newsfirstkannada.com

ಶ್ರೀರಾಮನಿಗೆ ಜೈ ಎಂದ ಲಂಕಾ.. ಇವರಿಗೆ ರಾಮನೂ ಆದರ್ಶ, ರಾವಣನೂ ಆದರ್ಶ! ಹೇಗೆ..?

Share :

Published January 17, 2024 at 10:08pm

  ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದೇನು?

  ಆದರ್ಶಗಳಿಂದ ಪುಣ್ಯಪುರುಷ.. ಪುಣ್ಯದಿಂದಲೇ ಆದಿಪುರುಷ!

  ಎತ್ತರ ಎಷ್ಟೇ ಬೆಳೆದರೂ ಮಣ್ಣಲೇ ಬೇರಾಗಿತ್ತು ರಾಮನ ರಾಜ್ಯ

ಪ್ರತಿ ವಿದ್ವಾಂಸರ ಮಾತಲ್ಲೂ, ಪ್ರತಿ ಧರ್ಮ ಶಾಸ್ತ್ರಜ್ಞರ ಬಾಯಲ್ಲೂ, ಪ್ರತಿ ಗ್ರಂಥದಲ್ಲೂ, ಪುರಾಣಗಳಲ್ಲೂ ರಾಮ ಅಂದ್ರೆ ಪ್ರತ್ಯೇಕವಾದ ಪ್ರಾಮುಖ್ಯತೆ ಇದೆ. ರಾಮ ಮರ್ಯಾದಾ ಪುರುಷೋತ್ತಮನಾಗುವ ಮುನ್ನ, ಒಬ್ಬ ಮಹಾರಾಜ. ಆತ ರಾಜನಾಗುವ ಮುನ್ನ ಒಬ್ಬ ಮಹಾನ್​​ ವಿದ್ಯಾರ್ಥಿ, ಹೌದು.. ರಾಮನಲ್ಲಿ ಇಷ್ಟೊಂದು ಮರ್ಯಾದಾ ಗುಣಗಳನ್ನ ಭೋಧಿಸಿದ್ದು ಗುಣವಂತ ವಶಿಷ್ಟ ಮಹರ್ಷಿ. ಅವರು ರಾಮನಿಗೆ ಭೋಧಿಸಿದ್ದು ಸಾಮಾನ್ಯ ವಿಷಯಗಳನ್ನಲ್ಲ. ಜ್ಞಾನ ಭೋದನೆ, ಸಮಾನತೆಯ ಭೋಧನೆ, ಹೀಗೆ ಅದೆಷ್ಟೋ ಒಬ್ಬ ಮನುಷ್ಯ ಅಭಿವೃದ್ಧಿಯ ದಿಕ್ಕಿಗೆ ನಡೆಯೋದಕ್ಕೆ ಬೇಕಾದ ಎಲ್ಲಾ ಗುಣಗಳನ್ನ ಮಹರ್ಷಿಗಳು ಹೇಳಿಕೊಟ್ಟಿದ್ರು. ಆ ಗುಣಗಳನ್ನ ಸಮಯ ಬಂದಾಗಲೆಲ್ಲಾ ಬಳಸುವಂತೆ ಕಲಿಸಿಕೊಟ್ಟಿದ್ರು. ವೇದ ಶಾಸ್ತ್ರಗಳು. ಅಸ್ತ್ರಜ್ಞಾನ.. ಹೀಗೆ, ಅಸಾಧ್ಯವಾದವುಗಳನ್ನೆಲ್ಲಾ ರಾಮ ವಶಿಷ್ಟರ ಬಳಿ ವಿದ್ವಾನನಂತೆ ಕಲಿತು ಬೆಳೆದಿದ್ದ.

ರಾಮನನ್ನ ಮನುಷ್ಯನಂತೆ ನೋಡಿದಾಗ, ಆತನಲ್ಲಿ ಕಂಡಿದ್ದ ಅದೇ ವಿನಯ, ನಮ್ರತೆ ರಾಜನಾದಗಲೂ ಹಾಗೆ ಉಳಿದಿತ್ತಂತೆ. ಹಾಗೆಯೇ, ದೇವರಾದಗಲೂ ಆ ಸ್ಥಾನಕ್ಕೆ ಗರ್ವವಾಗಲಿ, ಅಹಂ ಆಗಲಿ ಬಂದಿರಲ್ಲಿಲ್ಲ. ರಾಮನ ಸ್ವಭಾವ ಹೇಗೆ ಹುಟ್ಟಿತ್ತೋ ಹಾಗೆ ಕೊನೆಯವರೆಗೂ ಉಳಿದಿದ್ದೇ ಒಂದು ವಿಸ್ಮಯದ ಘಟ್ಟಕ್ಕೆ ಕಾರಣವಾಗುತ್ತೆ. ಇಲ್ಲಿ ಮತ್ತೊಮ್ಮೆ ರಾಮನನ್ನ ಪುರುಷೋತ್ತಮ ಅಂತಾ ಯಾಕೆ ಅಂತಾರೆ ಅನ್ನೋದನ್ನ ನೆನಪಿಸಿಕೊಂಡ್ರೆ.. ಬಾಲ ರಾಮನಾಗಿದ್ದಾಗ ಜನರಿಗೆ ಇಷ್ಟವಾದ ಯುವರಾಜನಾಗಿದ್ದ ಅನ್ನೋದೂ ಒಂದು ಕಾರಣ. ಇಪ್ಪತ್ತು ವಯಸ್ಸು ದಾಟುತಿದ್ದಂತೆ ನೆಚ್ಚಿನ ಮಹಾರಾಜನಾಗಿದ್ದ, ಮದುವೆಯಾದ ನಂತರ ತಮ್ಮಲ್ಲಿ ಒಬ್ಬನಂತೆ ಬಾಳಿದ್ದ.. ಕಾಡಿಗೆ ಹೋಗುವಾಗ, ಕ್ಲೇಶವೇ ಅರಿಯದ ಜನ.. ಕಣ್ಣೀರೇ ಕಾಣದ ಜನರಿಗೆ, ಎರಡನ್ನೂ ಏಕಕಾಲಕ್ಕೆ ಪರಿಚಯಿಸಿದ್ದ.. ಆಗ ಇಡೀ ರಾಮರಾಜ್ಯವೇ ಶೋಕವಾಗಿತ್ತು. ತಾನು ರಾಜನಾಗಿ ವೈಭೋಗಗಳನ್ನ ಅನುಭವಿಸಬೇಕಿದ್ದ ರಾಮ, ಎಲ್ಲಾ ಬಿಟ್ಟು ತಂದೆ ಮಾತಿಗೆ ಕಟಿಬದ್ಧವಾಗಿ ಗೊಂಡಾರಣ್ಯಕ್ಕೆ ಹೋಗ್ತಾನೆ ಅಂದ್ರೆ.. ಆತನ ಆದರ್ಶಗಳನ್ನ ಅನುಸರಿಸೋಕೆ ಯೋಗ್ಯವಲ್ಲದೇ ಮತ್ತೇನು? ರಾಮ ತಾನು ಮಾಡುವ ಪ್ರತೀ ಕರ್ತವ್ಯಗಳನ್ನೂ ಪರಿಪೂರ್ಣವಾಗಿ ಮಾಡಿಮುಗಿಸುತ್ತಿದ್ದ. ಪ್ರತಿ ಘಟ್ಟದಲ್ಲೂ ಆದರ್ಶತೆ ಬಿಟ್ಟರೆ ಬೇರೇನೂ ಕಂಡಿರಲಿಲ್ಲ. ಹಾಗಾಗಿ, ಆತ ಯಾವತ್ತಿಗೂ ಆದರ್ಶ ಪುರುಷ. ಆದರ್ಶತೆಗೆ ಆದಿಪುರುಷ.

ರಾಮನ ಕಲ್ಯಾಣ ಗುಣಗಳು!

ವಿದ್ವಾನ್ ಮತ್ತು ಸಮರ್ಥಃ
ಪ್ರಿಯದರ್ಶನಃ ಮತ್ತು ಆತ್ಮವಾಂಕಃ
ಜಿತಕ್ರೋದಾಃ ಮತ್ತು ದ್ಯುತಿಮಾನ್
ಅನಸೂಯಕಃ ಮತ್ತು ಬಿಭ್ಯತಿ ದೇವಾಃ

ವಿದ್ವಾನ್.. ರಾಮ ಬಾಲಕನಾಗಿದ್ದಾಗಿನಿಂದಲೇ ವಶಿಷ್ಟರಿಂದ ಸಕಲ ಜ್ಞಾನಧಾರೆಯನ್ನ ಗ್ರಹಿಕೆ ಮಾಡಿಕೊಂಡಿದ್ದ ಅದಕ್ಕಾಗಿ ವಿದ್ವಾನ್​​​ ಅಂದಿದ್ದಾರೆ. ಇನ್ನು ಸಮರ್ಥಃ ಅಂದ್ರೆ, ಸಿಕ್ಕ ಯಾವುದೇ ಕೆಲಸವಾಗಲೀ ಅದರಲ್ಲಿ ಸಾಧನೆ ಮಾಡಬಲ್ಲ ಸಮರ್ಥ ಜೀವಿ ಅಂತಾ. ಪ್ರಿಯದರ್ಶನಃ ಇದು ರಾಮನ ರೂಪದ ಬಗ್ಗೆ ತಿಳಿಸೋದಾಗಿದೆ. ಪಾದದಿಂದ ನೆತ್ತಿವರೆಗೂ ರಾಮ ಸ್ಫುರದ್ರೂಪಿ, ಯಾವ ಸಮಯದಲ್ಲಾದ್ರೂ ಅಂದ್ರೆ ರಾಮ ಏನೇ ಮಾಡುತ್ತಿದ್ರೂ ಸುಂದರಮಯವಾಗಿ ಕಾಣುವಂತವನು ಅಂತಾ ಅರ್ಥ. ಆತ್ಮವಾಂಕಹ ಅನ್ನೋದು ಧ್ಯಾನದ ರೂಪ. ಆಧ್ಯಾತ್ಮಿಕ ಶಿಸ್ತು ಮತ್ತು ಆಧ್ಯಾತ್ಮಿಕ ಪರಿಪೂರ್ಣತೆ ಕಂಡವನು. ಜಿತಕ್ರೋದಾಹ ಅಂದ್ರೆ.. ತನ್ನ ಮನಸನ್ನ ನಿಗ್ರಹವಾಗಿಡಬಲ್ಲವನು ಅಂತ ಅರ್ಥ. ಇನ್ನು, ದ್ಯುತಿಮಾನ್ ಅನ್ನೋದು ನಡತೆ ಮತ್ತು ನೋಟದ ಬಗ್ಗೆ ಹೇಳಿದ ಮಾತಿದು.. ಅನಸೂಯಕಃ ಅಂದ್ರೆ ಅಸೂಯೆ, ಸಂಕಟಗಳು ರಾಮನನ್ನ ಮುಟ್ಟಿರಲಿಲ್ಲ. ಹಾಗೆಯೇ, ರಾಮನಿಗೆ ಯಾರ ಮೇಲೂ ಅಸೂಯೆ ಇರಲಿಲ್ಲ. ಇನ್ನು, ಕೊನೆದಾಗಿ ಬಿಭ್ಯತಿ ದೇವಾಃ.. ಇದು ರಾಮನ ಕೋಪದ ಬಗ್ಗೆ ತಿಳಿಸೋದಾಗಿದೆ. ರಾಮ ಶಾಂತ ಸ್ವಭಾವಿ.. ತನ್ನ ಪ್ರೀತಿ ಪಾತ್ರರಿಗೆ ಯಾರಾದ್ರೂ ತೊಂದರೆ ಕೊಟ್ಟಾಗ ಮಾತ್ರ ಕಿಚ್ಚಿನಂತ ಕೋಪ ರಾಮನಿಗೆ ಬರುತ್ತಂತೆ.

ಶತ್ರುವನ್ನೂ ಕ್ಷಮಿಸಬಲ್ಲ ಕರುಣಾಮಯಿ ರಾಮಚಂದ್ರ..!

ಮಾನವ ಲೋಕದಲ್ಲಿ ಅತ್ಯಂತ ಹತ್ತಿರದಲ್ಲಿ ಇದ್ದುಕೊಂಡು, ಮಾನವನ ಬದುಕಿನಲ್ಲಿ ಏನೆಲ್ಲಾ ತುಂಬಾ ಕಷ್ಟಕರ ಪರಿಸ್ಥಿತಿಗಳಲ್ಲಿ ಧೃತಿಗೆಡದೆ ಲೋಕೋತ್ತರ ಕಾರ್ಯವನ್ನು ಮಾಡಿ ವಿಜಯವನ್ನು ಸಂಪಾದಿಸಿಕೊಂಡು ಬಂದಿದ್ದಾನೆ ಆ ಶ್ರೀರಾಮ ಚಂದ್ರ. ಸಕಲ ಸದ್ಗುಣಗಳ ಗಣಿಯೇ ಶ್ರೀ ರಾಮ. ‘ರಾಮ’ ಎಂಬ ಎರಡು ಅಕ್ಷರಗಳ ಅರ್ಥ ಏನೆಂದರೆ ಸಂತೋಷ ಪಡಿಸುವವನು ಎಂದರ್ಥ. ಮೂರು ಲೋಕವು ಕೂಡ ಯಾರಿಂದ ಸಖ ಸಂತೋಷದಿಂದ ಇದೆಯೋ ಅದೇ ರಾಮ. ಅದರ ಜತೆಗೆ ಇದಕ್ಕೆ ವಿರುದ್ಧವಾಗಿ ಮೂರು ಲೋಕವನ್ನು ಅಳಿಸುವವನೇ, ಅಳುವ ಹಾಗೇ ಮಾಡುವವನೇ ರಾವಣ. ಇಲ್ಲಿ ರಾಮನು ಆದರ್ಶ ಪುರುಷನೇ, ರಾವಣನು ಆದರ್ಶ ಪುರುಷನೇ ಆಗಿದ್ದಾನೆ. ಅದು ಹೇಗೆ ಎಂದರೆ, ರಾಮನಂತೆ ನಾವು ಇರಬೇಕು. ನಾವೇಲ್ಲಾ ಹೇಗೆ ಇರಬೇಕು ಎಂದು ತೋರಿಸಿದ್ದು ರಾಮನ ಆ ಗುಣಗಳು. ಅದೇ ಕಾಲಕ್ಕೆ ನಾವು ಹೇಗೆ ಇರಬಾರದು ಎಂಬುದಕ್ಕೆ ರಾವಣ ಆದರ್ಶ ಆಗುತ್ತದೆ. ರಾಮನ ಪ್ರತಿಯೊಂದು ಹೆಜ್ಜೆಯಲ್ಲೂ ನಾವು ಹೇಗೆ ಇರಬೇಕು ಎಂಬುವುದು ಗೊತ್ತಾಗುತ್ತೆ. ಇದೇ ಸಮಯಕ್ಕೆ ನಾವು ಹೇಗೆ ಇರಬಾರದು ಎಂಬುವುದನ್ನು ರಾಮಣನಿಂದ  ಕಲಿಸುತ್ತದೆ. ಶ್ರೀ ರಾಮಚಂದ್ರ ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ಲೋಕದ ಸಂತೋಷಕ್ಕಾಗಿ ಕಾಡಿಗೆ ಹೋದ. ಅದೇ ಕಾಲಕ್ಕೆ ರಾವಣ ಎಲ್ಲ ಸುಖ ಸಂತೋಷ ಏನೇ ಇದ್ದರು ಕೂಡ ಎಲ್ಲ ನನಗೆ ಬೇಕು ಎಂದು ಹೇಳಿಕೊಂಡು ಮೂರು ಲೋಕವನ್ನು ಪಡಿಸುತ್ತ ಬಂದ. ಹಾಗಾಗಿ ರಾಮ ನಮಗೆ ಹತ್ತಿರವಾಗಿ ಆದರ್ಶ ಪುರುಷ ಆಗುತ್ತಾನೆ. ರಾವಣ ದೂರವಾಗುತ್ತಾನೆ.

ವಿಶ್ವಪ್ರಸನ್ನ ತೀರ್ಥ ಶ್ರೀಗಳು, ಪೇಜಾವರ ಮಠ

ಸೀತೆಯನ್ನ ಮರಳಿ ಅಯೋಧ್ಯೆಗೆ ಕರೆದೊಯ್ಯುವ ಪ್ರಕ್ರಿಯೆ ಆಗಾಗಲೇ ಶುರುವಾಗಿತ್ತು. ಆಗಲೇ ವಿಭೀಷಣ ಬಂದು ರಾಮನ ಸೈನ್ಯ ಸೇರಿದ್ದ. ಸೀತೆಯ ಅನ್ವೇಷನೆ ಭಾಗವಾದಲ್ಲೇ ಸುಗ್ರೀವನ ಸ್ನೇಹ ರಾಮನಿಗಾಗಿತ್ತು. ವಾಲಿ ತನ್ನ ತಮ್ಮನ ಪತ್ನಿಯನ್ನ ವಶಕ್ಕೆ ಪಡೆದು ಅಧರ್ಮದ ಕೆಲಸಕ್ಕೆ ಕೈ ಹಾಕಿದ್ದ ಕಾರಣಕ್ಕೆ, ರಾಮಬಾಣ ವಾಲಿ ಎದೆಯೊಳಗೆ ಇಳಿದಿತ್ತು. ಈ ವಧೆ ಕೊಂಚ ಪ್ರಶ್ನಾತೀತವಾದ್ರೂ ಅದರಲ್ಲೂ ರಾಮನ ಪರಮಾರ್ಥ ಇಲ್ಲದೇ ಹೋಗಿಲ್ಲ. ಅಂತ್ಯದಲ್ಲಿ ರಾಮ ರಾವಣರ ಭೀಕರ ಕದನ ಶುರುವಾಗಿತ್ತು. ಮೊದಲೇ ಒಂದು ಭಾರೀ ನಿಶಸ್ತ್ರನಾಗಿದ್ದ ರಾವಣ ರಾಮನ ಕೈಯಿಂದ ಬದುಕಿ ಉಳಿದಿದ್ದ.. ಹಾಗೆಯೇ, ಈಗಲೂ ಇನ್ನೊಮ್ಮೆ ರಾಮ ರಾವಣನಿಗೆ ಬದುಕುಳಿಯೋಕೆ ಮತ್ತೊಂದು ಅವಕಾಶವನ್ನ ಕೊಡ್ತಾನಂತೆ. ರಾಮನ ಮತ್ತೊಂದು ಸದ್ಗುಣಕ್ಕೆ ಕನ್ನಡಿ ಇದು.

ಜಯಹೋ ರಾಮ ಎಂದ ಲಂಕಾರಾಜ್ಯ..ಮುಂದಾಗಿದ್ದೇನು?

ರಾಮ ಅವತಾರದ ಮಹೋನ್ನುದ್ದೇಶವೇ ರಾವಣ ಸಂಹಾರ. ಅಂತದ್ರಲ್ಲಿ ವಿಧಿ ಬದಲಿಸಲಾಗುತ್ತಾ.. ರಾವಣ ರಾಜ್ಯದಲ್ಲೇ ರಾಮ ರಾವಣರ ಭೀಕರ ಕಾಳಗಕ್ಕೆ ಲಂಕೆಯೆಲ್ಲಾ ಠೇಂಕರಿಸಿಬಿಡುತ್ತೆ. ರಾಮನ ಕೈಯಲ್ಲಿ ರಾವಣ ಅತೀ ಘೋರವಾಗಿ ಸಾವನ್ನಪ್ಪುತ್ತಾನೆ. ರಾವಣಾಸುರ ನೆಲಕಚ್ಚಿ ಬಿದ್ದಾಗಿತ್ತು. ಅಲ್ಲಿವರೆಗೂ ಅಸುರ ಆಳ್ವಿಕೆಯಿಂದ ಕಿಂಕರಿಸುತ್ತಿದ್ದ ಲಂಕೆಗೆ ರಾಜನಿಲ್ಲದಾದ. ರಾವಣ ವಧೆ ನಂತರ ಲಂಕೆಯನ್ನ ವಶಪಡಿಸಿಕೊಂಡು ಭವ್ಯ ಭಾರತದಲ್ಲಿ ವಿಲೀನಗೊಳಿಸುವ ಅವಕಾಶ ರಾಮನಿಗೆ ಸಿಕ್ಕಿತ್ತು. ಆದ್ರೆ.. ರಾವಣಾಸುರನ ಕಿರಿಯ ಸಹೋದರ ವಿಭೀಷಣನನ್ನೇ ಲಂಕೆಗೆ ರಾಜನನ್ನಾಗಿ ಮಾಡಿದ. ಲಕ್ಷ್ಮಣ ಲಂಕೆಯನ್ನ ನೋಡಿ ದುಃಖಿಸಿದ.. ರಾಮನೇ ಲಂಕೆಗೆ ರಾಜನಾಗಬೇಕು ಅನ್ನೋ ಆಸೆ ಲಕ್ಷ್ಮಣನದ್ದು. ಆದ್ರೆ ರಾಮನ ಆದರ್ಶದ ಸುಗುಣಕ್ಕೆ ಈ ಪುಟವೂ ಸಹ ಸೇರಬೇಕಿತ್ತು.

ರಾಜಧರ್ಮ ಪಾಲನೆ.. ಕಾಮದೇನು ಪಾಲನೆಯಲ್ಲಿ ರಾಮ..!

ರಾಮ ರಾಜನಾ.. ದೇವರಾ ಅನ್ನೋ ಪ್ರಶ್ನೆ ಇದೆ. ಅವನು ಮನುಷ್ಯನಾಗಿ ಹುಟ್ಟಿ, ದೇವರಂತೆ ಬೆಳೆದ ಮಹೋನ್ನತ ಚರಿತ್ರೆಯುಳ್ಳವನು. ಶ್ರೀರಾಮನ ಬದುಕಿನುದ್ದಕ್ಕೂ ಆಪತ್ತುಗಳ ಹಳ್ಳವೇ, ಕಷ್ಟಗಳ ಮುಳ್ಳಿನ ಸರಮಾಲೆಯೇ ಇತ್ತು. ಕೊನೆ ಕೊನೆಗೆ ಸ್ವಂತ ಮಕ್ಕಳೇ ದ್ವೇಷಿಸುವಂತಾದ, ಅವರೊಟ್ಟಿಗೆ ಯುದ್ಧ ಮಾಡುವಂತಹ ಸ್ಥಿತಿಗೆ ಬಂದಿದ್ದ, ಸೀತೆಯನ್ನ ಅಗ್ನಿಗೆ ತಳ್ಳಿದ, ಇಷ್ಟೆಲ್ಲಾ ಆದ್ರೂ ರಾಮನನ್ನ ಜನರು ದೈವ ಅಂತಲೇ ಹೇಳ್ತಾರೆ. ಈ ದಿನ ರಾಮನನ್ನ ಇಷ್ಟೊಂದು ಪೂಜಿಸುತ್ತಿದ್ದಾರೆ ಅಂದ್ರೆ ಅದಕ್ಕೆ ಆತ ಮಾಡಿದ ಪುಣ್ಯ, ಎದುರಿಸಿದ ಕಾರ್ಕೋಟಕ ಸನ್ನಿವೇಶಗಳೇ ಕಾರಣ. ಇದರಲ್ಲಿ ಅವನ ಶ್ರೇಷ್ಠತೆ ಅಡಗಿದೆ ಅಂತಲೇ ಹೇಳ್ಬೋದು. ಈಗಲೂ ರಾಮರಾಜ್ಯ ಪಾಲನೆ ಮಾಡಲು ದೇವರೇ ಬರಬೇಕಿಲ್ಲ.. ರಾಮನ ಆದರ್ಶಗಳೇ ಮಾಡಬಹುದಂತೆ. ಹೆತ್ತವರಿಗೆ ಆದರ್ಶ ಪುತ್ರ, ರಾಜರಿಗೆ ಬಹು ಪತ್ನಿತ್ವ ಪದ್ಧತಿ ಇದ್ರೂ,ತಂದೆ ದಶರಥ ಮೂರು ಮದುವೆ ಆಗಿದ್ದರೂ, ತಾನೂ ಮಾತ್ರ ಏಕಪತ್ನಿ ವ್ರತವನ್ನೇ ಪಾಲನೆ ಮಾಡಿ ಆದರ್ಶ ಪತಿಯಾಗಿದ್ದ ರಾಮ.. ಒಳ್ಳೆಯ ಸಹೋದರ. ಜನರಿಗೆ ಆದರ್ಶ ರಾಜ, ಆಡಳಿತಗಾರ. ಆದರ್ಶ ಸ್ನೇಹಿತ. ರಾಮನಿಗೆ ಇದ್ದದ್ದೂ ಹದಿನಾರಲ್ಲ ಸಾವಿರಾರು ಗುಣಗಳೇನೋ ಅನಿಸಿಬಿಡುತ್ತೆ.

ಯುದ್ಧಗಳನ್ನ ಮಾಡುವಾಗ ಯಾವುದೇ ರಾಜ ಪ್ರಾಣಭಯದಿಂದ ತತ್ತರಿಸಿ, ಮಾನಸಿಕ ಭೀತಿಗೆ ಒಳಗಾಗುತ್ತಾನೆ ಅನ್ನೋ ಮಾತಿದೆ. ಆದ್ರೆ ರಾಮ, ತಾಟಕಿ, ಸುಬಾಹು, ಹದಿನೆಂಟು ಸಾವಿರ ರಾಕ್ಷಸರ ನಡುವೆ ಖರದೂಷಣ ಸೇರಿ, ರಾವಣರಂತ ರಕ್ಕಸರ ಜೊತೆ ಯುದ್ಧ ಮಾಡಿದರೂ ಕೊಂಚವೂ ವಿಚಲಿತನಾಗಿಲ್ಲ. ರಾವಣ ವಧೆ ನಂತರ 11 ವರ್ಷಗಳ ಕಾಲ ಭೂಮಿಯನ್ನ ಆಳಿದ ರಾಮ.. ವೈಕುಂಠಕ್ಕೆ ಹೋದರಂತೆ. ಶ್ರೀರಾಮನ ಈ ಆಳ್ವಿಕೆಯನ್ನ ಸುವರ್ಣಯುಗ ಅಂತ ಹೇಳಲಾಗಿದೆ. ಆದರೇ ರಾಮನ ಕಲ್ಯಾಣ ಗುಣಗಣಿ ಮಾತ್ರ ರಾಮನನ್ನ ಭೂಮಿ ಮೇಲೆ ಮರ್ಯಾದಾ ಪುರುಷೋತ್ತಮ ಅಂತ ಶಾಸನ ಮಾಡಿ ನಿಲ್ಲಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀರಾಮನಿಗೆ ಜೈ ಎಂದ ಲಂಕಾ.. ಇವರಿಗೆ ರಾಮನೂ ಆದರ್ಶ, ರಾವಣನೂ ಆದರ್ಶ! ಹೇಗೆ..?

https://newsfirstlive.com/wp-content/uploads/2024/01/shri-ram-11.jpg

Load More