/newsfirstlive-kannada/media/post_attachments/wp-content/uploads/2024/12/VIRAT-KOHLI-4.jpg)
ಒನ್ 8 ಕಮುನೆ (One8 commune) ಎನ್ನುವ ಬಾರ್ ಅಂಡ್ ರೆಸ್ಟೋರೆಂಟ್ ದೇಶದದ್ಯಾಂತ ಇವೆ. ಇವೆಲ್ಲಾ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿಯ ಸಹಮಾಲೀಕತ್ವದಲ್ಲಿ ನಡೆಯುತ್ತಿವೆ. ಕ್ರಿಕೆಟ್ ಜೊತೆಗೆ ಕೊಹ್ಲಿ ಹೋಟೆಲ್ ಬ್ಯುಸಿನೆಸ್ ಮಾಡ್ತಿದ್ದಾರೆ. ಅಂತೆಯೇ ಬೆಂಗಳೂರಲ್ಲೂ ಒಂದು ಬ್ರ್ಯಾಂಚ್ ಹೊಂದಿದೆ. ಸದ್ಯ ಇದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಟಿಸ್ ನೀಡಿದೆ.
ಒನ್ 8 ಕಮುನೆ ಎನ್ನುವ ಬಾರ್ ಅಂಡ್ ರೆಸ್ಟೋರೆಂಟ್ ಯಾವುದೇ ಪ್ರಮಾಣ ಪತ್ರಗಳನ್ನು ಪಡೆಯದೇ ನಡೆಸುತ್ತಿರುವ ಕಾರಣ ಬಿಬಿಎಂಪಿ ನೋಟಿಸ್ ನೀಡಿದೆ. ನೋಟಿಸ್ ತಲುಪಿದ 7 ದಿನಗಳ ಒಳಗೆ ಪ್ರತ್ಯುತ್ತರ ನೀಡದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಖಡಕ್ ಆಗಿ ಹೇಳಿದೆ.
ಬಿಬಿಎಂಪಿ ಕಮಿಷನರ್ ಹೇಳ್ತಿರೋದು ಏನು..?
ನಾವು ಯಾರು ಮಾಲೀಕರಿದ್ದಾರೆ? ಕಟ್ಟಡದ ಯಜಮಾನ ಯಾರು ಅಂತಾ ನೋಡಲ್ಲ. ನಿಯಮ ಉಲ್ಲಂಘನೆ ಎಲ್ಲಿ ಆಗಿದೆ ಎಂದಷ್ಟೇ ನೋಡ್ತೇವೆ. ಟ್ರೇಡ್ ಲೈಸೆನ್ಸ್ ಯಾರು ಹೆಸರು ಇರುತ್ತದೆಯೋ ಅವರಿಗೆ ನೋಟಿಸ್ ನೀಡುತ್ತೇವೆ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಮಾಲಿಕತ್ವದ ರೆಸ್ಟೋರೆಂಟ್ಗೆ ನಕ್ಷೆ, ಲೈಸೆನ್ಸ್ ಏನೂ ಇಲ್ಲ.. BBMP ನೋಟಿಸ್
ಮಹತ್ವಗಾಂಧಿ ರಸ್ತೆ ಬಳಿ ಒಂದು ಬಿಲ್ಡಿಂಗ್ ಇದೆ. ಅದರ ಮೇಲೆ ಒಂದು ರೆಸ್ಟೋರೆಂಟ್ ನಡೆಯುತ್ತಿದೆ. ಅದರಲ್ಲಿ ಬಿಲ್ಡಿಂಗ್ ವೈಲೇಸನ್ ಪಿಒಸಿ ಇಶ್ಯು ಆಗಿದೆ. ಅದು ರಿಸನಲ್ ಆರ್ಡರ್ ಆಗಿ ಫೈನಲ್ ಆರ್ಡರ್ ಕೂಡ ಆಗಿದೆ. ಅವರೀಗ ನಮ್ಮ ಬಳಿ ಅಪೀಲ್ಗೆ ಬಂದಿದ್ದಾರೆ. ಆ ಅಪೀಲ್ನಲ್ಲಿ ಸ್ಟೇ ಇದೆ ಎಂದು ತಿಳಿಸಿದ್ದಾರೆ. ಅದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಒಂದು ವೇಳೆ ಅಪೀಲ್ ಇದ್ದರೆ, ಅದನ್ನು ನಾವು ಕಾನೂನು ಪ್ರಕಾರ ನಡೆದುಕೊಳ್ತೇವೆ. ಅಪೀಲ್ ಮೂಲಕವೇ ನಾವು ಆರ್ಡರ್ ಪಾಸ್ ಮಾಡುತ್ತೇವೆ. ಅಪೀಲ್ ಹಿಯರಿಂಗ್ ಆದಮೇಲೆ ನಾವು ಫೈನಲ್ ಆರ್ಡರ್ ನೀಡುತ್ತೇವೆ. ಅಪೀಲ್ ಡಿಸ್ಮಿಸ್ ಆದರೆ ಬಿಲ್ಡಿಂಗ್ ಒಡೆಯಲು ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ.
ಆರೋಪ ಏನು..?
ಸಿಲಿಕಾನ್ ಸಿಟಿಯ ಪೂರ್ವ ವಲಯದ ಶಾಂತಿನಗರ ವಿಭಾಗದ ವಾರ್ಡ್ ಸಂಖ್ಯೆ 167ರ ಎಂ.ಜಿ ರಸ್ತೆಯ ರತ್ನಂ ಕಾಂಪ್ಲೆಕ್ಸ್ನಲ್ಲಿ ವಿರಾಟ್ ಕೊಹ್ಲಿಯ ಒನ್ 8 ಕಮುನೆ ರೆಸ್ಟೋರೆಂಟ್ ಇದೆ. ಇದು ಅಗ್ನಿ ಶಾಮಕ ಇಲಾಖೆಯಿಂದ ನಕ್ಷೆ, ಪ್ರಮಾಣ ಪತ್ರ ಹಾಗೂ ಎನ್ಒಸಿ, ಅನುಮತಿ ಪರವಾನಗಿ (ಲೈಸೆನ್ಸ್) ಪ್ರಮಾಣ ಪತ್ರಗಳನ್ನು ಪಡೆದಿಲ್ಲ. ಈ ಯಾವುದು ಪ್ರಮಾಣ ಪತ್ರ ಇಲ್ಲದೇ ವಿರಾಟ್ ಕೊಹ್ಲಿ ಸಹಮಾಲಿಕತ್ವದಲ್ಲಿ ರೆಸ್ಟೋರೆಂಟ್ ನಡೆಸಲಾಗುತ್ತಿದೆ.
ಇದನ್ನೂ ಓದಿ:ರಜತ್ ಪಾಟಿದಾರ್ಗೆ RCB ಪಟ್ಟ..? ಕ್ಯಾಪ್ಟನ್ಸಿ ನೀಡಲು ಇದೆ 8 ಕಾರಣಗಳು..!
ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಹೆಚ್.ಎಂ.ವೆಂಕಟೇಶ್ ಮತ್ತು ಕುಣಿಗಲ್ ನರಸಿಂಹ ಮೂರ್ತಿ ದೂರು ನೀಡಿದ್ದರು. 29 ನವೆಂಬರ್ 2024ರಂದು ತಿಳುವಳಿಕೆ ಪತ್ರ ನೀಡಿದ್ದರೂ ಯಾವುದೇ ಕ್ರಮದ ಬಗ್ಗೆ ಪ್ರತ್ಯುತ್ತರ ನೀಡಿರಲಿಲ್ಲ. ಇದರಿಂದ ಈಗ ನೀಡಲಾದ ನೋಟಿಸ್ ತಲುಪಿದ 7 ದಿನಗಳ ಒಳಗೆ ಲಿಖಿತ ರೂಪದಲ್ಲಿ ಸಮಾಜಾಯಿಷಿ ನೀಡಬೇಕು ಎಂದು ಖಡಕ್ ಆಗಿ ಬಿಬಿಎಂಪಿ ಹೇಳಿದೆ. ಒಂದು ವೇಳೆ ಪ್ರತ್ಯುತ್ತರ ನೀಡದಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ