newsfirstkannada.com

DRS ಬಳಸಿದ ಫಸ್ಟ್​ ಕ್ರಿಕೆಟರ್​ ಯಾರು? ಈ ನಿಯಮದಿಂದ ಔಟ್​ ಆದ ಭಾರತದ ಸ್ಫೋಟಕ ಬ್ಯಾಟ್ಸ್​ಮನ್ ಇವರೇ

Share :

Published July 24, 2023 at 1:12pm

Update July 24, 2023 at 1:15pm

    DRS ನಿಯಮ ಬಳಸಿ ಮೊದಲು ಔಟ್ ಆಗಿದ್ದು ಯಾರು ಗೊತ್ತಾ?

    DRS ಬಳಸಿದ ಮೊದಲ ಎರಡು ದೇಶಗಳು ಅಂದ್ರೆ ಭಾರತ, ಶ್ರೀಲಂಕಾ

    ಡಿಸಿಷನ್ ರಿವ್ಯೂ ಸಿಸ್ಟಮ್ ಜಾರಿಯಾಗಿ ಎಷ್ಟು ವರ್ಷಗಳಾಗಿವೆ?

ಡಿಸಿಷನ್ ರಿವ್ಯೂ ಸಿಸ್ಟಮ್. ಅಂದ್ರೆ ಡಿಆರ್​ಎಸ್​​​​ ಜಾರಿಗೆ ಬಂದು ಬರೋಬ್ಬರಿ 15 ವರ್ಷಗಳಾಯ್ತು. ಹಾಗಾದ್ರೆ, ಅಂಪೈರ್​ ತೀರ್ಪನ್ನ ಮೊದಲು ಮರುಪರಿಶೀಲನೆ ಮಾಡಿದ್ದು ಯಾರು, ಈ ನಿಯಮದಿಂದ ಮೊದಲು ಔಟ್​ ಆಗಿರೋದು ಯಾರು ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.

DRS ಎಂದರೆ ಡಿಸಿಷನ್ ರಿವ್ಯೂ ಸಿಸ್ಟಮ್​​. ವಿವಾದಾತ್ಮಕ ತೀರ್ಪುಗಳ ತಡೆಗಾಗಿ ಬಳಸುವ ಈ ತಂತ್ರಜ್ಞಾನ ಜಾರಿಯಾಗಿ ಬರೋಬ್ಬರಿ 15 ವರ್ಷಗಳು ಕಳೆದಿವೆ. 2008 ಜುಲೈ 23ರಂದು ಅಧಿಕೃತವಾಗಿ ಜಾರಿಗೆ ಬಂದ ಈ ತಂತ್ರಜ್ಞಾನಕ್ಕೆ ಇಂಡೋ-ಲಂಕಾ ಟೆಸ್ಟ್​ ಪಂದ್ಯ ಸಾಕ್ಷಿಯಾಗಿತ್ತು.

ಈ ಪಂದ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಆರ್​ಎಸ್​ ನಿಯಮವನ್ನ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್​​​ ಬಳಸಿದರು. ಇನ್ನು, ಡಿಆರ್​ಎಸ್​​​ಗೆ ಬಲಿಯಾದ ಮೊದಲ ಬ್ಯಾಟ್ಸ್​ಮನ್​ ಟೀಮ್ ಇಂಡಿಯಾದ ಓಪನರ್​ ವಿರೇಂದ್ರ ಸೆಹ್ವಾಗ್​. ಇನ್ನು, ಇದೇ ಪಂದ್ಯದಲ್ಲಿ ಅಂಪೈರ್​ ತೀರ್ಪಿಗೆ ಮೇಲ್ಮನವಿ ಸಲ್ಲಿಸಿ ಶ್ರೀಲಂಕಾ ಮಾಜಿ ಕ್ರಿಕೆಟರ್ ತಿಲಕರತ್ನೆ ದಿಲ್ಶಾನ್​ ಬಚಾವ್​ ಕೂಡ ಆಗಿದ್ರು. ಇಷ್ಟೇ ಅಲ್ಲ, ಡಿಆರ್​​ಎಸ್​ನಿಂದ ಬಚಾವ್ ಆಗಿದ್ದ ದಿಲ್ಶಾನ್​​ ಅಜೇಯ 125 ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.

ಈ ಪಂದ್ಯವನ್ನ ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 239 ರನ್​ಗಳ ಹೀನಾಯ ಸೋಲು ಕಂಡಿತ್ತು. ಈ ಪಂದ್ಯದ ಬಳಿಕ ಈ ಡಿಆರ್​ಎಸ್​ನ್ನ ಏಕದಿನ ಹಾಗೂ ಟಿ20 ಫಾರ್ಮೆಟ್​​ಗೆ ವಿಸ್ತರಿಸಲಾಯಿತು. ಸದ್ಯ ಈ ನಿಯಮ ಸೋಲು- ಗೆಲುವಿನಲ್ಲಿ ಮೇಜರ್​ ರೋಲ್​ ಪ್ಲೇ ಮಾಡ್ತಿದೆ. ಹಾಗಿದ್ದರೂ ವಿವಾದಾತ್ಮಕ ತೀರ್ಪಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ ಅನ್ನೋದು ವಿಪರ್ಯಾಸ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

DRS ಬಳಸಿದ ಫಸ್ಟ್​ ಕ್ರಿಕೆಟರ್​ ಯಾರು? ಈ ನಿಯಮದಿಂದ ಔಟ್​ ಆದ ಭಾರತದ ಸ್ಫೋಟಕ ಬ್ಯಾಟ್ಸ್​ಮನ್ ಇವರೇ

https://newsfirstlive.com/wp-content/uploads/2023/07/SACHIN_RAIN.jpg

Load More