕೇಶ ವಿನ್ಯಾಸದ ಫೋಟೋಗಳನ್ನು ಅಲಿಮ್ ಹಕೀಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ಆಟಗಾರರ ಪ್ರತಿಯೊಂದು ಜೀವನಶೈಲಿ ತುಂಬಾ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅದರಂತೆ ಹೇರ್​ಸ್ಟೈಲ್​ ಕೂಡ ಅಷ್ಟೇ ಪ್ರಚಾರ ಪಡೆಯುತ್ತದೆ. ಇವು ಜನರ ಮೇಲೆಯು ಹೆಚ್ಚಿನ ಪ್ರಭಾವ ಬೀಳುತ್ತವೆ. ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ಕೆ.ಎಲ್ ರಾಹುಲ್​ ಹೀಗೆ ಕ್ರಿಕೆಟ್​ ಪ್ಲೇಯರ್​ಗಳ ಹೇರ್​ ಸ್ಟೈಲ್ ಮೊದಲಿಂದಲೂ​ ಸಖತ್ ಸುದ್ದಿಯಾಗುತ್ತದೆ. ​​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ