ಅಪಘಾತದ ನಂತರ ಎದ್ದು ನಡೆಯಲು ಪ್ರಾರಂಭಿಸಿದ.. ಏರ್ ಇಂಡಿಯಾ ದುರಂತದ ವಿಡಿಯೋ..

author-image
Ganesh
Updated On
ಅಪಘಾತದ ನಂತರ ಎದ್ದು ನಡೆಯಲು ಪ್ರಾರಂಭಿಸಿದ.. ಏರ್ ಇಂಡಿಯಾ ದುರಂತದ ವಿಡಿಯೋ..
Advertisment
  • ಗುಜರಾತ್‌ನ ಅಹ್ಮದಾಬಾದ್​ನಲ್ಲಿ ವಿಮಾನ ದುರಂತ
  • 242 ಪ್ರಯಾಣಿಕರಲ್ಲಿ ಓರ್ವ ಮಾತ್ರ ಬದುಕಿರೋದು
  • ಆಸ್ಪತ್ರೆ ಸೇರಿದ ಬಳಿಕ ಆ ವ್ಯಕ್ತಿ ಹೇಳಿದ್ದೇನು ಗೊತ್ತಾ?

ಗುಜರಾತ್‌ನ ಅಹ್ಮದಾಬಾದ್​ನಲ್ಲಿ ನಿನ್ನೆ ಏರ್ ಇಂಡಿಯಾ ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ 241 ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಆದರೆ ಪವಾಡ ಸದೃಶ್ಯ ರೀತಿಯಲ್ಲಿ ವಿಶ್ವಾಸ್ ಕುಮಾರ್ ರಮೇಶ್ ಅನ್ನೋರು ಬದುಕಿ ಬಂದಿದ್ದಾರೆ.

ಇದನ್ನೂ ಓದಿ: ‘ನನಗೆ ಎಚ್ಚರವಾದಾಗ, ನನ್ನ ಸುತ್ತಲು..’ ದುರಂತದ ಕ್ಷಣ ಬಿಚ್ಚಿಟ್ರು ಬದುಕಿ ಬಂದ ಗಟ್ಟಿ ಜೀವ..

ಬದುಕುಳಿದ 40 ವರ್ಷದ ವಿಶ್ವಾಸ್ ಕುಮಾರ್ ರಮೇಶ್, ಬ್ರಿಟನ್ ಪ್ರಜೆ. ಕಳೆದ 20 ವರ್ಷದಿಂದ ಲಂಡನ್​ನಲ್ಲಿ ವಾಸವಿದ್ದಾರೆ. ಇವರು ತಮ್ಮ ಕುಟುಂಬವನ್ನು ಭೇಟಿಯಾಗಲು ಭಾರತಕ್ಕೆ ಬಂದಿದ್ದರು. ಸಹೋದರ ಅಜಯ್ ಕುಮಾರ್ ಜೊತೆ ಲಂಡನ್​​ಗೆ ಹೊರಟಾಗ ದುರಂತ ಸಂಭವಿಸಿದೆ. ವಿಮಾನವು ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್​ಗೆ ಅಪ್ಪಳಿಸಿದ ಬಳಿಕ, ಅವರು ಯಾರ ಸಹಾಯವೂ ಇಲ್ಲದೇ ಸ್ವಂತ ಬಲದಿಂದ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಭೀಕರ ವಿಮಾನ ಅಪಘಾತದಲ್ಲಿ ಅವರು ಬದುಕುಳಿದಿರುವುದು ಒಂದು ಪವಾಡ.

ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದರು..

ವಿಶ್ವಾಸ್ ಕುಮಾರ್ ರಮೇಶ್ ಎದ್ದು ಹೊರಡುವಾಗ ಸ್ಥಳೀಯರು ಅವರನ್ನು ಹಿಡಿದು ಆಂಬ್ಯುಲೆನ್ಸ್‌ನಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ ದೊಡ್ಡ ಶಬ್ದವಾಯಿತು. ನಂತರ ವಿಮಾನ ಅಪಘಾತಕ್ಕೀಡಾಯಿತು. ಇದೆಲ್ಲ ಕೆಲವೇ ಕ್ಷಣಗಳಲ್ಲಿ ನಡೆದಿದೆ. ಕೊನೆಗೆ ನನಗೆ ಎಚ್ಚರವಾದಾಗ ನನ್ನ ಸುತ್ತಲೂ ಮೃತದೇಹಗಳು ಬಿದ್ದಿದ್ದವು. ನಾನು ಭಯಗೊಂಡು ಓಡಿದೆ. ವಿಮಾನದ ತುಣುಕುಗಳು ನನ್ನ ಸುತ್ತಲೂ ಹರಡಿಕೊಂಡಿದ್ದವು. ಯಾರೋ ನನ್ನನ್ನು ರಕ್ಷಿಸಿ ಆ್ಯಂಬುಲೆನ್ಸ್​ನಲ್ಲಿ ಹಾಕಿದರು. ನಂತರ ಆಸ್ಪತ್ರೆಗೆ ಕರೆದೊಯ್ದರು ಎಂದಿದ್ದಾರೆ.

ಇದನ್ನೂ ಓದಿ: ಮಂಗಳೂರು ಮೂಲದ ಕೋ-ಪೈಲಟ್ ಕೂಡ ನಿಧನ.. 1,100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment