ಕಾರಿನಲ್ಲಿಯೇ ಕಿತ್ತಾಡಿಕೊಂಡರಾ ವಿರೇಂದ್ರ ಸೆಹ್ವಾಗ್ ಮತ್ತು ಆರತಿ; ವೈರಲ್ ಆದ ವಿಡಿಯೋ ಹೇಳ್ತಿರೋದೇನು?

author-image
Gopal Kulkarni
Updated On
ಕಾರಿನಲ್ಲಿಯೇ ಕಿತ್ತಾಡಿಕೊಂಡರಾ ವಿರೇಂದ್ರ ಸೆಹ್ವಾಗ್ ಮತ್ತು ಆರತಿ; ವೈರಲ್ ಆದ ವಿಡಿಯೋ ಹೇಳ್ತಿರೋದೇನು?
Advertisment
  • ಎಲ್ಲರೆದರೂ ಕಾರಿನಲ್ಲಿಯೇ ಕಿತ್ತಾಡಿಕೊಂಡರಾ ಸೆಹ್ವಾಗ್ ಆರತಿ?
  • ಸೆಹ್ವಾಗ್ ಫೋನ್​ನಲ್ಲಿ ಮಾತನಾಡುತ್ತಿರುವಾಗ ಸಿಡಿದಿದ್ದೇಕೆ ಆರತಿ?
  • ವೈರಲ್ ಆದ ವಿಡಿಯೋ ಬಗ್ಗೆ ನೆಟ್ಟಿಗರು ಹೇಳುತ್ತಿರುವುದೇನು ಗೊತ್ತಾ?

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಹಾಗೂ ಅವರ ಪತ್ನಿ ಆರತಿ ಸೆಹ್ವಾಗ್ ನಡುವೆ ಭಿನ್ನಾಭಿಪ್ರಾಯಗಳು ಜೋರಾರಿಗೆ ಎಂಬ ಗುಸುಗುಸು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿವೆ. 20 ವರ್ಷದ ಮದುವೆ ಮುರಿದು ಬೀಳುವ ಹಂತಕ್ಕೆ ಬಂದಿದೆ ಎಂಬ ವರದಿಗಳು ಕೂಡ ಆಗಿವೆ. ಇಬ್ಬರ ಸಂಬಂಧ ವಿಚ್ಛೇಧನ ಹಂತಕ್ಕೂ ಬಂದು ನಿಂತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ ಆರತಿ ಮತ್ತು ಸೆಹ್ವಾಗ ನಡುವೆ ವಾಗ್ವಾದಗಳು ನಡೆದ ವಿಡಿಯೋ ಒಂದು ಸದ್ಯ ವೈರಲ್ ಆಗಿದೆ.

ಆರತಿ ಮತ್ತು ಸೆಹ್ವಾಗ್ ನಡುವೆ ಏನು ಸರಿಯಿಲ್ಲ ಅನ್ನೋ ರೂಮರ್ಸ್​ ತುಂಬಾ ದೊಡ್ಡದಾಗಿ ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ಸೆಹ್ವಾಗ್ ಹಾಗೂ ಆರತಿ ಇಬ್ಬರು ಕಾರ್​​ನಲ್ಲಿ ಕುಳಿತ ವೇಳೆ ವಾಗ್ವಾದ ನಡೆಸಿದ್ದಾರೆ. ಆರತಿ ಅಕ್ಷರಶಃ ಕುದ್ದು ಹೋದವರಂತೆ ಮುಖಭಾವ ಹೊತ್ತು ಮಾತನಾಡಿದ್ದಾರೆ. ವಿಡಿಯೋದಲ್ಲಿ ಸೆಹ್ವಾಗ್​ ಮೊಬೈಲ್​ನಲ್ಲಿ ಯಾರದೋ ಜೊತೆ ಮಾತನಾಡುತ್ತಿರುವಾಗ ಆರತಿ ತುಂಬಾ ಕೋಪದಿಂದ ಹಾಗೂ ಜೋರಾಗಿ ಕಿರುಚಾಡಿದ್ದಾರೆ. ಆದ್ರೆ ಅದು ಏನು ಎಂಬುದು ಆಡಿಯೋದಲ್ಲಿ ಕೇಳಿ ಬಂದಿಲ್ಲ .

ಇದನ್ನೂ ಓದಿ:ಭಾರತ ತಂಡದಲ್ಲಿ ಸ್ಥಾನ ಪಡೆಯಲು ಏನು ಮಾಡ್ಬೇಕು? ಬಾಲಕನ ಪ್ರಶ್ನೆಗೆ ಕೊಹ್ಲಿ ಅದ್ಭುತ ಉತ್ತರ


ಆದ್ರೆ ಕೆಲವರು ಹೇಳುವ ಪ್ರಕಾರ ಇದು ಇತ್ತೀಚಿನ ವಿಡಿಯೋವಲ್ಲ. ತುಂಬಾ ಹಳೆಯ ವಿಡಿಯೋ. ಕಳೆದ ಕೆಲವು ತಿಂಗಳುಗಳಿಂದ ವಿರೇಂದ್ರ ಸೆಹ್ವಾಗ್ ಹಾಗೂ ಆರತಿ ಒಟ್ಟಾಗಿ ಸಾರ್ವಜನಿಕವಾಗಿ ಎಲ್ಲಿಯೂ ಕೂಡ ಕಂಡು ಬಂದಿಲ್ಲ. ಸೋಷಿಯಲ್ ಮೀಡಿಯಾದಲ್ಲಿಯೂ ಕೂಡ ಒಬ್ಬರಿಗೊಬ್ಬರು ಅನ್​ಫಾಲೋವ್ ಮಾಡಿಕೊಂಡಿದ್ದಾರೆ. ಅಲ್ಲದೇ ಆರತಿ ತಮ್ಮ ಹೌಜ್ ಖಾಸ್ ಬಂಗಲೆಗೆ ತೆರಳಿದ್ದಾರೆ.

ಇದನ್ನೂ ಓದಿ: IND vs ENG: ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದು ಹಾರ್ದಿಕ್ ಪಾಂಡ್ಯ..?

ಸೆಹ್ವಾಗ್ ಹಾಗೂ ಆರತಿಯ ಬಾಂಧವ್ಯ ಇಂದು ನಿನ್ನೆಯದಲ್ಲ. ಅವರು ಮೊದಲು ಭೇಟಿಯಾದಾಗ ಸೆಹ್ವಾಗ್​ಗೆ 7 ವರ್ಷ ವಯಸ್ಸು ಇತ್ತು ಮತ್ತು ಆರತಿಗೆ 5. ಯಾವಾಗ ಸೆಹ್ವಾಗ್ 21ನೇ ವಯಸ್ಸಿಗೆ ಬಂದರೋ ಆವಾಗ ಆರತಿ ಅವರಿಗೆ ಪ್ರಪೋಸ್ ಮಾಡಿದ್ದರು. ಈ ಇಬ್ಬರು ಕೂಡ ಒಬ್ಬರಿಗೊಬ್ಬರು ಸಂಬಂಧಿಕರಾಗಬೇಕಿತ್ತು. ಏಪ್ರಿಲ್​ 22, 2004ರಂದು ವಿರೇಂದ್ರ ಸೆಹ್ವಾಗ್ ಹಾಗೂ ಆರತಿ ಹಸೆಮಣೆ ಏರುತ್ತಾರೆ ಅದು ಕೂಡ ಮಾಜಿ ಹಣಕಾಸು ಸಚಿವ ದಿವಂಗತ ಅರುಣ್ ಜೆಟ್ಲಿ ಅವರ ಮನೆಯಲ್ಲಿಯೇ. ಆರತಿ ಹಾಗೂ ವಿರೇಂದ್ರ ದಾಂಪತ್ಯದ ಗುರುತಾಗಿ ಇಬ್ಬರು ಮಕ್ಕಳು ಇದ್ದಾರೆ. ಆರ್ಯವೀರ ಹಾಗೂ ವೇದಾಂತ ಅಂತ. ಸದ್ಯ ಇಬ್ಬರ ನಡುವೆ ದೊಡ್ಡ ಬಿರುಕು ಉಂಟಾಗಿದ್ದು ಸದ್ಯದಲ್ಲಿಯೇ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment