Advertisment

ಹಾರ್ದಿಕ್ ಪಾಂಡ್ಯಗೆ ಇಲ್ಲ ಸ್ಥಾನ; ಟಿ-20 ವಿಶ್ವಕಪ್​​ಗೆ ಪ್ಲೇಯಿಂಗ್-11 ಪ್ರಕಟಿಸಿದ ಸೆಹ್ವಾಗ್..!

author-image
Ganesh
Updated On
ಹಾರ್ದಿಕ್ ಪಾಂಡ್ಯಗೆ ಇಲ್ಲ ಸ್ಥಾನ; ಟಿ-20 ವಿಶ್ವಕಪ್​​ಗೆ ಪ್ಲೇಯಿಂಗ್-11 ಪ್ರಕಟಿಸಿದ ಸೆಹ್ವಾಗ್..!
Advertisment
  • ವಿರೇಂದ್ರ ಸೆಹ್ವಾಗ್ ಪ್ರಕಟಿಸಿದ ತಂಡದಲ್ಲಿ ಯಾರಿಗೆಲ್ಲ ಸ್ಥಾನ?
  • ಕೊಹ್ಲಿ ಆರಂಭಿಕರಾಗಿ ಬರಬೇಕು ಎಂಬ ವಾದಕ್ಕೆ ಉತ್ತರ ಏನು?
  • ಯಂಗ್ ಗನ್ ಸಂದೀಪ್ ಶರ್ಮಾಗೆ ಮಣೆ ಹಾಕಿದ ಸೆಹ್ವಾಗ್

ಟಿ20 ವಿಶ್ವಕಪ್ 2024 ಜೂನ್ 2 ರಿಂದ ಪ್ರಾರಂಭವಾಗುತ್ತದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಮೈದಾನದಲ್ಲಿ ಪಂದ್ಯಾವಳಿ ಆಯೋಜನೆಗೊಳ್ಳುತ್ತಿದೆ. ಭಾರತ ತಂಡ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

Advertisment

ಇದಾದ ಬಳಿಕ ಜೂನ್ 9ರಂದು ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಯಾವುದು? ಈ ಭಾರತ ತಂಡದಲ್ಲಿ ಯಾವ ಆಟಗಾರರು ಸ್ಥಾನ ಪಡೆಯುತ್ತಾರೆ? ಎಂಬ ಕುತೂಹಲ ಹೆಚ್ಚಾಗಿದೆ. ಈ ವಾರದ ಅಂತ್ಯದೊಳಗೆ ಟೀಂ ಇಂಡಿಯಾ ಪ್ರಕಟ ಆಗಲಿದೆ.

ಇದನ್ನೂ ಓದಿ:ಕೇವಲ 20 ಲಕ್ಷ ಜೇಬಿಗಿಳಿಸಿ ಕೋಟಿ ಕುಬೇರರ ಮೀರಿಸಿದ ರಿಯಲ್ ಹೀರೋಗಳು.. ಒಬ್ಬರಿಗಿಂತ ಒಬ್ಬರು ಸೂಪರ್​​..!

ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್.. ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದ್ದಾರೆ. ಸೆಹ್ವಾಗ್ ಅವರು ಆಡುವ ಹನ್ನೊಂದರಲ್ಲಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಆಯ್ಕೆ ಮಾಡಿದ್ದಾರೆ. ಬಳಿಕ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ರಂತಹ ಬ್ಯಾಟ್ಸ್ ಮನ್​ಗಳನ್ನು ಸೂಚಿಸಿದ್ದಾರೆ.

Advertisment

ರಿಂಕು ಸಿಂಗ್ ಅಥವಾ ಶಿವಂ ದುಬೆ ಅವರನ್ನು ಪ್ಲೇಯಿಂಗ್ ಇಲೆವೆನ್​​ನಲ್ಲಿ ಆಡಿಸುವಂತೆ ಒತ್ತಾಯಿಸಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಟಿ 20 ವಿಶ್ವಕಪ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಅಂದರೆ ಹಾರ್ದಿಕ್ ಪಾಂಡ್ಯರನ್ನು ಸೇರಿಸಲಿಲ್ಲ.

ಇದನ್ನೂ ಓದಿ:7 ಪಂದ್ಯಗಳಲ್ಲಿ ಸೋತು ಭಾರೀ ಮುಖಭಂಗ; ಆರ್​​ಸಿಬಿ ಪ್ಲೇಯಿಂಗ್-11ನಲ್ಲಿ ಇಂದು ಭಾರೀ ಬದಲಾವಣೆ..!

ವೀರೇಂದ್ರ ಸೆಹ್ವಾಗ್ ಕುಲ್​ದೀಪ್ ಯಾದವ್ ಮೇಲೆ ಹೆಚ್ಚು ವಿಶ್ವಾಸ ಹೊಂದಿದ್ದಾರೆ. ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಸಿರಾಜ್ ಮತ್ತು ಸಂದೀಪ್ ಶರ್ಮಾ ಕೂಡ ಪ್ಲೇಯಿಂಗ್-11ರಲ್ಲಿ ಇರಬೇಕು ಎಂದಿದ್ದಾರೆ.

Advertisment

ಸೆಹ್ವಾಗ್ ಟೀಂ: ರೋಹಿತ್ ಶರ್ಮಾ (ಕ್ಯಾಪ್ಟನ್), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ರಿಂಕು ಸಿಂಗ್, ದುಬೆ, ಜಡೇಜಾ, ಕುಲ್ದೀಪ್ ಯಾದವ್, ಬುಮ್ರಾ, ಸಿರಾಜ್, ಸಂದೀಪ್ ಶರ್ಮಾ.

ಇದನ್ನೂ ಓದಿ:Video: ಪಂತ್ ಹೊಡೆದ ಬಾಲ್​​​ನಿಂದ ಕ್ಯಾಮರಾಮ್ಯಾನ್​ಗೆ ಪೆಟ್ಟು; ಕ್ಷಮೆ ಕೇಳಿ ವಿನಯತೆ ಮೆರೆದ ನಾಯಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment