ಅಯೋಧ್ಯೆಯಲ್ಲಿ ನಡೆಯುತ್ತಿದ್ದ 'ಮಂಡಲ ಪೂಜೆ' ಮುಕ್ತಾಯ; ಈ ಬಗ್ಗೆ ಪೇಜಾವರ ಶ್ರೀ ಏನಂದ್ರು..?

author-image
Veena Gangani
Updated On
ಶ್ರೀರಾಮನಿಗೆ ಜೈ ಎಂದ ಲಂಕಾ.. ಇವರಿಗೆ ರಾಮನೂ ಆದರ್ಶ, ರಾವಣನೂ ಆದರ್ಶ! ಹೇಗೆ..?
Advertisment
  • ಜನವರಿ 22ರಂದು ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ
  • ನಿತ್ಯ ಬರೋಬ್ಬರಿ 3 ಲಕ್ಷ ಭಕ್ತರು ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ
  • ರಾಮ ದೇವರ ಸೇವೆಯಲ್ಲಿ ಭಾಗಿಯಾಗಲು ತುಂಬಾ ಖುಷಿಯಿದೆ- ಪೇಜಾವರ ಶ್ರೀ

ನವದೆಹಲಿ: ಐತಿಹಾಸಿಕ ರಾಮ ಜನ್ಮಭೂಮಿ ಅಯೋಧ್ಯೆ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಹೋಮ ಹವನಗಳ ಮೂಲಕ ಪೂಜೆ ನೆರವೇರಲಿದೆ. ಜನವರಿ 22ರಂದು ಅಯೋಧ್ಯೆಯ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯನ್ನು ಮಾಡಲಾಗಿತ್ತು. ಉತ್ತರ ಪ್ರದೇಶದ ಕಾಶೀಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಮತ್ತು ಲಕ್ಷ್ಮಿಕಾಂತ್ ದೀಕ್ಷಿತ್ ಅವರಿಂದ ರಾಮಲಲ್ಲಾಗೆ ಪ್ರಾಣ ಪ್ರತಿಷ್ಠೆಗೆ ವಿಶೇಷ ಪೂಜೆ ಮಾಡಲಾಗಿತ್ತು.

publive-image

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ 48 ದಿನಗಳ ಕಾಲ ಮಂಡಲ ಪೂಜೆ ನೆರವೇರಿಸಲಾಗಿದೆ. ಈ ಪೂಜೆ ಜನವರಿ 30 ರಿಂದ ಪ್ರಾರಂಭವಾಗಿ ಮಾರ್ಚ್ 11ವರೆಗೆ ಮುಕ್ತಾಯಗೊಂಡಿದೆ. ಇನ್ನು ಈ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾನ ಬಳಿಕ ಮಂಡಲ ಪೂಜೆ ನಡೆಯಿತು. ನಿನ್ನೆಗೆ ಅದು ಮುಕ್ತ ಆಗಿದೆ. ಅಯೋಧ್ಯೆಯ ಯಜ್ಞ ಶಾಲೆಯಲ್ಲಿ ಅನೇಕ ಯಜ್ಞಗಳು ನಡೆದಿವೆ. ಭಾರತ ಒಳಗೊಂಡಂತೆ ವಿದೇಶಗಳಲ್ಲೂ ರಾಮತಾರಕ ಮಂತ್ರಿ ಜಪಿಸಿದ್ದಾರೆ. ತತ್ವ ಹೋಮ, ತತ್ವ ಕಳಸ ಪ್ರತಿಷ್ಠಾಪನೆ ಶ್ರೀರಾಮ ದೇವರ ಪ್ರಾಂಗಣದಲ್ಲಿ ನಡೆದಿವೆ. ದೇಶದ ಎಲ್ಲಾ ಕಡೆಯಿಂದ ಭಕ್ತರು ಬಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ್ದಾರೆ.

ಇದನ್ನು ಓದಿ: ಬಿಜೆಪಿ-ಜೆಡಿಎಸ್‌ ಸೀಟು ಹಂಚಿಕೆಗೆ ಕ್ಲೈಮ್ಯಾಕ್ಸ್‌.. ದಳಪತಿಗಳ ಜೊತೆ ಹೆಚ್‌ಡಿಕೆ ಮಹತ್ವದ ಸಭೆ; ಪ್ಲಾನ್ ಏನು?

publive-image

ಇನ್ನೂ ಮಾತನ್ನು ಮುಂದುವರೆಸಿದ ಅವರು 48 ದಿನಗಳ ಮಂಡಲ ಉತ್ಸವ ಸಂಭ್ರಮದಿಂದ ಮುಕ್ತವಾಗಿದೆ. ನಿತ್ಯ 3 ಲಕ್ಷ ಮಂದಿ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗಿ ಕನಸು ಈಡೇರಿದೆ. ಈಗ ರಾಮರಾಜ್ಯದ ಕನಸು ಈಡೇರಬೇಕಿದೆ. ರಾಮ ರಾಜ್ಯ ಎಂದರೆ ಸರ್ವ ಸಮೃದ್ದಿ ಅಂಥ ಅರ್ಥ. ಇವತ್ತು ಪ್ರಜಾರಾಜ್ಯ ಇದೆ. ಹಾಗಾಗಿ ಪ್ರಜೆಗಳು ಎಲ್ಲರೂ ಈಗ ರಾಮನಾದ್ರೆ ಸಾಕು. ಮದುವೆ, ಮಹೋತ್ಸವ ಅಂಥ ಕೋಟಿಗಳು ಖರ್ಚು ಮಾಡ್ತೆವೆ ರಾಮನಿಗೆ ಈಗ ಮನೆ ಸಿಕ್ಕಿದೆ. ಇದನ್ನು ಗಮನದಲ್ಲಿಕೊಂಡು ನಾವು ದುಂದುವೆಚ್ಚ ಮಾಡದೇ ಆ ಹಣದಲ್ಲಿ ನಮ್ಮೂರಿನ ಬಡವನಿಗೆ ಮನೆ ಕಟ್ಟಿಕೊಡುವ ಕೆಲಸ ಆಗಬೇಕು. ಇದೇ ದೆಸೆಯಲ್ಲಿ ಬಡವರಿಗೆ ಸಹಾಯ ಮಾಡೋಣ. ಅಯೋಧ್ಯೆಯಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಎರಡು ವರ್ಷ ಬೇಕಾಗುತ್ತದೆ. ರಾಮ ದೇವರ ಸೇವೆಯಲ್ಲಿ ಭಾಗಿಯಾಗಲು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment