/newsfirstlive-kannada/media/post_attachments/wp-content/uploads/2025/01/Sehwag.jpg)
ಕಳೆದ ವರ್ಷವಷ್ಟೇ ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ-ನತಾಶಾ ಸ್ಟ್ಯಾಂಕೋವಿಚ್ ಜೋಡಿ ವಿಚ್ಛೇದನ ಪಡೆದುಕೊಂಡಿದ್ದರು. ಈ ಬೆನ್ನಲ್ಲೇ ಸ್ಟಾರ್​ ಸ್ಪಿನ್ನರ್​​ ಚಹಾಲ್​, ಧನಶ್ರೀ ವರ್ಮಾ ಡಿವೋರ್ಸ್​ಗೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಟೀಮ್​ ಇಂಡಿಯಾದ ಕ್ರಿಕೆಟ್ ದಂತಕಥೆ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ವರದಿಯಾಗಿದೆ.
ಬರೋಬ್ಬರಿ 20 ವರ್ಷಗಳ ನಂತರ ವೀರೇಂದ್ರ ಸೆಹ್ವಾಗ್​​ ಮತ್ತು ಆರತಿ ಅಹ್ಲಾವತ್​​ ದೂರ ಆಗಲು ನಿರ್ಧರಿಸಿದ್ದಾರೆ. ಸದ್ಯದಲ್ಲೇ ಡಿವೋರ್ಸ್​ ಮಾಡಿಕೊಳ್ಳಲಿದ್ದಾರೆ ಎಂದು ಎನ್ನಲಾಗುತ್ತಿದೆ.
2004ರಲ್ಲಿ ವೀರೇಂದ್ರ ಸೆಹ್ವಾಗ್​​ ಮತ್ತು ಆರತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಇಬ್ಬರು ಪರಸ್ಪರ ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿಕೊಂಡಿದ್ದಾರೆ. ಸೆಹ್ವಾಗ್​​, ಆರತಿ ಹಲವು ತಿಂಗಳಿನಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದು, ಸದ್ಯದಲ್ಲೇ ಡಿವೋರ್ಸ್​ ಪಡೆಯಲಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಸ್ಟಾರ್​ ದಂಪತಿಗೆ ಇಬ್ಬರು ಮಕ್ಕಳು
ಇನ್ನು, ಸ್ಟಾರ್​ ಜೋಡಿಗೆ ಇಬ್ಬರು ಮಕ್ಕಳು ಇದ್ದಾರೆ. 2007ರಲ್ಲಿ ಆರ್ಯವೀರ್​ ಮತ್ತು 2010ರಲ್ಲಿ ವೇದಾಂತ್​ ಜನಿಸಿದರು. ಕಳೆದ ದೀಪಾವಳಿಯಿಂದ ಈ ಜೋಡಿ ಪ್ರತ್ಯೇಕ ವಾಸ ಮಾಡುತ್ತಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ