/newsfirstlive-kannada/media/post_attachments/wp-content/uploads/2025/01/ACTOR-VISHA.jpg)
ಕಳೆದ ಎರಡು ದಿನಗಳಿಂದ ಹೆಚ್ಚು ಚರ್ಚೆಗೆ ಬಂದ ವಿಷಯ ಅಂದ್ರೆ ಅದು ತಮಿಳು ಚಿತ್ರನಟ ವಿಶಾಲ್ ಅವರ ಆರೋಗ್ಯದ್ದು. ಹೇಗಿದ್ದ ವಿಶಾಲ್ ಹೇಗಾಗಿದ್ದಾರೆ? ಏನಾಯ್ತು ವಿಶಾಲ್‌ಗೆ? ಎಂಬ ಮಾತುಗಳೇ ಹೆಚ್ಚು ಕೇಳಿ ಬರುತ್ತಿವೆ. ನಿಂತರೆ ಆರಡಿ ಎತ್ತರದ ನಿಲುವು. ಕಟ್ಟುಮಸ್ತಾದ ದೇಹ, ಒಬ್ಬ ಖಡಕ್ ಹೀರೋಗೆ ಇರಬೇಕಾದ ಎಲ್ಲಾ ಅಂಶಗಳು ಕಡೆದಿಟ್ಟಂತಹ ದೇಹದಲ್ಲಿಯೇ ಕಾಣುತ್ತಿದ್ದವು. ಅಂತಹ ವಿಶಾಲ್ ನಡುಗುತ್ತಿರುವ ಕೈಯಲ್ಲಿ, ಸೋತ ದೇಹದಲ್ಲಿ, ಕಳೆಗುಂದಿದ ಮುಖದಲ್ಲಿ, ಯಾವುದೋ ಹತಾಶ ಭಾವದಲ್ಲಿ ಕುಳಿತಿರುವುದನ್ನು ಕಂಡ ಅಭಿಮಾನಿಗಳು ಅಕ್ಷರಶಃ ಈಗ ಕಣ್ಣೀರಾಗಿದ್ದಾರೆ.
ಹೌದು, ಎರಡು ದಿನಗಳ ಹಿಂದೆ ಮಧಾ ಗಜಾ ರಾಜಾ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ವಿಶಾಲ್ರನ್ನು ಕಂಡ ಅಭಿಮಾನಿಗಳು ಈ ಹಿಂದೆ ಎಂದೂ ಕೂಡ ವಿಶಾಲ್ರನ್ನು ಆ ಪರಿಸ್ಥಿತಿಯಲ್ಲಿ ಕಂಡಿರಲಿಲ್ಲ. ಹೀಗೆ ಅವರನ್ನು ಒಂದ ದಿನ ನೋಡುತ್ತೇವೆ ಕೂಡ ಎಂದುಕೊಂಡಿರಲಿಲ್ಲ. ಅಂದು ತಮಿಳು ನಟನ ಒಂದೊಂದು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ವಿಡಿಯೋ ನೋಡಿದ ಅಭಿಮಾನಿಗಳು ಅಕ್ಷರಶಃ ಕಣ್ಣೀರು ಹಾಕಿ. ಏನಾಗಿದೆ ವಿಶಾಲ್‌ಗೆ? ಯಾಕೆ ಹೀಗಾಗಿದ್ದಾರೆ? ಎಂದು ಪ್ರಶ್ನಿಸಿದ್ದರು. ದೇವರು ಅವರನ್ನು ಶೀಘ್ರವೇ ಗುಣಮುಖಗೊಳಿಸಲಿ ಎಂದು ಪ್ರಾರ್ಥಿಸಿಕೊಂಡಿದ್ದರು. ಸದ್ಯ ವಿಶಾಲ್ ಸ್ಥಿತಿಯನ್ನು ಕಂಡ ತಮಿಳು ಚಿತ್ರರಂಗ ಅವರ ಸಹಾಯಕ್ಕೆ ನಿಂತಿದೆ.
View this post on Instagram
ಇದನ್ನೂ ಓದಿ:ನಟ ವಿಶಾಲ್ ಆರೋಗ್ಯದಲ್ಲಿ ಮತ್ತೆ ಏರುಪೇರು.. ಆಸ್ಪತ್ರೆಗೆ ದಾಖಲು; ವೈದ್ಯರು ಹೇಳಿದ್ದೇನು?
ನಿನ್ನೆ ಮುಂಜಾನೆಯಿಂದ ಪ್ರಸಾರಗೊಂಡ ವಿಶಾಲ್ ಬಗೆಗಿನ ಸುದ್ದಿಗಳು ವಿಶಾಲ್ ಅವರ ಸಿನಿಮಾ ಇಂಡಸ್ಟ್ರೀ ಗೆಳೆಯರ ಗಮನವನ್ನು ಸೆಳೆದಿವೆ. ನಿನ್ನೆಯಿಂದ ನಿರಂತರವಾಗಿ ವಿಶಾಲ್‌ಗೆ ಕರೆಗಳು ಹೋಗಿದ್ದು ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಅದು ಮಾತ್ರವಲ್ಲ ಅವರು ಮೊದಲಿನಂತಾಗಲು ಏನೆಲ್ಲಾ ನೆರುವು ಬೇಕೋ ಆ ಎಲ್ಲಾ ನೆರವನ್ನು ನೀಡಲು ಸಿನಿಮಾ ಜಗತ್ತಿನ ಗೆಳೆಯರು ಸಜ್ಜಾಗಿದ್ದಾರೆ. ಕೆಲವು ಸ್ನೇಹಿತರು ವೈಯಕ್ತಿಕವಾಗಿ ನಟನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ನಿಜಕ್ಕೂ ವಿಶಾಲ್‌ಗೆ ಏನಾಗಿದೆ ಎಂದು ವಿಚಾರಿಸಿದ್ದಾರೆ.
ಇದನ್ನೂ ಓದಿ:ನಡುಗುವ ಕೈಗಳು, ತೊದಲು ಮಾತು.. ಮುಚ್ಚಿಟ್ಟಿದ್ದ ಗುಟ್ಟು ಕೊನೆಗೂ ರಟ್ಟಾಯ್ತು; ನಟ ವಿಶಾಲ್‌ಗೆ ಆಗಿದ್ದೇನು?
ಆದರೆ ವಿಶಾಲ್ರನ್ನು ವೈಯಕ್ತಿಕವಾಗಿ ಹೋಗಿ ಭೇಟಿಯಾಗಿ ಮಾತನಾಡಿಸಿ ಬಂದ ನಟ ಯಾರು ಅನ್ನೋದರ ಬಗ್ಗೆ ಇನ್ನೂ ಕೂಡ ಸ್ಪಷ್ಟ ಮಾಹಿತಿ ದೊರಕಿಲ್ಲ. ಆದ್ರೆ ವಿಶಾಲ್ ಚೇತರಿಸಿಕೊಂಡು ಮೊದಲಿನಂತಾಗಲು ಬೇಕಾದ ಸಹಾಯ ಮಾಡಲು ಈಗ ಇಡೀ ತಮಿಳು ಚಿತ್ರರಂಗವೇ ಸಜ್ಜಾಗಿದೆ. ಈ ಒಗ್ಗಟ್ಟು ಈ ಪ್ರೀತಿ ವಿಶಾಲ್ರನ್ನು ಮೊದಲಿನಂತೆ ಮಾಡಬೇಕಿದೆ. ಮತ್ತೆ ಬೆಳ್ಳಿ ತೆರೆಯ ಮೇಲೆ ಆ ಚೇತನ ಮಿಂಚಬೇಕಿದೆ. ಬಂದ ಎಲ್ಲಾ ಕಷ್ಟಗಳು ನೀರಿನಂತೆ ಕರಗಿ. ಅವರ ಬದುಕು ಮೊದಲಿನಂತಾಗಬೇಕಿದೆ ಎಂದೇ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ