/newsfirstlive-kannada/media/post_attachments/wp-content/uploads/2025/05/SRH-RCB.jpg)
ಐಪಿಎಲ್ ಜಿದ್ದಾಜಿದ್ದಿಯಲ್ಲಿ RCB ವರ್ಸಸ್ ಸನ್ ರೈಸರ್ಸ್ ಹೈದರಾಬಾದ್ ನಡುವೆ ರೋಚಕ ಪಂದ್ಯ ನಡೆಯುತ್ತಿದೆ. ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬೌಂಡರಿಗಳನ್ನ ಬಾರಿಸುತ್ತಿದ್ದು, ಆರ್‌ಸಿಬಿ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಲಕ್ನೋದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಇಂದು ಮಹತ್ವದ ಬದಲಾವಣೆ ಆಗಿದೆ. ರಜತ್ ಪಾಟಿದಾರ್ ಅವರ ಬದಲಿಗೆ ಇಂದಿನ ಪಂದ್ಯವನ್ನ ಜಿತೇಶ್ ಶರ್ಮಾ ಮುನ್ನೆಡಿಸಿರೋದು ವಿಶೇಷವಾಗಿದೆ.
/newsfirstlive-kannada/media/post_attachments/wp-content/uploads/2025/05/RCB-SRH-Match.jpg)
ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ RCB ಬೌಲಿಂಗ್ ಆಯ್ಕೆ ಮಾಡಿಕೊಂಡು ಸನ್ ರೈಸರ್ಸ್ ಹೈದರಾಬಾದ್‌ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಲಾಯಿತು.
ಬೆಂಗಳೂರು ರಾಯಲ್ ಚಾಲೆಂಜರ್ಸ್ ಲೆಕ್ಕಾಚಾರದಂತೆ ಆರಂಭದಲ್ಲಿ ಹೈದರಾಬಾದ್ ಆಟಗಾರರನ್ನ ಕಟ್ಟಿ ಹಾಕಲು ಪ್ರಯತ್ನಿಸಲಾಯಿತು. ಅಭಿಷೇಕ್ ಶರ್ಮಾ 34, ಟ್ರಾವಿಸ್ ಹೆಡ್ 17 ರನ್‌ಗಳಿಗೆ ಔಟ್ ಆದರು.
/newsfirstlive-kannada/media/post_attachments/wp-content/uploads/2025/05/SRH-Ishan-kishan.jpg)
ಸನ್ ರೈಸರ್ಸ್ ಹೈದರಾಬಾದ್ ಸಂಕಷ್ಟದಲ್ಲಿದ್ದಾಗ ಇಶಾನ್ ಕಿಶನ್ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಇಶಾನ್ ಕಿಶನ್ ಅವರು 5 ಸಿಕ್ಸರ್, 7 ಬೌಂಡರಿಗಳನ್ನ ಸಿಡಿಸಿ ಭರ್ಜರಿ ಅರ್ಧ ಶತಕ ಸಿಡಿಸಿದರು. ಕೊನೇ ಓವರ್‌ವರೆಗೂ ಕ್ರೀಸ್‌ನಲ್ಲಿ ಉಳಿದ ಇಶಾನ್ ಕಿಶನ್ ಅವರು 94 ರನ್‌ಗಳ ಭರ್ಜರಿ ಕೊಡುಗೆ ನೀಡಿದರು.
RCB ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್‌ಗಳಿಸಿದೆ. ಈ ಬಾರಿ ಐಪಿಎಲ್‌ನಲ್ಲಿ ಟೇಬಲ್ ಟಾಪರ್ ಆಗಲು ಕಣ್ಣಿಟ್ಟಿರುವ ಆರ್‌ಸಿಬಿಗೆ 232 ರನ್‌ಗಳ ಬೃಹತ್ ಟಾರ್ಗೆಟ್ ನೀಡಲಾಗಿದೆ.
/newsfirstlive-kannada/media/post_attachments/wp-content/uploads/2025/05/KOHLI_RCB-2.jpg)
232 ರನ್‌ಗಳ ಟಾರ್ಗೆಟ್ ಬೆನ್ನತ್ತಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕೂಡ ಉತ್ತಮ ಆರಂಭವನ್ನೇ ಪಡೆದಿದೆ. ವಿರಾಟ್ ಕೊಹ್ಲಿ ಭರ್ಜರಿ ಬೌಂಡರಿ, ಸಿಕ್ಸರ್‌ಗಳನ್ನ ಬಾರಿಸಿದ್ದಾರೆ. ಕೊಹ್ಲಿ ಆರ್ಭಟಕ್ಕೆ ಫಿಲ್ ಸಾಲ್ಟ್ ಕೂಡ ಸಾಥ್ ನೀಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us