/newsfirstlive-kannada/media/post_attachments/wp-content/uploads/2025/05/Covid-19-Doctor.jpg)
ಬೆಂಗಳೂರು: ಕಳೆದ ಬಾರಿ ಕೊರೊನಾ ಬಂದು ನರಳಿದ್ದವರು. ಎರಡು ಬೂಸ್ಟರ್ ಡೋಸ್ ಹಾಕಿಸಿಕೊಂಡವರು ಡೆಡ್ಲಿ ವೈರಸ್ ಕಣ್ಮರೆ ಆದ ನಂತರ ಕೂಲ್ ಆಗಿದ್ದರು. ಆದ್ರೆ ಈಗ ಮತ್ತೆ ಕೊರೊನಾ ಬಂದಿದೆ.
ಈ ಹಿಂದೆ ಕೊರೊನಾ ಪಾಸಿಟಿವ್ ಬಂದವರಲ್ಲೂ ಆತಂಕ ಹೆಚ್ಚಾಗ್ತಿದೆ. ಈ ಹಿಂದೆ ಕೊರೊನಾ ಬಂದು ಹೋಗಿದೆ. ವ್ಯಾಕ್ಸಿನ್ ತೆಗೆದುಕೊಂಡು ಆಗಿದೆ. ಆದರೂ ಸಹ ಈ ವೈರಸ್ ಅಟ್ಯಾಕ್ ಮಾಡುತ್ತಾ? ಅನ್ನೋ ಪ್ರಶ್ನೆಗೆ ವೈರಾಣು ತಜ್ಞರು ಉತ್ತರ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಕೋವಿಡ್ ತೀವ್ರತೆ 5% ಗೂ ಹೆಚ್ಚು ಪಾಸಿಟಿವಿಟಿ ರೇಟ್ ಏರಿಕೆ ಆದ್ರೆ ಡೇಂಜರ್ ಅಂತ ಹೇಳಲಾಗಿತ್ತು. ಆದರೆ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 19.35% ದಾಖಲಾಗಿದೆ. ಈ ಏರಿಕೆ ಜನರಲ್ಲಿ ಆತಂಕವನ್ನ ಇನ್ನಷ್ಟು ಹೆಚ್ಚು ಮಾಡಿದೆ. ಇದರಿಂದ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಅನ್ನೋ ಭರವಸೆಯನ್ನ ವೈರಾಣು ತಜ್ಞರಾದ ಡಾ.ಚಂದ್ರಶೇಖರ್ ಕೊಡ್ತಿದ್ದಾರೆ.
ಈ ಹಿಂದೆ ಕೊರೊನಾ ಪಾಸಿಟಿವ್ ಆದ 70%-80% ಜನರಿಗೆ ಮತ್ತೆ ಕೊರೊನಾ ಪಾಸಿಟಿವ್ ಬರೋದು ಡೌಟು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ ಜನ ನಿರ್ಲಕ್ಷ್ಯ ಮಾಡೋದು ಸರಿಯಲ್ಲ ಅಂತಲೂ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ವೈರಸ್ 80ಕ್ಕೆ ಏರಿಕೆ.. ಯಾವ್ಯಾವ ಜಿಲ್ಲೆಗಳಲ್ಲಿ ಕೋವಿಡ್ ಕೇಸ್ ಪತ್ತೆ ಆಗಿವೆ?
ಎರಡು ವ್ಯಾಕ್ಸಿನ್ ತೆಗೆದುಕೊಂಡವರು ಎಷ್ಟು ಸೇಫ್?
ಕಳೆದ ಬಾರಿ ಬಂದ ಕೋವಿಡ್-19ಗೆ, ವ್ಯಾಕ್ಸಿನ್ ಬ್ರಹ್ಮಾಸ್ತ್ರವಾಗಿ ಹುಟ್ಟಿಕೊಂಡಿತ್ತು. ಆದರೆ ಈಗ ಜನರಲ್ಲಿ ಇರುವ ಅನುಮಾನ ಏನಂದರೆ, ಆಗ ತೆಗೆದುಕೊಂಡ ಎರಡೂ ಬೂಸ್ಟರ್ ಡೋಸ್ ಈಗ ಬಂದ ಕೊರೊನ ವೈರಸ್ ಅನ್ನ ತಡೆಗಟ್ಟುತ್ತಾ ಅನ್ನೋದು. ವ್ಯಾಕ್ಸಿನ್ ತಗೊಂಡವರಿಗೆ 70%ರಷ್ಟು ಈ ವೈರಸ್ ಅಟ್ಯಾಕ್ ಮಾಡಲ್ಲ ಎಂದೇ ತಜ್ಞರು ಹೇಳಿದ್ದಾರೆ.
ಒಂದು ವೇಳೆ ಈ ಹಿಂದೆ ಕೊರೊನಾ ಬಂದವರಿಗೆ, ವ್ಯಾಕ್ಸಿನ್ ತಗೊಂಡ ಕೆಲವರಿಗೆ ಪಾಸಿಟಿವ್ ಬಂದರೂ, ದೇಹದ ಮೇಲೆ ಅಷ್ಟೂ ಪರಿಣಾಮಕಾರಿಯಾಗಿ ಇರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಈಗ ಬಂದ ವೈರಸ್ಗೆ ಸ್ಪ್ರೆಡಿಂಗ್ ಕ್ಯಾಪಸಿಟಿ ಹೆಚ್ಚಿದೆ ಅಂತಲೂ ಹೇಳಲಾಗ್ತಿದೆ. ಆದರೇ ಈ ಹಿಂದೆ ಸ್ಪ್ರೆಡ್ ಆದಂತೆ ಈಗ ಆಗಲ್ಲ. ಈಗ ವ್ಯಾಕ್ಸಿನ್ ಇರುವುದರಿಂದ ಒಬ್ಬರಿಗೆ ಇನ್ನೊಬ್ಬರಿಗೆ ಮೊದಲಿನಷ್ಟು ಸ್ಪ್ರೆಡ್ ಆಗಲ್ಲ. ಆದರೂ ಜನರು ನಿರ್ಲಕ್ಷ್ಯ ಮಾಡದೇ ಮಾಸ್ಕ್ ಹಾಕಿ ಓಡಾಡೋದು, ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡು ಪಾಲಿಸಿದರೆ ಒಳ್ಳೆಯದು ಎಂದು ಡಾ.ಚಂದ್ರಶೇಖರ್ ಸಲಹೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ