ಪಂದ್ಯದ ನಡುವೆ ಯುವ ಸ್ಪಿನ್ನರ್​​​​ಗೆ ಕಿಂಗ್ ಕೊಹ್ಲಿ ಆವಾಜ್.. ಬ್ರಾರ್​ಗೆ ತಿರುಗೇಟು ಕೊಟ್ಟ ವಿರಾಟ್​!

author-image
Bheemappa
Updated On
ಪಂದ್ಯದ ನಡುವೆ ಯುವ ಸ್ಪಿನ್ನರ್​​​​ಗೆ ಕಿಂಗ್ ಕೊಹ್ಲಿ ಆವಾಜ್.. ಬ್ರಾರ್​ಗೆ ತಿರುಗೇಟು ಕೊಟ್ಟ ವಿರಾಟ್​!
Advertisment
  • ವಿರಾಟ್ ಕೊಹ್ಲಿ- ಪಂಜಾಬ್ ಕಿಂಗ್ಸ್​ ಸ್ಪಿನ್ನರ್ ನಡುವೆ ಆಗಿದ್ದೇನು?
  • ತವರಲ್ಲಿ ಆಗಿದ್ದ ಅವಮಾನಕ್ಕೆ ಸೇಡು ತೀರಿಸಿಕೊಂಡ ಆರ್​ಸಿಬಿ
  • ವಿರಾಟ್ ಕೊಹ್ಲಿ ಹಾಗೂ ಯುವ ಸ್ಪಿನ್ನರ್ ಮಧ್ಯೆ ಮಾತಿನ ಚಕಮಕಿ

ಚಂಡಿಗಢದ ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪಂಚ್ ಕೊಟ್ಟಿದೆ. ಏಟಿಗೆ ಎದುರೇಟು ಎನ್ನುವಂತೆ ಚಿನ್ನಸ್ವಾಮಿಯಲ್ಲಿ ಆಗಿದ್ದ ಅವಮಾನಕ್ಕೆ ಸೇಡನ್ನು ತೀರಿಸಿಕೊಂಡು ತೊಡೆ ತಟ್ಟಿದೆ. ಈ ಪಂದ್ಯದ ಮಧ್ಯೆ ಪಂಜಾಬ್​ನ ಯುವ ಆಟಗಾರ ಹಾಗೂ ವಿರಾಟ್ ಕೊಹ್ಲಿ ನಡೆದ ವಾಗ್ವಾದ ಸಖತ್ ವೈರಲ್ ಆಗಿದೆ.

ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡಿದ ಮೇಲೆ ಆರ್​ಸಿಬಿ ಪರವಾಗಿ ವಿರಾಟ್ ಕೊಹ್ಲಿ ಕ್ರೀಸ್​ನಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದರು. ಆದರೆ ಪಂದ್ಯದ ನಡುವೆ ಸ್ಪಿನ್ನರ್ ಹರ್​​ಪ್ರೀತ್ ಬ್ರಾರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿದೆ. ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿಯನ್ನ ಔಟ್ ಮಾಡಲು ಬ್ರಾರ್​, ಸ್ಟಂಪ್​ಗೆ ಬಾಲ್ ಎಸೆಯಲು ಹೋಗಿ ವಿಫಲರಾಗಿದ್ದಾರೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್ ಕೇಂದ್ರೀಯ ಒಪ್ಪಂದಲ್ಲಿ ಎಷ್ಟು ಕೋಟಿ ಹಣ ಗಳಿಸ್ತಾರೆ.. 7 ಕೋಟಿ ರೂ ಪಡೆಯೋ ಸ್ಟಾರ್ ಪೇಸರ್?

publive-image

ಈ ವೇಳೆ ವಾಗ್ವಾದಕ್ಕೆ ಮುಂದಾಗಿದ್ದ ಬ್ರಾರ್​ಗೆ ಕಿಂಗ್ ಕೊಹ್ಲಿ ಚಳಿ ಬಿಡಿಸಿದ್ದಾರೆ. 20 ವರ್ಷದಿಂದ ನಾನು ಇಲ್ಲಿದ್ದೀನಿ. ನಿನ್ನ ಕೋಚ್ ಕೂಡ ನನಗೆ ಚೆನ್ನಾಗಿ ಗೊತ್ತಿದೆ. ನೀವು ನನ್ನ ಔಟ್ ಮಾಡಲು ಆಗಲ್ಲ, ಈ ನಿನ್ನ ಬೌಲಿಂಗ್​​ನಲ್ಲಿ ಆ ಶಕ್ತಿ ಇಲ್ಲ ಎಂದು ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ. ವಿರಾಟ್ ಕೊಹ್ಲಿ ಮಾತನಾಡುತ್ತಿದ್ದಂತೆ ಬೌಲಿಂಗ್ ಮಾಡುತ್ತಿದ್ದ ಹರ್​​ಪ್ರೀತ್ ಬ್ರಾರ್, ಇಲ್ಲ ಬ್ರೋ ಕ್ಯಾಸುವಲ್​ ಆಗಿ ನಾ ಚೆಂಡನ್ನು ಥ್ರೋ ಮಾಡಿದೆ ಅಷ್ಟೇ ಎಂದಿದ್ದಾರೆ.

ಈ ವಾಗ್ವಾದ, ಜಗಳವನ್ನು ಕಿಂಗ್ ಕೊಹ್ಲಿ ಮೈದಾನದಲ್ಲೇ ಮರೆತು ಹೊಗಿದ್ದಾರೆ. ಮ್ಯಾಚ್ ಮುಗಿದ ಮೇಲೆ ಹರ್​ಪ್ರೀತ್ ಬ್ರಾರ್ ಹಾಗೂ ಕಿಂಗ್ ಕೊಹ್ಲಿ ಪರಸ್ಪರ ಮಾತನಾಡಿ ಎಲ್ಲದಕ್ಕೂ ವಿರಾಮ ಹಾಕಿದ್ದಾರೆ. ವಿರಾಟ್ ಕೊಹ್ಲಿ ಮತ್ತೆ ಹರ್​ಪ್ರೀತ್ ಬ್ರಾರ್ ಅವರ ಕಾಲೆಳೆಯುತ್ತಿರುವ ವಿಡಿಯೋವನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಶೇರ್ ಮಾಡಿದೆ.


">April 20, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment