ವೀರೇಂದ್ರ ಸೆಹ್ವಾಗ್​​ ಬಳಿ ಇದೆ ಭಾರೀ ದುಡ್ಡು.. ಎಷ್ಟು ಕೋಟಿ ಒಡೆಯ..?

author-image
Ganesh
Updated On
ವೀರೇಂದ್ರ ಸೆಹ್ವಾಗ್​​ ಬಳಿ ಇದೆ ಭಾರೀ ದುಡ್ಡು.. ಎಷ್ಟು ಕೋಟಿ ಒಡೆಯ..?
Advertisment
  • ವೀರೇಂದ್ರ ಸೆಹ್ವಾಗ್ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು
  • ಸೆಹ್ವಾಗ್ ಅವರ ಆದಾಯದ ಮೂಲಗಳು ಯಾವ್ಯಾವುದು?
  • 20 ವರ್ಷಗಳ ಸಾಂಸಾರಿಕ ಬದುಕಿಗೆ ಸೆಹ್ವಾಗ್ ವಿದಾಯ?

ಟೀಮ್‌ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ಭಯಂಕರ ಬ್ಯಾಟ್ಸ್‌ಮನ್‌ ಆಗಿದ್ದ ವೀರೇಂದ್ರ ಸೆಹ್ವಾಗ್‌ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬ ವದಂತಿ ಇದೆ. 20 ವರ್ಷಗಳ ಸುದೀರ್ಘ ದಾಂಪತ್ಯದ ಬಳಿಕ ಸೇಹ್ವಾಗ್ ತಮ್ಮ ಪತ್ನಿ ಆರತಿ ಅಹ್ಲಾವತ್‌ಗೆ ವಿಚ್ಛೇದನ ನೀಡುವ ಸಾಧ್ಯತೆ ಇದೆ. ಬೆನ್ನಲ್ಲೇ ಅವರ ಆಸ್ತಿ ಬಗ್ಗೆ ಚರ್ಚೆ ಶುರುವಾಗಿದೆ.

ಎಷ್ಟು ಕೋಟಿ ಒಡೆಯ..?

ಅಂದ್ಹಾಗೆ ಸೆಹ್ವಾಗ್ ಗಳಿಕೆ ಅಚ್ಚರಿಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹತ್ತು ವರ್ಷಗಳ ಕಾಲ ಕ್ರಿಕೆಟ್​ನಿಂದ ದೂರವಿದ್ದರೂ ರೋಹಿತ್​ಗಿಂತ ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ. ಸೆಹ್ವಾಗ್ 2015ರಲ್ಲಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಮಾಧ್ಯಮಗಳ ವರದಿಗಳ ಪ್ರಕಾರ 2024ರಲ್ಲಿ 30 ಕೋಟಿ ಹಣ ಗಳಿಸಿದ್ದಾರೆ. ಅಂದರೆ ಪ್ರತಿ ತಿಂಗಳು ಅವರ ಆದಾಯ 2 ಕೋಟಿ ಅಧಿಕ. ಸೆಹ್ವಾಗ್ ಅವರ ಒಟ್ಟು ಸಂಪತ್ತು 370 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಕಾಂತಾರ-2, ಟಾಕ್ಸಿಕ್ ವಿರುದ್ಧ ಅರಣ್ಯ ನಾಶ ಆರೋಪ; ಸರ್ಕಾರದಿಂದ ಮಹತ್ವದ ಆದೇಶ

publive-image

ಸ್ವೆಹಾಗ್ ಆಟದಿಂದ ದೂರವಿದ್ದರೂ, ಅವರ ಆದಾಯದ ಮೂಲ ಕ್ರಿಕೆಟ್ ಆಗಿದೆ. ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ಟಿವಿಯಲ್ಲಿ ಕಾಮೆಂಟರಿ ಮತ್ತು ಕ್ರಿಕೆಟ್ ಪರಿಣಿತರಾಗಿ ವಿಶ್ಲೇಷಣೆ ಮಾಡುತ್ತಾರೆ. ಅಲ್ಲದೇ ಬೇರೆ ಬೇರೆ ಟಿವಿ ಕಾರ್ಯಕ್ರಮಗಳಿಂದಲೂ ಸಂಪಾದನೆ ಮಾಡುತ್ತಾರೆ. ಸೋಶಿಯಲ್ ಮೀಡಿಯಾಗಳಿಂದಲೂ ಸೆಹ್ವಾಗ್​​ಗೆ ಹಣ ಹರಿದುಬರುತ್ತದೆ. ಪ್ರತಿ ವರ್ಷ ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮೂಲಕ ಸುಮಾರು 26 ಕೋಟಿ ರೂಪಾಯಿ ಬರುತ್ತಿದೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: RCB ಆಟಗಾರರು T20 ಪಂದ್ಯದಲ್ಲಿ ಫ್ಲಾಪ್​ ಶೋ.. ಫ್ರಾಂಚೈಸಿಗೆ ಸಂಕಷ್ಟ ಕಾದಿದೆಯಾ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment