/newsfirstlive-kannada/media/post_attachments/wp-content/uploads/2025/07/Mobile-Effect.jpg)
ಈಗ ಯಾರ ಕೈಯಲ್ಲಿ ಫೋನ್​ ಇರೋದಿಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರು ಕೈಯಲ್ಲಿ ಫೋನ್​ ಇರುತ್ತು. ಊಟ ಮಾಡುವಾಗ, ಮಲಗುವಾಗ, ಓದುವಾಗ, ಟೀ ಕುಡಿಯುವಾಗ ಹೀಗೆ ಸಾಕಷ್ಟು ಸಂದರ್ಭದಲ್ಲಿ ಜನರು ಫೋನ್​ ಯೂಸ್​ ಮಾಡುತ್ತಾ ಇರುತ್ತಾರೆ. ಆದ್ರೆ, ಇಲ್ಲಿ ಮೊಬೈಲ್ ಬಳಕೆಯಿಂದ 5 ಸಾವಿರ ಮಕ್ಕಳಿಗೆ ಕನ್ನಡಕ ಬಂದಿದೆ.
/newsfirstlive-kannada/media/post_attachments/wp-content/uploads/2024/02/useing-phone-1.jpg)
ಹೌದು, ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ಮೊಬೈಲ್​ ಅಡಿಕ್ಷನ್ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೊಬೈಲ್‌ನಿಂದ 5 ಸಾವಿರ ಮಕ್ಕಳಿಗೆ ಕನ್ನಡಕ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೃಷ್ಟಿದೋಷ ಪ್ರಕರಣಗಳು ಹೆಚ್ಚಳ ಆಗುತ್ತಿವೆ. ಶಾಲೆಗಳಲ್ಲಿ ಮಕ್ಕಳ ನೇತ್ರ ತಪಾಸಣೆ ವೇಳೆ ಈ ಶಾಕಿಂಗ್ ಸಂಗತಿ ಬೆಳಕಿಗೆ ಬಂದಿದೆ. ಅತಿಯಾದ ಮೊಬೈಲ್ ಬಳಕೆಯಿಂದ ದೃಷ್ಠಿ ದೋಷ ಅಲ್ಲದೇ ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬಿರಲಿದೆ.
/newsfirstlive-kannada/media/post_attachments/wp-content/uploads/2024/02/useing-phone.jpg)
ಮೊಬೈಲ್​ ಗೀಳು ಆರೋಗ್ಯಕ್ಕೆ ಹಾನಿಕಾರಕ!
ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮಕ್ಕಳಲ್ಲಿ ದೃಷ್ಟಿದೋಷ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಜಿಲ್ಲೆಯ 1,106 ಸರ್ಕಾರಿ ಹಾಗೂ 270 ಅನುದಾನಿತ ಮಕ್ಕಳ ನೇತ್ರ ತಪಾಸಣೆ ಮಾಡಲಾಗಿದೆ. ಈ ಮಕ್ಕಳ ನೇತ್ರ ತಪಾಸಣೆ ವೇಳೆ 4,398 ಸರ್ಕಾರ ಹಾಗೂ 660 ಅನುದಾನಿತ ಶಾಲಾ ಮಕ್ಕಳಲ್ಲಿ ದೃಷ್ಠಿದೋಷ ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 6 ಸಾವಿರ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಇದೆ ಎಂದು ಬೆಳಕಿಗೆ ಬಂದಿದೆ.
ಈವರೆಗೆ ದೃಷ್ಠಿದೋಷ ಇರುವ ಶಾಲಾ ಮಕ್ಕಳಿಗೆ 2066 ಕನ್ನಡಕ ವಿತರಣೆ ಮಾಡಲಾಗಿದೆ. 6 ರಿಂದ 16 ವರ್ಷ ವಯಸ್ಸಿನ ಶಾಲಾ ಮಕ್ಕಳಲ್ಲಿ ದೃಷ್ಠಿದೋಷ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೇ ಮೊಬೈಲ್ ಬಳಕೆಯಿಂದ ದೃಷ್ಠಿ ದೋಷ, ಮಾನಸಿಕ ಆರೋಗ್ಯ ಕುಂದುತ್ತಿದೆ. ಮೊಬೈಲ್ ಕಣ್ಣು ಅಷ್ಟೇ ಅಲ್ಲದೇ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಮಕ್ಕಳ ಮೊಬೈಲ್ ಚಟ ಕಡಿಮೆ ಮಾಡಲು ಮುಂದಾಗಿದೆ. ಆರೋಗ್ಯ ಇಲಾಖೆ ವತಿಯಿಂದ ‘ಮನೋಸ್ಥೈರ್ಯ’ ಎನ್ನುವ ಕಾರ್ಯಕ್ರಮ ಆಯೋಚನೆ ಮಾಡಲಾಗಿದೆ. ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ನಿಯಂತ್ರಣ ತರದಿದ್ದರೆ ಘೋರ ಪರಿಣಾಮ ಬಿರುವ ಸಂಭವ ಕೂಡ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us