/newsfirstlive-kannada/media/post_attachments/wp-content/uploads/2025/04/KOHLI-IYER-1.jpg)
ನಿನ್ನೆ ಚಂಡಿಗಡದ ಮುಲ್ಲನ್‌ಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಪಿಬಿಕೆಎಸ್ ಮುಖಾಮುಖಿ ಆಗಿದ್ದವು. ಕೊನೆಯಲ್ಲಿ ಪಂಜಾಬ್ ವಿರುದ್ಧ ಆರ್ಸಿಬಿ 7 ವಿಕೆಟ್‌ಗಳಿಂದ ಗೆದ್ದು ಬೀಗಿತು.
ಪಂದ್ಯ ಮುಗಿದ ಬಳಿಕ ಸ್ಟೇಡಿಯಂ ಕುತೂಹಲಕಾರಿ ದೃಶ್ಯಕ್ಕೆ ಸಾಕ್ಷಿ ಆಯಿತು. ವಾಧೇರಾ ಬೌಲಿಂಗ್‌ನಲ್ಲಿ ಜಿತೇಶ್ ಶರ್ಮಾ, ಸಿಕ್ಸರ್ ಬಾರಿಸಿ ಮ್ಯಾಚ್ ಫಿನಿಶ್ ಮಾಡಿದರು. ಪಂದ್ಯ ಗೆದ್ದ ಖುಷಿಗೆ ಕೊಹ್ಲಿ, ಎಂದಿನಂತೆ ಅಗ್ರೆಸೀವ್ ಸೆಲೆಬ್ರೇಷನ್ ಪ್ರದರ್ಶಿಸಿರು. ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ನತ್ತ ತಿರುಗಿ ಕೊಹ್ಲಿ ಸಂಭ್ರಮಿಸಿದರು.
ಇದು ತುಂಬಾನೇ ವಿಶೇಷವಾಗಿತ್ತು. ಯಾಕೆಂದರೆ ಕಳೆದ ಎರಡು ದಿನಗಳ ಹಿಂದಷ್ಟೇ ಚಿನ್ನಸ್ವಾಮಿಯಲ್ಲಿ ಆರ್ಸಿಬಿಯನ್ನು ಪಂಜಾಬ್ ಸೋಲಿಸಿತ್ತು. ಹೀಗಾಗಿ ಕೊಹ್ಲಿ, ಅಯ್ಯರ್ನತ್ತ ತಿರುಗಿ ಸಂಭ್ರಮಿಸಿದ್ದು ಆರ್ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿತ್ತು. ಕೊಹ್ಲಿ ಉದ್ದೇಶಪೂರ್ವಕವಾಗಿಯೇ ಅಯ್ಯರ್ ಎದುರು ಸಂಭ್ರಮಿಸಿದ್ದಾರೆ ಅನ್ನೋದನ್ನ ಅಭಿಮಾನಿಗಳು ಅರಿತುಕೊಂಡರು. ಆದರೆ, ಅಯ್ಯರ್ ಇದನ್ನು ನಗುತ್ತಲೇ, ಶಾಂತವಾಗಿ ಸ್ವೀಕರಿಸಿದರು. ಅದಾದ ಕೆಲವೇ ಸೆಕೆಂಡ್ಗಳಲ್ಲಿ ಇಬ್ಬರೂ ಪ್ರೀತಿಯಿಂದ ಅಪ್ಪಿಕೊಂಡರು, ಪರಸ್ಪರ ಗೌರವ ಪ್ರದರ್ಶಿಸಿದರು.
ಇದನ್ನೂ ಓದಿ:Breaking: ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ ಬಿಸಿಸಿಐ
ವಿರಾಟ್ ಮತ್ತು ಅಯ್ಯರ್ ನಡುವಿನ ಹೃದಯಸ್ಪರ್ಶಿ ಕ್ಷಣ ಕ್ರಿಕೆಟ್ ಅಭಿಮಾನಿಗಳ ಹೃದಯ ಮುಟ್ಟಿತು. ಈ ಪಂದ್ಯದ ಮೂಲಕ ಸ್ಪರ್ಧೆ ಮಾತ್ರವಲ್ಲ, ಆಟಗಾರರ ನಡುವಿನ ಗೌರವ ಮತ್ತು ಸ್ನೇಹವನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಬಳಿಕ ಮಾತನಾಡಿದ ಅಯ್ಯರ್.. ನಮ್ಮ ತಂಡ ಅದ್ಭುತವಾಗಿದೆ. ಇಂದು ಸಣ್ಣ ಸಮಸ್ಯೆ ಆಗಿದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನಮಗೆ ಉತ್ತಮ ಆರಂಭ ಸಿಗಲಿಲ್ಲ. ಗೆಲುವಿನ ಕ್ರೆಡಿಟ್ ಕೊಹ್ಲಿ ಮತ್ತು ಅವರ ತಂಡಕ್ಕೆ ಸಲ್ಲುತ್ತದೆ. ಮುಕ್ತವಾಗಿ ಆಡಲು ಬಯಸುತ್ತೇನೆ, ನನ್ನ ಆಟದ ಬಗ್ಗೆ ವಿಶ್ವಾಸವಿದೆ ಎಂದರು.
ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕೊಹ್ಲಿ 54 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಜೊತೆಗೆ ಪಡಿಕ್ಕಲ್ 35 ಎಸೆತದಲ್ಲಿ 61 ರನ್ ಗಳಿಸಿದರು. ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್, 20 ಓವರ್‌ಗಳಲ್ಲಿ 157 ರನ್ ಗಳಿಸಿತ್ತು.
ಇದನ್ನೂ ಓದಿ: ‘ಬೆಂಗಳೂರು ನನಗೆ ಜೀವನ ಕೊಟ್ಟಿದೆ..’ ಕೈಮುಗಿದು ಕ್ಷಮೆ ಕೇಳಿದ ಹಿಂದಿವಾಲಾ.. ಕರಗಿದ ಧಿಮಾಕು..! VIDEO
revenge taken by rcb 😎#PBKSvRCB#ViratKohlipic.twitter.com/zrew3PVr86
— sachin gurjar (@SachinGurj91435) April 20, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್