/newsfirstlive-kannada/media/post_attachments/wp-content/uploads/2025/05/VISHAL-1.jpg)
ತಮಿಳು ಸ್ಟಾರ್ ನಟ ವಿಶಾಲ್ ಅವರಿಗೆ 47 ವರ್ಷಗಳು ತುಂಬಿದರೂ ಮದುವೆ ಆಗಿರಲಿಲ್ಲ. ಅಭಿಮಾನಿಗಳೆಲ್ಲ ಮದುವೆ ಯಾವಾಗ, ಯಾವಾಗ ಎಂದು ಕೇಳಿ ಕೇಳಿ ಸುಸ್ತಾಗಿದ್ದರು. ಆದರೆ ಇದೀಗ ಬ್ಯಾಚುಲರ್ ಲೈಫ್ಗೆ ಬ್ರೇಕ್ ಬೀಳುವ ಸಮಯ ಬಂದಿದೆ. ವಿಶಾಲ್ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ನನ್ನ ಬಹುದಿನಗಳ ಗೆಳತಿಯನ್ನು ವಿವಾಹ ಆಗಲಿದ್ದೇನೆ ಎಂದು ಸ್ವತಹ ವಿಶಾಲ್ ಅವರೇ ಹೇಳಿಕೊಂಡಿದ್ದಾರೆ.
ಚೆನ್ನೈನಲ್ಲಿ ನಡೆದ ಯೋಗಿ ದ ಎನ್ನುವ ಸಿನಿಮಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಟ ವಿಶಾಲ್ ಅವರು, ನಾನು ಮದುವೆ ಆಗುತ್ತಿದ್ದೇನೆ. ಹುಡುಗಿ ಯಾರು ಅಲ್ಲ. ಹುಡುಗಿ ಹಾಗೂ ಅವರ ತಂದೆ ಕೂಡ ಇಲ್ಲೇ ಇದ್ದಾರೆ. ನಟಿ ಸಾಯಿ ಧನ್ಶಿಕಾ ಅವರ ಜೊತೆ ನಾನು ಸಪ್ತಪದಿ ತುಳಿಯಲಿದ್ದೇನೆ. ನಾವಿಬ್ಬರು ಒಳ್ಳೆಯ ಲೈಫ್ ಲೀಡ್ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ವಿಶಾಲ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಫ್ಯಾನ್ಸ್ಗೆ ಶಾಕ್ ಆಗಿತ್ತು. ಇದರ ಬೆನ್ನಲ್ಲೇ ಗುಡ್ನ್ಯೂಸ್ ನೀಡಿದ್ದಾರೆ.
ಬಳಿಕ ಮಾತನಾಡಿದ ನಟಿ ಸಾಯಿ ಧನ್ಶಿಕಾ ಅವರು, ನಮ್ಮ ಮದುವೆ ವಿಷ್ಯ ಈಗಲೇ ಯಾರಿಗೂ ತಿಳಿಸಬಾರದು ಎಂದು ಕೊಂಡಿದ್ದೇವು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬೆಳಿಗ್ಗೆ ಇಂದ ನ್ಯೂಸ್ ವೈರಲ್ ಆಗುತ್ತಿದೆ. ಹೀಗಾಗಿ ಈಗಲೇ ಮದುವೆ ದಿನಾಂಕ ಕೂಡ ಘೋಷಣೆ ಮಾಡುತ್ತೇವೆ. ಕಳೆದ 15 ವರ್ಷಗಳಿಂದಲೂ ಇಬ್ಬರು ನಡುವೆ ಒಳ್ಳೆಯ ಸಂಬಂಧ ಇದೆ. ಹೀಗಾಗಿ ಆಗಸ್ಟ್ 29 ರಂದು ಇಬ್ಬರು ಹೊಸ ಜೀವನಕ್ಕೆ ಕಾಲಿಡಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ಪಿನ್ನರ್ ದಿಗ್ವೇಶ್ ರಾಥಿಗೆ ಬಿಗ್ ಶಾಕ್; ಅಭಿಷೇಕ್ ಜತೆ ವಾಗ್ವಾದ.. IPL ಮ್ಯಾಚ್ನಿಂದ ಅಮಾನತು
ಆಗಸ್ಟ್ನ 29 ರಂದು ವಿಶಾಲ್ ಅವರ ಹುಟ್ಟುಹಬ್ಬ ಇದೆ. ಅಂದೇ ವಿವಾಹ ನಿಶ್ಚಯ ಮಾಡಲಾಗಿದೆಯಂತೆ. 15 ವರ್ಷಗಳಿಂದ ಇಬ್ಬರೂ ಜೊತೆಯಲ್ಲೇ ಸಮಯ ಕಳೆದರೂ ಯಾರಿಗೂ ಅಷ್ಟಾಗಿ ಗೊತ್ತಿರಲಿಲ್ಲ. ಇನ್ನು ಯೋಗಿ ದ ಸಿನಿಮಾದಲ್ಲಿ ಸಾಯಿ ಧನ್ಶಿಕಾ ಅವರು ಮೇನ್ ರೋಲ್ನಲ್ಲಿ ಅಭಿನಯ ಮಾಡುತ್ತಿದ್ದಾರೆ. ಈ ಸಿನಿಮಾದ ಮಾಧ್ಯಮಗೋಷ್ಠಿಯಲ್ಲಿ ಮದುವೆ ಅನೌನ್ಸ್ ಮಾಡಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ