2ನೇ ಮದುವೆ ಆಗಲು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್; ಕಾರಣವೇನು ಗೊತ್ತಾ?

author-image
admin
Updated On
2ನೇ ಮದುವೆ ಆಗಲು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್; ಕಾರಣವೇನು ಗೊತ್ತಾ?
Advertisment
  • ಹೆಂಡತಿ ಸತ್ತ ಮೇಲೆ 2ನೇ ಮದುವೆ ಆಗೋದು ಹೇಗೆ?
  • ನೇಪಾಳದ ಮಮತಾ ಕಫ್ಲೆ ಭಟ್ ಜೊತೆ ಮೊದಲ ಮದುವೆ
  • ಪತ್ನಿ ನಿಗೂಢವಾಗಿ ನಾಪತ್ತೆಯಾದ ಮೇಲೆ 2ನೇ ಮದುವೆ ಚಿಂತೆ

ಹೆಂಡ್ತಿ ತೀರ್ಕೊಂಡ ಮೇಲೆ ಮತ್ತೆ ಮದುವೆ ಆಗೋದು ಹೇಗೆ ಅಂತ ಗೂಗಲ್‌ನಲ್ಲಿ ಸರ್ಚ್​ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರೇ ಇದೇನು.. ಜಸ್ಟ್ ಗೂಗಲ್​​ನಲ್ಲಿ ಎರಡನೇ ಮದುವೆ ಬಗ್ಗೆ ಸರ್ಚ್‌ ಮಾಡಿದ್ದಕ್ಕೆ ಪೊಲೀಸರು ಅರೆಸ್ಟ್ ಮಾಡ್ತಾರಾ? ಅನ್ನೋ ಪ್ರಶ್ನೆ ನೀವು ಕೇಳಬಹುದು. ಆದರೆ ಅಸಲಿ ಕಹಾನಿನೇ ಬೇರೆನೇ ಇದೆ.

ಇದನ್ನೂ ಓದಿ: ಪುಷ್ಪ-2 ನೋಡುವ ಆತುರ, ಕರ್ನಾಟಕದಲ್ಲೂ ದುರಂತ.. 19 ವರ್ಷಕ್ಕೆ ಬದುಕು ಮುಗಿಸಿದ ಯುವಕ

ಅಮೆರಿಕಾದ ವರ್ಜಿನಿಯಾದಲ್ಲಿ ಈ ಘಟನೆ ನಡೆದಿದೆ. ವರ್ಜಿನಿಯಾ ನಿವಾಸಿಯಾದ ವ್ಯಕ್ತಿಯೊಬ್ಬ ಹೆಂಡ್ತಿ ಸತ್ತ ಮೇಲೆ ಎರಡನೇ ಮದುವೆ ಯಾವಾಗ ಆಗಬಹುದು ಅಂತ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾನೆ. ಜಸ್ಟ್ ಗೂಗಲ್ ಸರ್ಚ್​ ಮಾಡಿದ ಹಿಂಟ್ ಇಟ್ಕೊಂಡ್ ಬಂದಿದ್ದ ಪೊಲೀಸರಿಗೆ ಮಹತ್ವದ ಕೇಸ್ ಪತ್ತೆಯಾಗಿದೆ. ಅದು ಕೂಡ, ತಾನೇ ಅಗ್ನಿಸಾಕ್ಷಿಯಾಗಿ ಮದುವೆಯಾಗಿ ಜೀವನ ಸಂಗಾತಿಯಾಗಿ ಸ್ವೀಕರಿಸಿದ್ದ, ನೇಪಾಳ ಮೂಲದ 28 ವರ್ಷ ಮಮತಾ ಕಫ್ಲೆ ಭಟ್ ಅನ್ನೋ ಹೆಂಡತಿಯನ್ನ ಕೊಲೆ ಮಾಡಿದ್ದಾನೆ ಅನ್ನೋ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿದೆ.

33 ವಯಸ್ಸಿನ ಆರೋಪಿ ನರೇಶ್ ಭಟ್ ಹೆಂಡತಿ ಮಮತಾ, ಕಳೆದ ಜುಲೈ 29ನೇ ತಾರೀಖು ಕೊನೆಯದಾಗಿ ಕಾಣಿಸಿಕೊಂಡಿದ್ಳಂತೆ. ಎಲ್ಲಿಗೋದ್ಳು.. ಏನ್ ಆದ್ಲೂ ಅನ್ನೋ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಅಪ್ಪಿತಪ್ಪಿ ಏನಾದ್ರೂ ಸಾವು ಅಥವಾ ಕೊಲೆ ಆಗಿದ್ರೂ ಪೊಲೀಸರಿಗೆ ಮೃತದೇಹನೂ ಸಿಕ್ಕಿರಲಿಲ್ಲ. ಆದ್ರೆ ಮಮತಾಳ ಡಿಎನ್​​ಎ ಹಾಗೂ ನರೇಶ್ ಮನೆಯಲ್ಲಿ ಸಿಕ್ಕ ವಸ್ತುಗಳಿಗೆ ಮ್ಯಾಚ್ ಮಾಡಿದಾಗ ಹೋಲಿಕೆಯಾಗಿರೋದನ್ನು ಪೊಲೀಸರು ಕನ್ಫರ್ಮ್​ ಮಾಡಿದ್ದಾರೆ. 3 ತಿಂಗಳ ಹಿಂದೆ 28 ವರ್ಷದ ಹೆಂಡತಿ ಮಮತಾ ಭಟ್ ಮಿಸ್ಸಿಂಗ್ ಕಥೆಯನ್ನ ಗಂಡ ನರೇಶ್ ಕಟ್ಟಿದ್ದ. ಇದೆ ಟೈಂನಲ್ಲಿ, ಗೂಗಲ್ ಸರ್ಚ್ ಮಾಡಿ ಹೆಂಡ್ತಿ ಸತ್ತೋದ್ರೇ ಮತ್ತೊಂದು ಮದ್ವೆ ಯಾವಾಗ ಆಗಬಹುದು, ಸತ್ತ ಹೆಂಡತಿ ಮಾಡಿದ ಸಾಲಗಳು ಏನಾಗುತ್ತೆ, ಕೆಲ ವೆಬ್‌ಸೈಟ್‌ನಲ್ಲಿ ದೇಹ ರಹಿತ ಕೊಲೆಗಳ ಬಗ್ಗೆ ಸರ್ಚ್ ಮಾಡಿರೋದನ್ನ ಸ್ವತಃ ಬಲೆಗೆ ಬಿದ್ದ ನರೇಶ್ ಒಪ್ಪಿಕೊಂಡಿದ್ದಾನೆ.

ಆಗಸ್ಟ್ 5ನೇ ತಾರಿಖು, ಮಮತಾ ನಾಪತ್ತೆಯಾಗಿದ್ದಾಳೆ ಅಂತ ರಿಪೋರ್ಟ್​ ಆಗಿದೆ. ಯಾರೇ ಫೋನ್ ಮಾಡಿದ್ರೂ ರಿಸಿವ್ ಮಾಡದೇ ಇರೋದು, ಜೊತೆಗೆ ಮನೆಯಿಂದ ಹೊರಗಡೆನೇ ಬರದೇ ಇರೋದು ಸಾಕಷ್ಟೂ ಅನುಮಾನಕ್ಕೆ ಕಾರಣ ಆಗಿದೆ. ಜೀವನ ಸಂಗಾತಿಯಾಗಿದ್ದ ಹೆಂಡ್ತಿಯನ್ನ ಕೊಲೆ ಮಾಡಿ, ಇನ್ನೊಂದು ಮದುವೆ ಆಗೋದಕ್ಕೆ ಮುಂದಾಗಿದ್ದ. ಅನುಮಾನಾಸ್ಪದ ವಸ್ತುಗಳ ಖರೀದಿ ಜೊತೆಗೆ ಆನ್‌ಲೈನ್‌ನಲ್ಲಿ ಸರ್ಚ್​ ಮಾಡಿದ್ದು ಕೂಡ ಡೌಟ್​ಗೆ ಕಾರಣವಾಗಿತ್ತು. ಇದ್ರಲ್ಲೇನೋ ತಪ್ಪಾಗಿದೆ ಅನ್ನೋ ರೀತಿ ಸಾಕ್ಷ್ಯಗಳು ಪೊಲೀಸರಿಗೆ ಸಿಕ್ಕಿದ್ವು. ಮಾನಸಾಸ್ ಪಾರ್ಕ್‌ ನಿವಾಸಿಯಾದ ನರೇಶ್ ಭಟ್‌ ವಿರುದ್ಧ ಕೊಲೆ ಹಾಗೂ ದೇಹವನ್ನು ನಾಶ ಮಾಡಿದ ಆರೋಪ ಮಾಡಿ ವರ್ಜೀನಿಯಾ ಗ್ರ್ಯಾಂಡ್ ಜ್ಯೂರಿ ದೂರನ್ನ ಕೊಟ್ಟಿದ್ದಾರೆ.

ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ದಂಪತಿ ಬೇರೆ ಬೇರೆಯಾಗೋದಕ್ಕೆ ಬಯಸಿದ್ವಿ ಅಂತ ನರೇಶ್ ಹೇಳಿದ್ದಾನೆ. ಅಷ್ಟೇ ಅಲ್ಲ.. ಇವನು, ಏಪ್ರಿಲ್‌ನಲ್ಲಿ ಹೆಂಡ್ತಿ ಸತ್ತ ಮೇಲೆ ಎರಡನೇ ಮದ್ವೆ ಆಗೋದಕ್ಕೆ ಎಷ್ಟು ಟೈಂ ಹಿಡಿಯುತ್ತೆ ಅಂತ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದ. ಹತ್ತಿರದ ಮಾಲ್​​ನಿಂದ ಮೂರು ಚಾಕುಗಳನ್ನು ಖರೀದಿ ಮಾಡಿದ ಎವಿಡೆನ್ಸ್ ಸಿಕ್ಕಿತ್ತು. ಇನ್ನೊಂದು ಮಾರ್ಟ್‌ ಶಾಪ್‌ನಲ್ಲಿ ಕ್ಲೀನ್ ಮಾಡೋ ವಸ್ತುಗಳನ್ನು ನರೇಶ್ ಖರೀದಿ ಮಾಡಿರೋದು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ಇನ್ನೊಂದು ಭಯಂಕರವಾದ ಅಂಶ ಹೊರಗಡೆ ಬಂದಿದೆ. ಹೆಂಡ್ತಿಯ ದೇಹವನ್ನು ಕತ್ತರಿಸಿರುವ ಸಾಧ್ಯತೆಗಳ ಬಗ್ಗೆ ಕೆಲವು ಸಾಕ್ಷಿಗಳು ಸಿಕ್ಕಿವೆ. ಕೊಲೆ ಆದ್ಮೇಲೆ ನರೇಶ್, ರಕ್ತಸಿಕ್ತವಾದ ಮ್ಯಾಟನ್ನು ಹಾಗೂ ಬ್ಯಾಗನ್ನ ಕಸದ ರಾಶೀಗೆ ಎಸೆದಿದ್ದ. ಆದರೆ ಕೋರ್ಟ್​ನಲ್ಲಿ ನರೇಶ್ ಭಟ್ ಪರ ವಕೀಲರು, ಮಮತಾ ಇನ್ನೂ ಬದುಕಿದ್ದಾರೆ ಅಂತ ವಾದ ಮಾಡಿದ್ದಾರೆ. ಆದರೆ ಡಿಎನ್‌ಎ ಪರೀಕ್ಷೆಯಲ್ಲಿ ಅವರ ಮನೆಯಲ್ಲಿ ಪತ್ತೆಯಾದ ರಕ್ತ, ಮಮತಾ ಅವರದ್ದೇ ಎಂದು ಖಚಿತವಾಗಿದೆ. ಆಕೆಯನ್ನು ಕೊಂದು ದೇಹ ನಾಶ ಮಾಡೋದಕ್ಕೆ ಪ್ಲ್ಯಾನ್ ಮಾಡಿದ್ದಾನೆ. ಈ ಸಾಕ್ಷಿಗಳೇ ನರೇಶ್ ವಿರುದ್ಧದ ಪ್ರಕರಣ ಮತ್ತಷ್ಟು ಗಟ್ಟಿಯಾಗೋದಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ಮಮತಾ ದೇಹ ಇನ್ನೂ ತನಿಖಾ ತಂಡಕ್ಕೆ ಸಿಕ್ಕಿಲ್ಲ ಅಂತ ರಿಪೋರ್ಟ್​ ಆಗಿದೆ. ನರೇಶ್ ಭಟ್ ಹೆಂಡತಿ, ನಾಪತ್ತೆಯಾದ ಕೂಡಲೇ ಪೊಲೀಸರಿಗೆ ಹೇಳಿಲ್ಲ.

ಇದನ್ನೂ ಓದಿ: ಹಾಳೆತಟ್ಟೆ ಉತ್ಪಾದನೆಯಲ್ಲಿ ಅಗ್ರಿಲೀಫ್ ಹೊಸ ಮೈಲಿಗಲ್ಲು; ಹೇಗಿದೆ ಯಶೋಗಾಥೆ..?

ಆದರೆ ನರೇಶ್​​ ಮೇಲೆನೇ ಪೊಲೀಸರಿಗೆ ಅನುಮಾನ ಬಂದಿದ್ದರಿಂದ ಆಗಸ್ಟ್ 22ನೇ ತಾರೀಖು, ಅವನ ಮನೆಯಲ್ಲಿ ಸರ್ಚ್​ ಮಾಡಿದಾಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಂದಿನಿಂದ ನರೇಶ್ ಭಟ್ ಕಸ್ಟಡಿಯಲ್ಲೇ ಇದ್ದು, ಸೆಪ್ಟೆಂಬರ್‌ನಲ್ಲಿ ಆತನ ಜಾಮೀನು ಅರ್ಜಿ ಕೋರ್ಟ್​ನಲ್ಲಿ ವಜಾ ಆಗಿದೆ. ಮಮತಾ ಭಟ್ ನೇಪಾಳದ ಮಕ್ಕಳ ನರ್ಸ್ ಆಗಿ ಕೆಲಸ ಮಾಡ್ತಿದ್ದರು. ಈ ಘಟನೆ ಈಗ ಇಂಟರ್​ನ್ಯಾಷನಲ್ ಸುದ್ದಿಯಾಗಿ ಜನ ನೋಡ್ತಿದ್ದಾರೆ. ಮಮತಾ ಭಟ್ ಕುಟುಂಬಸ್ಥರು ಹಾಗೂ ಅವರ ಸಮುದಾಯದವರು ಸೋಶಿಯಲ್ ಮೀಡಿಯಾ ಹಾಗೂ ಱಲಿ ಮಾಡೋ ಮೂಲಕ ನ್ಯಾಯಕ್ಕಾಗಿ ಆಗ್ರಹ ಮಾಡಿದ್ದಾರೆ. ಜುಲೈ ನಲ್ಲಿ ಮಮತಾ, ಮಿಸ್ಸಿಂಗ್ ಆದ್ಮೇಲೆ ಮೂರು ವಾರಗಳ ನಂತರ ನರೇಶ್ ಅರಸ್ಟ್ ಆಗಿದೆ. ಸದ್ಯ, ಹೆಂಡತಿಯ ಮೃತದೇಹದ ನಾಪತ್ತೆ ಕೇಸ್ ಕೂಡಾ ಹಾಕಿ ಗಂಡ ನರೇಶ್​​ನನ್ನ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment