newsfirstkannada.com

ಫಳಫಳ ಹೊಳೆಯುವ ತ್ವಚೆ ನಿಮ್ಮದಾಗಬೇಕೇ..? ಕಾಂತಿಯುತ ಚರ್ಮಕ್ಕೆ ಯಾವ Vitamin ಬೇಕು ಗೊತ್ತಾ..?

Share :

10-06-2023

    ಗ್ಲೋಯಿಂಗ್‌ ಸ್ಕಿನ್​​ ನಿಮ್ಮದಾಗಲು ಇಲ್ಲಿದೆ ಪರಿಹಾರ

    ನ್ಯಾಚುರಲ್ ಸ್ಕಿನ್​ಗೆ ಮನೆಯಲ್ಲೇ ಮ್ಯಾಜಿಕ್ ಮದ್ದು

    ಚರ್ಮದ ಹೊಳಪಿನ ಗುಟ್ಟಿಗೆ ಕಾರಣ ಇಲ್ಲಿದೆ

ಹೆಣ್ಮಕ್ಕಳಂದ್ರೆ ಸೌಂದರ್ಯ.. ತಾನು ಸುಂದರಿಯಾಗಿ ಕಾಣಬೇಕು ಅಂತಾ ಮೆಡಿಕಲ್​​ನಲ್ಲಿ ಸಿಗುವ ಅದೆಷ್ಟೋ ಕ್ರೀಮ್​ಗಳನ್ನು ಬಳಸುತ್ತಾರೆ. ಕೆಲವ್ರಂತೂ ಆಗಾಗ ವೈದ್ಯರನ್ನು ಸಂಪರ್ಕಿಸಿ ತಮ್ಮ ತ್ವಚೆಯ ಸೌಂದರ್ಯ ವೃದ್ಧಿಸಿಕೊಳ್ಳಲು ಒಂದಿಷ್ಟು ಔಷಧಿಗಳನ್ನು ಪಡೆದುಕೊಂಡು ಬರುತ್ತಾರೆ. ಆದರೆ ನಿಮ್ಮ ತ್ವಚೆಯ ತೇಜಸ್ಸನ್ನು ಯಾವುದೇ ವೈದ್ಯಕೀಯ ಔಷಧಿಗಳನ್ನು ಬಳಸದೆಯೇ ಫಳಫಳನೆ ಹೊಳೆಯುವಂತೆ ಮಾಡಬಹುದು! ಅದುವೇ ನಿಸರ್ಗದತ್ತವಾಗಿ ಸಿಗುವ ಹಣ್ಣು, ಹಂಪಲು ಮತ್ತು ಸೊಪ್ಪುಗಳಿಂದ!! 

ನಿಮ್ಮ ತ್ವಚೆಯ ಕಾಂತಿಗಾಗಿ..

ಹೌದು.. ನಮ್ಮ ಚರ್ಮದ ಹೊಳಪಿಗೆ ಆರೋಗ್ಯಕರ ಪೋಷಕಾಂಶಗಳ ಅಗತ್ಯವಿರುತ್ತದೆ. ಪ್ರತಿಯೊಂದು ಪೋಷಕಾಂಶಗಳು ದೇಹಕ್ಕೆ ಸಿಕ್ಕಾಗ ಮಾತ್ರ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಎಲ್ಲಾ ರೀತಿಯ ವಿಟಮಿನ್​ಗಳು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಒಂದೊಂದು ವಿಟಮಿನ್​ಗಳು ಒಂದೊಂದು ರೀತಿಯಲ್ಲಿ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.

ಅಂದಹಾಗೆ ನಮ್ಮ ಸೌಂದರ್ಯವನ್ನು ಅಳೆಯೋದು ನಮ್ಮ ಚರ್ಚದ ಮೇಲೆ. ಅದು ಕಪ್ಪಾಗಿರಲಿ, ಕಡುಗಪ್ಪಾಗಿರಲಿ, ಬಿಳಿ ಬಣ್ಣದ್ದಾಗಿರಲಿ.. ಬಣ್ಣ ಯಾವುದೇ ಆಗಿದ್ದರೂ ತ್ವಚೆಯ ಹೊಳಪನ್ನು ನಾವು ಹೇಗೆ ಇಟ್ಟುಕೊಳ್ಳುತ್ತೇವೆ ಅನ್ನೋದ್ರ ಮೇಲೆ ನಮ್ಮ ಆರೋಗ್ಯ ಮತ್ತು ಸೌಂದರ್ಯ ನಿಂತಿದೆ. ಈ ಚರ್ಮದ ಹೊಳಪು ಕಾಂತಿಯುವಾಗಿ ಇರಬೇಕು ಅಂದರೆ ನಾವು ಆರೋಗ್ಯಕರವಾಗಿರುವ ಕೆಲವು ತರಕಾರಿ, ಹಣ್ಣು ಹಾಗೂ ಸೊಪ್ಪುಗಳನ್ನು ಸೇವಿಸಲೇಬೇಕು.

ಚರ್ಮದ ಆರೋಗ್ಯಕ್ಕೆ Vitamin K ಗುಟ್ಟು..!

  • ಚರ್ಮದಲ್ಲಿನ ಊತ, ಕೆಂಪಾಗುವಿಕೆಯನ್ನು ಕಮ್ಮಿ ಮಾಡುತ್ತದೆ
  • ಕೈ ಹಾಗೂ ಮೂಳೆಯ ಆರೋಗ್ಯವನ್ನು ಸದಾ ಕಾಪಾಡುತ್ತದೆ
  • ಒಣ ಚರ್ಮವನ್ನು ಕೋಮಲ ತ್ವಚ್ಛೆಯನ್ನಾಗಿಸುತ್ತದೆ
  • ನಿಮ್ಮ ಮೂಳೆಗಳ ಸದೃಢ ಬೆಳವಣಿಗೆಗೆ ಸಹಾಯಕಾರಿ

 ಹೆಚ್ಚು ‘ವಿಟಮಿನ್ ಕೆ’ ಆಹಾರ ಪದಾರ್ಥಗಳು..!..

1. ಕೋಸುಗಡ್ಡೆ: ವಿಟಮಿನ್ ಕೆ ಸಾಮಾನ್ಯವಾಗಿ ಹಸಿರು ಎಲೆಗಳ ತರಕಾರಿಗಳಲ್ಲಿ ಹೆಚ್ಚಾಗಿರುತ್ತದೆ. ಕೋಸುಗಡ್ಡೆಯನ್ನು ಸೇವಿಸುವುದರಿಂದ ಚರ್ಮದ ಉತ್ತಮ ಆರೋಗ್ಯಕ್ಕೆ ಸಹಾಯಕಾರಿ. ಜೊತೆಗೆ ಈ ಕೋಸುಗಡ್ಡೆಯು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.

2. ಪಾಲಕ್ ಸೊಪ್ಪು: ಪಾಲಕ್​ ಸೊಪ್ಪಿನಲ್ಲಿ ‘ವಿಟಮಿನ್ ಕೆ’ ಹೆಚ್ಚಾಗಿರುತ್ತದೆ. ಹೊಳೆಯುವ ಮತ್ತು ಆರೋಗ್ಯಕರ ಚರ್ಮವನ್ನು ಪಡೆಯಲು ಇದು ಸಹಾಯಕಾರಿ. ಪಾಲಕ್​ ಸೊಪ್ಪನ್ನು ತಿನ್ನುವುದರಿಂದ ಚರ್ಮವನ್ನು ಹೈಡ್ರೀಕರಿಸುತ್ತದೆ. ಜೊತೆಗೆ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ತ್ವಚೆಯ ಮೇಲೆ ಕುರುಹುಗಳು ಬಾರದಂತೆ ತಡೆಗಟ್ಟಬಹುದು.

3. ದಾಳಿಂಬೆ ಹಣ್ಣು: ದಾಳಿಂಬೆ ಹಣ್ಣು ಮನುಷ್ಯನಲ್ಲಿರುವ ಹಲವಾರು ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಕೆ ಹೆಚ್ಚಾಗಿರೋದ್ರಿಂದ ಉತ್ತಮ ಆರೋಗ್ಯವನ್ನು ಒದಗಿಸುತ್ತದೆ. ಈ ಹಣ್ಣು ಚರ್ಮಕ್ಕೆ ಬೇಕಾಗಿರುವ ರಕ್ಷಣೆಯನ್ನು ನೀಡುತ್ತದೆ. ದಾಳಿಂಬೆ ರಸವನ್ನು ಹೆಚ್ಚಾಗಿ ಚರ್ಮದ ಆರೈಕೆಯ ಭಾಗವಾಗಿ ಬಳಸುತ್ತಾರೆ.

4. ಕಿವಿ ಹಣ್ಣು: ಕಿವಿ ಹಣ್ಣಿನಲ್ಲಿ ‘ವಿಟಮಿನ್ ಕೆ’ಯ ಯೋಗ್ಯ ಮೂಲವಾಗಿದೆ. ಈ ಕಿವಿ ಹಣ್ಣು ಚರ್ಮದ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ. ಈ ಹಣ್ಣನ್ನು ತಿನ್ನುವುದರಿಂದ ಕಾಲಜನ್ (collagen) ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದರ ಜೊತೆಗೆ ಚರ್ಮದಲ್ಲಿ ಕಾಣಿಸಿಕೊಂಡ ಕಪ್ಪು ಕಲೆಗಳನ್ನು ಕ್ರಮೇಣ ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ಮುಖ್ಯವಾಗಿ ಕಿವಿಯು ಕ್ಯಾನ್ಸರ್ ವಿರೋಧಿ ಪರಿಣಾಮಗಳನ್ನು ಹೊಂದಿರುವ ಸಂಯುಕ್ತಗಳನ್ನು ಸಹ ಒಳಗೊಂಡಿದೆ. ಈ ಹಣ್ಣಿನಲ್ಲಿ ವಿಟಮಿನ್ C ಮತ್ತು E ಕಂಟೆಂಟ್ ಕೂಡ ಇರುತ್ತದೆ.

5. ಡೈರಿ ಉತ್ಪನ್ನಗಳು: ಡೈರಿ ಉತ್ಪನ್ನಗಳಾದ ಹಾಲು ಹಾಗೂ ಮೊಟ್ಟೆಯನ್ನು ತಿನ್ನುವುದರಿಂದ ಚರ್ಮದ ಕಾಂತಿ ಜೊತೆಗೆ ದೇಹಕ್ಕೂ ಒಳ್ಳೆಯ ಜೀವಸತ್ವಗಳನ್ನು ನೀಡುತ್ತದೆ. ಹಾಲನ್ನು ಸೇವಿಸುವುದರಿಂದ ನೇರವಾಗಿ ಚರ್ಮದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಚರ್ಮದ ಹೊಳಪಿಗಾಗಿ ವಿವಿಧ ಕ್ರೀಮ್​ಗಾಗಿ ಆಸ್ಪತ್ರೆ ಸುತ್ತುವ ಬದಲು, ಜೀವಸತ್ವಗಳನ್ನು ಹೊಂದಿರುವ ತರಕಾರಿ, ಸೊಪ್ಪು, ಹಣ್ಣು ಹಂಪಲುಗಳನ್ನು ತಿನ್ನೋದು ಅದೆಷ್ಟೋ ಒಳ್ಳೆಯದು. ನ್ಯಾಚುರಲ್​ ಆಗಿಯೇ ಸೌಂದರ್ಯದಲ್ಲಿ ಮ್ಯಾಜಿಕ್ ಮಾಡಬಹುದು!

ವಿಶೇಷ ವರದಿ: ವೀಣಾ ಗಂಗಾಣಿ, ಡಿಜಿಟಲ್ ಡೆಸ್ಕ್   

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫಳಫಳ ಹೊಳೆಯುವ ತ್ವಚೆ ನಿಮ್ಮದಾಗಬೇಕೇ..? ಕಾಂತಿಯುತ ಚರ್ಮಕ್ಕೆ ಯಾವ Vitamin ಬೇಕು ಗೊತ್ತಾ..?

https://newsfirstlive.com/wp-content/uploads/2023/06/SKIN_CARE.jpg

Load More