/newsfirstlive-kannada/media/post_attachments/wp-content/uploads/2024/08/virat_kohli-2.jpg)
ಒಂದಲ್ಲ.. ಎರಡಲ್ಲ.. ಬರೋಬ್ಬರಿ 17 ವರ್ಷ. ಈ 17 ವರ್ಷಗಳ ಕಪ್ ಗೆಲ್ಲದ ಆರ್​ಸಿಬಿ, 2025ರಲ್ಲಿ ಹೊಸ ರೂಪದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ನಡುವೆ ವಿರಾಟ್​, ಒಂದು ಶಪಥ ಮಾಡಿದ್ದಾರೆ. ನಿರ್ಗಮನಕ್ಕೂ ಮುನ್ನ ಆರ್​ಸಿಬಿ ಹಾಗೂ ಅಭಿಮಾನಿಗಳ ಋಣಾಭಾರ ತೀರಿಸುವ ಲೆಕ್ಕಾಚಾರದಲ್ಲಿದ್ದಾರೆ.
ಇದು ಆರ್​ಸಿಬಿ ಹೊಸ ಅಧ್ಯಾಯ. ಕಳೆದ ಸೀಸನ್​ಗೂ ಮುನ್ನ ವಿರಾಟ್ ಕೊಹ್ಲಿಯ ಈ ಹೇಳಿಕೆ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿತ್ತು. ಪ್ರತಿ ಸೀಸನ್​ಗೂ ಮುನ್ನ ಈ ಸಲ ಕಪ್​ ನಮ್ದೇ ಎನ್ನುತ್ತಿದ್ದ ವೀರಾಭಿಮಾನಿಗಳು, ಕಳೆದ ಸೀಸನ್​ನಲ್ಲಿ ಕಪ್ 100% ನಮ್ದೇ ಅಂತಾ ಫಿಕ್ಸ್​ ಆಗಿದ್ರು. ಆದ್ರೆ, ಇದೆಲ್ಲವೂ ಹುಸಿಯಾಗಿತ್ತು. ಈ ಬಾರಿ ಆ ಕನಸು ನನಸು ಮಾಡಲು ಪಣ ತೊಟ್ಟಿರೋ ಮ್ಯಾನೇಜ್​ಮೆಂಟ್​, ರಿಟೈನ್ಶನ್​ನಲ್ಲಿ ಬೋಲ್ಡ್​ ಡಿಸಿಷನ್ ತೆಗೆದುಕೊಂಡು, ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.
ಹೌದು! ನ್ಯೂ ಸೀಸನ್​​ಗೆ ನ್ಯೂ ಟೀಮ್​ ಕಟ್ಟೋಕೆ ಮುಂದಾಗಿರುವ ಆರ್​ಸಿಬಿ, ಹೊಸ ಆಟಗಾರರೊಂದಿಗೆ ಫ್ರೆಶ್​​ ಆಗಿ ಸೀಸನ್​ ಆರಂಭಿಸುವ ಪ್ಲಾನ್​ನಲ್ಲಿದೆ. ಆದ್ರೆ, ಈ ನಡುವೆ ವಿರಾಟ್​ ಕೊಹ್ಲಿಯ ಒಂದೇ ಒಂದು ಮಾತು, ಆರ್​ಸಿಬಿ ಅಭಿಮಾನಿಗಳಲ್ಲಿ ಮತ್ತೆ ಕಪ್ ಗೆಲ್ಲುವ ಕನಸನ್ನ ಹೆಚ್ಚಿಸಿದೆ.
ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ.. ಇಂದು ಸಿದ್ದೇಶ್ವರಸ್ವಾಮಿ ಕೊಂಡೋತ್ಸವ ಬೆನ್ನಲ್ಲೇ ಗರ್ಭಗುಡಿ ಬಾಗಿಲು ಬಂದ್
/newsfirstlive-kannada/media/post_attachments/wp-content/uploads/2024/08/VIRAT_DK.jpg)
ನನ್ನ ಪಾಲಿಗೆ ಆರ್​ಸಿಬಿ ಎಂದರೆ ಏನೆಂದು ಎಲ್ಲರಿಗೂ ತಿಳಿದಿದೆ. ಆರ್​ಸಿಬಿ ಜತೆಗೆ ನನ್ನದು ವಿಶೇಷ ಅನುಬಂಧವಾಗಿದೆ. ಆರ್​ಸಿಬಿ ಪರ ಆಡುವುದು ನನ್ನ ಪಾಲಿಗೆ ಯಾವಾಗಲೂ ವಿಶೇಷವಾದುದು. ಮುಂದಿನ 3 ವರ್ಷಗಳಲ್ಲಿ ನಾನು ಆರ್​ಸಿಬಿ ತಂಡದಲ್ಲಿ 20 ವರ್ಷ ಪೂರ್ಣಗೊಳಿಸಲಿದ್ದೇನೆ. ಇದು ನನ್ನ ಪಾಲಿಗೆ ಅದ್ಭುತ ಅನುಭವವಾಗಿದೆ. ನಾನು ಇಷ್ಟು ವರ್ಷಗಳ ಕಾಲ ಒಂದೇ ತಂಡದ ಪರ ಆಡುವೆ ಎಂದು ಅಂದುಕೊಂಡಿರಲಿಲ್ಲ..
-ವಿರಾಟ್​ ಕೊಹ್ಲಿ, ಮಾಜಿ ನಾಯಕ
2008ರ ಸೀಸನ್​ನಿಂದಲೂ ರೆಡ್ ಆರ್ಮಿಯಲ್ಲೇ ಉಳಿದಿರುವ ವಿರಾಟ್​, ಮುಂದಿನ 3 ವರ್ಷ ಆರ್​ಸಿಬಿಯಲ್ಲೇ ಉಳಿಯೋದು ಕನ್ಫರ್ಮ್ ಆಗಿದೆ. ಆರ್​ಸಿಬಿಯಲ್ಲೇ 2 ದಶಕ ಪೂರ್ಣಗೊಳಿಸಲು ಸಜ್ಜಾಗಿರೋ ವಿರಾಟ್​, ಒಂದು ಸಂಕಲ್ಪ ಮಾಡಿದ್ದಾರೆ.
3 ವರ್ಷಗಳಲ್ಲಿ 1 ಕಪ್​.. ವಿರಾಟ್​ ಪ್ರತಿಜ್ಞೆ..!
ಹೌದು! ವಿರಾಟ್​ ಕೊಹ್ಲಿ ಹೇಳಿಕೆಯಂತೆ ಆರ್​ಸಿಬಿ ಜೊತೆ ವಿಶೇಷ ನಂಟಿದೆ. ಈ ಬಗ್ಗೆ ಭಾವನಾತ್ಮಕವಾಗಿಯೇ ಮಾತನಾಡಿರುವ ವಿರಾಟ್, 3 ವರ್ಷಗಳ ಟಾರ್ಗೆಟ್​​​ ಕೂಡ ಫಿಕ್ಸ್ ಮಾಡಿದ್ದಾರೆ. ವೃತ್ತಿ ಜೀವನದುದ್ದಕ್ಕೂ ಬೆಂಬಲವಾಗಿ ನಿಂತ ಫ್ರಾಂಚೈಸಿಗೆ, ಕಪ್​ ಗೆಲ್ಲಿಸಿಕೊಡುವ ಹಂಬಲದಲ್ಲಿ ಪ್ರತಿಜ್ಞೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/05/VIRAT_KOHLI_BATTING_1.jpg)
ಮುಂಬರುವ ಹರಾಜಿನ ಬಗ್ಗೆ ಕಾತರದಿಂದ ಇದ್ದೇನೆ. ಹೊಸ, ಬಲಿಷ್ಠ ತಂಡ ಕಟ್ಟುವ ಅವಕಾಶವಿದೆ. ಮುಂದಿನ 3 ವರ್ಷಗಳ ಸೈಕಲ್​​ನಲ್ಲಿ ಒಮ್ಮೆಯಾದರೂ ಐಪಿಎಲ್​ ಪ್ರಶಸ್ತಿ ಗೆಲ್ಲಬೇಕೆಂಬುದು ನನ್ನ ಗುರಿಯಾಗಿದೆ. ಮುಂದಿನ ಸೀಸನ್​ನಲ್ಲಿ ಎಂದಿನಂತೆಯೇ ನಮ್ಮ ಕಠಿಣ ಪ್ರಯತ್ನ ಮುಂದುವರಿಸುತ್ತೇವೆ. ಎಲ್ಲರಿಗೂ ಹೆಮ್ಮೆ ಪಡುವಂತೆ ಮಾಡುತ್ತೇವೆ.
-ವಿರಾಟ್​ ಕೊಹ್ಲಿ, ಮಾಜಿ ನಾಯಕ
ಆರ್​ಸಿಬಿ ಋಣಭಾರ ತೀರಿಸ್ತಾರಾ ವಿರಾಟ್ ಕೊಹ್ಲಿ​..?
ಕೊಹ್ಲಿ ಅಂದ್ರೆ, ಆರ್​ಸಿಬಿ. ಆರ್​ಸಿಬಿ ಅಂದ್ರೆ. ವಿರಾಟ್​ ಅನ್ನೋ ಮಾತಿದೆ. ಅದು ನಿಜ ಕೂಡ. ಈ ವಿರಾಟ್​ ಕೊಹ್ಲಿಯ ಮೇಲೆ ಆರ್​ಸಿಬಿಯ ಋಣಾಭಾರ ಇದೆ. ತವರಿನ ಫ್ರಾಂಚೈಸಿಯೇ ಡೆಲ್ಲಿಯೇ ತಿರಸ್ಕರಿಸಿದ್ದಾಗ ಕೊಹ್ಲಿ ಬೆನ್ನಿಗೆ ನಿಂತಿದ್ದು ಆರ್​​ಸಿಬಿ. ಕೊಹ್ಲಿ ಸಕ್ಸಸ್​​, ಫೇಲ್ಯೂರ್​​ನಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಹೀಗೆ ಪ್ರತಿ ಹಂತದಲ್ಲಿ ಬೆನ್ನಿಗೆ ನಿಂತಿದ್ದ ಫ್ರಾಂಚೈಸಿಯ ಋಣಭಾರ ತೀರಿಸಬೇಕಿದೆ. ಕೊಹ್ಲಿಯ ಮಹಾದಾಸೆಯೂ ಇದೇ ಆಗಿದೆ. ಆದ್ರೆ, ಇದು ನಿಜವಾಗಬೇಕಾದ್ರೆ, ಬಿಗ್ಗೆಸ್ಟ್​ ಚಾಲೆಂಜ್ ಗೆಲ್ಲಬೇಕಿದೆ.
ಇದನ್ನೂ ಓದಿ: IND vs NZ; ಟೀಮ್ ಇಂಡಿಯಾಕ್ಕೆ ತೀವ್ರ ಸಂಕಷ್ಟ.. ಕೊಹ್ಲಿ, ಗಿಲ್, ಸರ್ಫರಾಜ್ ಕೇವಲ 1 ರನ್​ಗೆ ಔಟ್
/newsfirstlive-kannada/media/post_attachments/wp-content/uploads/2024/05/VIRAT_KOHLI-4.jpg)
ಮೆಗಾ ಹರಾಜಿನಲ್ಲಿ ಕಟ್ಟಬೇಕು ಬಲಿಷ್ಠ ತಂಡ..!
ವಿರಾಟ್​ ಮಾತಿನಂತೆ ಆರ್​ಸಿಬಿ ಬಲಿಷ್ಠ ತಂಡ ಕಟ್ಟಬೇಕಿದೆ. ಪ್ರಮುಖವಾಗಿ ಸಾಲಿಡ್​ ಓಪನಿಂಗ್​ ನೀಡಬಲ್ಲ ಓಪನರ್ಸ್, ಮಿಡಲ್ ಆರ್ಡರ್​ನಲ್ಲಿ ತಂಡಕ್ಕೆ ನೆರವಾಗುವ ಬ್ಯಾಟರ್ಸ್​, ಮ್ಯಾಚ್ ಫಿನಿಷರ್ಸ್​ ಜೊತೆಗೆ ಓರ್ವ ಸ್ಪೆಷಲಿಸ್ಟ್ ಸ್ಪಿನ್ನರ್​ ಆರ್​ಸಿಬಿಗೆ ಅತ್ಯಗತ್ಯ.! ಅಷ್ಟೇ ಅಲ್ಲ.! ಯಶ್​ ದಯಾಳ್ ಜೊತೆಗೆ ಪವರ್ ಪ್ಲೇ ಆ್ಯಂಡ್ ಡೆತ್​ ಓವರ್​ಗಳಲ್ಲಿ ಎದುರಾಳಿಗಳ ನಿದ್ದೆಗಡಿಸಬಲ್ಲ ಮಿಸೈಲ್​​ ಬೌಲರ್ಸ್ ಬೇಕಿದ್ದಾರೆ.
ಒಟ್ಟಿನಲ್ಲಿ! 18 ಸೀಸನ್​ನಿಂದ ಕಪ್​ ನಮ್ಮದಾಗಲಿಲ್ಲ ಎಂಬ ಕೊರಗು ಮ್ಯಾನೇಜ್​​ಮೆಂಟ್​​​ನ ಕಾಡ್ತಿದೆ. ಕೊಹ್ಲಿಗೂ ಈ ಕೊರಗಿದೆ. ಇದೇ ಕಾರಣಕ್ಕೆ ಸೀಸನ್​​ 19ಕ್ಕೆ ಹೊಸ ಟೀಮ್ ಕಟ್ಟಲು ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ, ಈ ಪ್ಲಾನ್​ ಎಷ್ಟರ ಮಟ್ಟಿಗೆ ವರ್ಕೌಟ್​ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us