/newsfirstlive-kannada/media/post_attachments/wp-content/uploads/2025/04/KL_RAHUL.jpg)
ಡೆಲ್ಲಿ ವರ್ಸಸ್ RCB ರಿವೇಂಜ್ ಫೈಟ್ಗೆ ಕೌಂಟ್ಡೌನ್ ಶುರುವಾಗಿದೆ. ಇದು ಡೆಲ್ಲಿ ವರ್ಸಸ್ ಆರ್ಸಿಬಿಯ ರಿವೇಂಜ್ ಫೈಟ್ ಅನ್ನೋದಕ್ಕಿಂತ ಹೆಚ್ಚಾಗಿ ಕಿಂಗ್ ಕೊಹ್ಲಿಯ ರಿವೇಂಜ್ ಫೈಟ್ ಅನ್ನೋದು ಸೂಕ್ತ.
ದಿನಾಂಕ : ಏಪ್ರಿಲ್ 10, 2025
ಡೆಲ್ಲಿ V/S ಆರ್ಸಿಬಿ ದಂಗಲ್!
ಏಪ್ರಿಲ್ 10, 2025.. ಚಿನ್ನಸ್ವಾಮಿಯ ದಂಗಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿತ್ತು. ಈ ಹೈವೋಲ್ಟೇಜ್ ಮ್ಯಾಚ್ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅಬ್ಬರಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಿಂದಿಯಾಗಿತ್ತು.
ಚಿನ್ನಸ್ವಾಮಿಯ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿಸಿದ್ದ ಕೆ.ಎಲ್ ರಾಹುಲ್, 53 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಒಳಗೊಂಡ ಅಜೇಯ 93 ರನ್‌ಗಳಿಸಿದ್ದರು. ಸಿಕ್ಸರ್ನೊಂದಿಗೆ ಗೆಲುವಿನ ದಡ ಸೇರಿಸಿದ್ದ ಕೆ.ಎಲ್ ರಾಹುಲ್, ತಮ್ಮ ಬ್ಯಾಟ್ನಿಂದ ವೃತ್ತಾಕಾರ ಬರೆದು, ಇದು ನನ್ನ ನೆಲ, ನನ್ನ ತವರು ಎಂಬ ಸಂದೇಶ ಸಾರಿದ್ದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ V/S ಕೆ.ಎಲ್ ರಾಹುಲ್ ಸಮರ; ಇವತ್ತಿನ RCB ಟಾರ್ಗೆಟ್ ಪ್ಲೇ ಆಫ್ ಅಲ್ಲವೇ ಅಲ್ಲ!
ಅಷ್ಟೇ ಅಲ್ಲ.. ಕನ್ನಡಿಗ ಕೆ.ಎಲ್ ರಾಹುಲ್ ಸಂಭ್ರಮ ಆರ್ಸಿಬಿ ಅಭಿಮಾನಿಗಳನ್ನ ಕೆರಳಿಸಿತ್ತು. ಆದ್ರೀಗ ಇದೇ ಇವತ್ತಿನ ಹಾಟ್ ಟಾಫಿಕ್ ಆಗಿದೆ. ಇದಕ್ಕೆ ಕಾರಣ ಮತ್ತೊಮ್ಮೆ ದೆಹಲಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಲ್.
ಶ್ರೇಯಸ್ ಅಯ್ಯರ್ಗೆ ಪಂಜಾಬ್ನಲ್ಲೇ ವಿರಾಟ್ ತಿರುಗೇಟು..!
ಮೊದಲು ಬೆಂಗಳೂರಿಗೆ ಆಗಮಿಸಿದ್ದ ಪಂಜಾಬ್, ಆರ್ಸಿಬಿ ಎದುರು ಗೆದ್ದು ಬೀಗಿತ್ತು. ಅಷ್ಟೇ ಅಲ್ಲ. ಈ ಖುಷಿಯಲ್ಲಿ ಶ್ರೇಯಸ್ ಅಯ್ಯರ್ ಅಗ್ರೆಸ್ಸಿವ್ ಸೆಲಬ್ರೇಷನ್ ಮಾಡಿದ್ದರು. ಇದಕ್ಕೆ ವಿರಾಟ್ ಕೊಹ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧದ ರಿವೇಂಜ್ ಫೈಟ್ನಲ್ಲಿ ಟಕ್ಕರ್ ನೀಡಿದ್ದರು. ಬೆಂಗಳೂರಿನಲ್ಲಿ ಶ್ರೇಯಸ್ ಅಯ್ಯರ್ ನಡೆದುಕೊಂಡಿದನ್ನ ಅವರದ್ದೇ ನೆಲದಲ್ಲಿ ನೆನಪಿಸಿ, ಉತ್ತರಿಸಿದ್ದರು.
ಶ್ರೇಯಸ್ ಆಯ್ತು.. ಈಗ ಕೊಹ್ಲಿ ಟಾರ್ಗೆಟ್ ಕೆ.ಎಲ್.ರಾಹುಲ್..!
ಆನ್ಫೀಲ್ಡ್ನಲ್ಲಿ ಕೊಹ್ಲಿಯನ್ನ ಕೆಣಕಿ ಉಳಿದವರಿಲ್ಲ. ಮಾತಿಗೆ ಮಾತು.. ಏಟಿಗೆ ಎದಿರೇಟು ನೀಡೋದ್ರಲ್ಲಿ ಮುಂದಿರುವ ವಿರಾಟ್, ಶ್ರೇಯಸ್ ಅಯ್ಯರ್ ಆ್ಯಕ್ಷನ್ಗೆ ರಿಯಾಕ್ಷನ್ ತೋರಿಸಿಕೊಟ್ಟಿದ್ದಾರೆ. ಆದ್ರೀಗ ಇದೇ ಕೊಹ್ಲಿ, ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬಡ್ಡಿ ಸಮೇತ ರಾಹುಲ್ಗೆ ವಾಪಸ್ ನೀಡೋ ಲೆಕ್ಕಾಚಾರದಲ್ಲಿದ್ದಾರೆ. ಇನ್ಫ್ಯಾಕ್ಟ್_ ಫ್ಯಾನ್ಸ್ ಮಾತ್ರವೇ ಅಲ್ಲ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವರುಣ್ ಆರೋನ್ ಕೂಡ ಇವತ್ತು ಇದನ್ನೇ ಎಕ್ಸ್ಪೆಟ್ ಮಾಡ್ತಿದ್ದಾರೆ.
ಕೊಹ್ಲಿಯದ್ದೇ ಕಿಂಗ್ಡಮ್.. ರೀ ಕ್ರಿಯೇಟ್ ಮಾಡ್ತಾರಾ ವಿರಾಟ್..?
ಸದ್ಯ ರೆಡ್ ಹಾಟ್ ಫಾರ್ಮ್ನಲ್ಲಿರುವ ವಿರಾಟ್, ಇವತ್ತು ತಾನು ಹುಟ್ಟಿ ಬೆಳದ ಅರುಣ್ ಜೆಟ್ಲಿ ಸ್ಟೇಡಿಯಂನಲ್ಲೇ ರಿವೇಂಜ್ ಫೈಟ್ಗೆ ಇಳಿಯುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ವಿಫಲರಾಗಿದ್ದ ವಿರಾಟ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎದುರು ಅಬ್ಬರಿಸಿದರು ಅಚ್ಚರಿ ಇಲ್ಲ. ಅಷ್ಟೇ ಅಲ್ಲ.. ಕೆ.ಎಲ್ ರಾಹುಲ್, ಸೆಲೆಬ್ರೇಷನ್ನಂತೆಯೇ ಇದು ನನ್ ಗ್ರೌಂಡ್, ಇದಕ್ಕೆ ನಾನೇ ಕಿಂಗ್ ಎಂಬ ಪ್ರತ್ಯುತ್ತರ ನೀಡುವ ಬಗ್ಗೆಯೂ ಡೌಟೇ ಇಲ್ಲ. ಯಾಕಂದ್ರೆ, ಕೊಹ್ಲಿ ಕೊಟ್ಟಿದ್ದನ್ನು ಯಾವುದು ಇಟ್ಕೊಳ್ಳಲ್ಲ.
ಕೆಣಕಿದಷ್ಟು ಜ್ವಾಲೆಯಾಗಿ ಉರಿಯುವ ವಿರಾಟ್, ಇವತ್ತು ಕೆ.ಎಲ್.ರಾಹುಲ್ ಆ್ಯಕ್ಷನ್ಗೆ ರಿಯಾಕ್ಷನ್ ಬಡ್ಡಿ ಸಮೇತ ವಾಪಸ್ ನೀಡ್ತಾರಾ. ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ