/newsfirstlive-kannada/media/post_attachments/wp-content/uploads/2025/06/KOHLI-2.jpg)
ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿಗೆ ಆರ್ಸಿಬಿ ಮುತ್ತಿಟ್ಟಿದೆ. ಅಹ್ಮದಾಬಾದ್ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲ್ಲುವ ಮೂಲಕ ಪಾಟೀದಾರ್ ನಾಯಕತ್ವದ ಆರ್ಸಿಬಿ, ಕಪ್ ಗೆದ್ದುಕೊಂಡಿದೆ.
ಆರ್ಸಿಬಿ ಟ್ರೋಫಿಗೆ ಮುತ್ತಿಡುತ್ತಿದ್ದಂತೆಯೇ ಆರ್ಸಿಬಿ ದಂತಕತೆ ಕಿಂಗ್ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಕಣ್ಣೀರು ಇಟ್ಟಿದ್ದಾರೆ. ಭಾವುಕರಾದ ಕೊಹ್ಲಿ, ತಮ್ಮ ಮುಖವನ್ನು ಮುಚ್ಚಿಕೊಂಡು ಮೈದಾನದಲ್ಲೇ ನಿಂತಿದ್ದರು. ಸದ್ಯ ಕೊಹ್ಲಿ ಅವರು ಭಾವುಕರಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಬೆಂಗಳೂರು ಹುಡುಗಿ ಮದುವೆಯಾಗಿರೋದು.. ನನ್ನ ಟೀಮ್ RCB ಅಂದ್ರು ಇಂಗ್ಲೆಂಡ್ ಮಾಜಿ ಪ್ರಧಾನಿ ರಿಷಿ ಸುನಕ್
18.. ಇದು ಕಿಂಗ್ ಕೊಹ್ಲಿಯ ಜೆರ್ಸಿ ನಂಬರ್. ಈ ನಂಬರ್ ಜೊತೆಗಿನ ಫ್ಯಾನ್ಸ್ ಸಂಬಂಧ ಬಿಡಸಲಾಸಾಧ್ಯ. ಈ ಕಾರಣಕ್ಕೆ ಫ್ಯಾನ್ಸ್, ಸೀಸನ್-18ರ ಐಪಿಎಲ್ ಆರ್ಸಿಬಿ ಇಯರ್ ಅಂತಾನೇ ವಿಶ್ಲೇಷಣೆ ನಡೆಸಲಾಗಿದೆ. ಆರ್ಸಿಬಿ ಅಭಿಮಾನಿಗಳ ಪಾಲಿಗೆ ಸೀಸನ್-18ರ ಐಪಿಎಲ್, ಮೋಸ್ಟ್ ಎಮೋಷನಲ್ ಸೀಸನ್ ಆಗಿದೆ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ ಜರ್ಸಿ ನಂಬರ್ ಹಾಗೂ ಐಪಿಎಲ್ ಸೀಸನ್-18. 18 ವರ್ಷಗಳಿಂದ ಒಂದೇ ತಂಡದ ಪರ ಆಡ್ತಿರೋ ಕೊಹ್ಲಿ, ಇವರೆಗೂ IPL ಕಪ್ ಗೆದ್ದಿರಲಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಸಹಜವಾಗಿಯೇ ಭಾವುಕರಾದರು.
ಇದನ್ನೂ ಓದಿ: ಕೊನೆಗೂ ಐಪಿಎಲ್ ಟ್ರೋಫಿಗೆ ಮುತ್ತಿಟ್ಟ ಆರ್ಸಿಬಿ.. 18 ವರ್ಷಗಳ ಕನಸು ಅಂತೂ ನನಸು..!
The tears say it all 🥹
An 1️⃣8️⃣-year wait comes to an end 👏
Updates ▶ https://t.co/U5zvVhcvdo#TATAIPL | #RCBvPBKS | #Final | #TheLastMile | @imVkohlipic.twitter.com/X15Xdmxb0k— IndianPremierLeague (@IPL) June 3, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ